ಚಿಕ್ಕಮಗಳೂರು: ಕಾರ್ತಿಕ ಮಾಸಕ್ಕೂ ಮುನ್ನ ಶಬರಿ ಮಾಲೆ ಹಾಕೋದು ಹಲವರ ರೂಢಿಯಾಗಿದೆ. ಅದರಂತೆ ವಿದ್ಯಾರ್ಥಿಯೊಬ್ಬ ಶಬರಿ ಮಾಲೆ ಹಾಕಿ ಕಾಲೇಜಿಗೆ ತೆರಳಿದ್ದಕ್ಕೆ ಕಾಲೇಜಿನಿಂದ ಹೊರ ಹಾಕಿದಂತ ಘಟನೆ ಚಿಕ್ಕಮಗಳೂರಿನ ಎನ್ ಆರ್ ಪುರದ ಬಾಳೆಹೊನ್ನೂರಿನ ಕಡ್ಲೆಮಕ್ಕಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ತಾಲ್ಲೂಕಿನ ಬಾಳೆಹೊನ್ನೂರಿನಲ್ಲಿರುವಂತ ಕಡ್ಲೆಮಕ್ಕಿ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದಂತ ವಿದ್ಯಾರ್ಥಿಯೊಬ್ಬ ಶಬರಿ ಮಾಲೆ ಹಾಕಿ ಕಾಲೇಜಿಗೆ ತೆರಳಿದ್ದನು. ಈ ವೇಳೆ ಕಾಲೇಜು ಆಡಳಿತ ಮಂಡಳಿಯು ಮಾಲೆ ತೆಗೆದು ಒಳಗೆ ಬಾ. ಇಲ್ಲವೇ ಹೊರ ಹೋಗುವಂತೆ ತಿಳಿಸಿದ್ದಾರೆ.
ಇದಷ್ಟೇ ಅಲ್ಲದೇ ಮಾಲೆ ಧರಿಸಿ ಬರುವುದರಿಂದ ಕಾಲೇಜಿನಲ್ಲಿ ಜಾತಿ ಬೇಧ ಮಾಡ್ತೀರ ಎಂಬುದಾಗಿಯೂ ತರಾಟೆಗೆ ತೆಗೆದುಕೊಳ್ಳಲಾಗಿದೆ. ಕಾಲೇಜಿಗೆ ಬರುವುದಾದರೇ ಮಾಲೆ ತೆಗೆದು ಬರುವಂತೆ ತಾಕೀತ ಮಾಡಲಾಗಿದೆ. ಆದರೇ ಮಾಲಾಧಾರಿ ವಿದ್ಯಾರ್ಥಿ ನಾನು ತೆಗೆಯುವುದಿಲ್ಲ ಎಂಬುದಾಗಿ ಹೇಳಿ, ವಾಗ್ವಾದಕ್ಕೆ ಇಳಿದಿದ್ದಾನೆ.
ಈ ವಿಷಯ ತಿಳಿದು ಸ್ಥಳಕ್ಕೆ ಹೋದಂತ ಹಿರಿಯ ಮಾಲಾಧಾರಿಗಳು, ಪೊಲೀಸರು ಆಡಳಿತ ಮಂಡಳಿಯನ್ನು ಮನವೊಲಿಸಿದ್ದಾರೆ. ಆ ಬಳಿಕ ವಿದ್ಯಾರ್ಥಿಯನ್ನು ಕಾಲೇಜು ಒಳಗೆ ಆಡಳಿತ ಮಂಡಳಿಯವರು ಬರೋದಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ.
BREAKING: ಬೆಂಗಳೂರಲ್ಲಿ ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿದ ಆರೋಪಿ ಅರೆಸ್ಟ್
ALERT : ಈ `ಪಾಸ್ ವರ್ಡ್’ಗಳನ್ನು ಬಳಸಿದ್ರೆ ನಿಮ್ಮ `ಡೇಟಾ ಲೀಕ್’ ಆಗಬಹುದು ಎಚ್ಚರ.!








