ನವದೆಹಲಿ: ಶಾಂಘೈ ಸಹಕಾರ ಸಂಸ್ಥೆಯ ಶೃಂಗಸಭೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಬಹು ಚರ್ಚಿತ ಚೀನಾ ಭೇಟಿ ಈಗ ನಮ್ಮ ಮುಂದಿವೆ. ಭೌಗೋಳಿಕ ರಾಜಕೀಯ ಮತ್ತು ದ್ವಿಪಕ್ಷೀಯ ನಿರೀಕ್ಷೆಗಳ ಸಾಮಾನ್ಯ ವಿಶ್ಲೇಷಣೆಗಳನ್ನೂ ಮೀರಿ ಚೀನಾದ ಸಾಮಾಜಿಕ ಮಾಧ್ಯಮ ಬಳಕೆದಾರರಿಗೆ ಮೋದಿ ಅವರ ದೈಹಿಕ ಭಂಗಿ ಅಥವಾ ನಡವಳಿಕೆ(ಬಾಡಿ ಲಾಂಗ್ವೇಜ್), ನೋಟ, ಸಾಂಕೇತಿಕ ಸನ್ನೆಗಳು ಮತ್ತು ಅನಿವಾರ್ಯವಾಗಿ ಮೀಮ್ಸ್‌ಗಳಿಂದ ಹೆಚ್ಚು ಆಕರ್ಷಿತರಾದಂತೆ ಕಂಡುಬಂದರು. ಕೆಲವು ವ್ಯಾಖ್ಯಾನಗಳು ಭೇಟಿಯ ಸೌಹಾರ್ದಯುತ ಧಾಟಿಯನ್ನು ಒತ್ತಿಹೇಳಿದವು, ಆದರೆ ಅದರಲ್ಲಿ ಹೆಚ್ಚಿನವು ಲಘುಧಾಟಿಯಲ್ಲಿವೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಗುರಿಯಾಗಿಟ್ಟುಕೊಂಡು ಆಶ್ಚರ್ಯಕರ ಸಂಖ್ಯೆಯ ಜೋಕ್‌ಗಳನ್ನು ಮಾಡಲಾಗಿದೆ.
ಒಂದು ವೇಳೆ ಶಾಂಘೈ ಸಹಕಾರ ಸಂಸ್ಥೆ(ಎಸ್ ಸಿಒ) ಶೃಂಗಸಭೆ ರಾಜತಾಂತ್ರಿಕ ಪ್ರದರ್ಶನವಾಗಿದ್ದರೆ, ಆಗ ಮೋದಿ ಅವರು ಆನ್ ಲೈನ್ ನನ್ನು ಸೆಳೆದಿರುವ ಪರಿಯನ್ನು ಗಮನಿಸಿದರೆ ನಿಸ್ಸಂದೇಹವಾಗಿ ಮುಂಚೂಣಿ ನಟರಾಗಿರುತ್ತಿದ್ದರು, “ದೂರದ ಸಂಬಂಧಿ ಹತ್ತಿರದ ನೆರೆಹೊರೆಯವರಂತೆ ಒಳ್ಳೆಯವರಲ್ಲ” ಎಂದು ರೆನ್ಮಿನ್ ವಿಶ್ವವಿದ್ಯಾಲಯದ ಚೊಂಗ್ಯಾಂಗ್ ಇನ್‌ಸ್ಟಿಟ್ಯೂಟ್ ಫಾರ್ ಫೈನಾನ್ಷಿಯಲ್ ಸ್ಟಡೀಸ್‌ನ ಸಂಶೋಧಕ ಲಿಯು ಯಿಂಗ್ ಹೇಳಿದ್ದಾರೆ.
ನರೇಂದ್ರ ಮೋದಿ ಅವರಿಗಾಗಿ ಹಾಸಿದ್ದ ಕೆಂಪು ಹಾಸು (ರೆಡ್ ಕಾರ್ಪೆಟ್) ಬಗ್ಗೆ ಹೆಚ್ಚಿನ ಚರ್ಚೆ ನಡೆಯಿತು. “ಮೋದಿ ಅವರ ಚೀನಾ ಭೇಟಿಯ ಅತ್ಯಂತ ಹೃದಯಸ್ಪರ್ಶಿ ಕ್ಷಣವೆಂದರೆ ಅವರಿಗೆ ನೀಡಿದ್ದ ಅದ್ಧೂರಿ ಭವ್ಯ ಸ್ವಾಗತ. ಅವರು ಆಗಮಿಸಿದ ತಕ್ಷಣ ಅವರನ್ನು ಸಂಭ್ರಮದಿಂದ ಸ್ವಾಗತಿಸಲಾಯಿತು. ಉದಕ್ಕೂ ನೆಲದ ಮೇಲೆ ಕೆಂಪು ಹಾಸು ಹಾಸಲಾಯಿತು, ಗೌರವಾನ್ವಿತ ಸಿಬ್ಬಂದಿ ಪರಿಪೂರ್ಣ ಜಾಗದಲ್ಲಿ ನಿಂತರು ಮತ್ತು ನೃತ್ಯ ಪ್ರದರ್ಶನವು ವಿಶೇಷವಾಗಿ ಉತ್ಸಾಹಭರಿತವಾಗಿತ್ತು” ಎಂದು ಬೈದು ಅವರ ವ್ಯಾಖ್ಯಾನದಲ್ಲಿ ಹೇಳಲಾಗಿದೆ.
ಕೈ ಕೈ ಹಿಡಿದು ಕಾರು ಓಡಿಸಿದ ಮೋದಿ–ಪುಟಿನ್
ಚೀನಾದ ಅಂತರ್ಜಾಲ ಬಳಕೆದಾರರು ನರೇಂದ್ರ ಮೋದಿ ಅವರ ಪ್ರತಿಯೊಂದು ನಡೆಯನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದರು, ಆದರೆ ನಿಜವಾದ ವೈರಲ್ ಕ್ಷಣ ಬಂದಿದ್ದು “ನರೇಂದ್ರ ಮೋದಿ ಟಿಯಾಂಜಿನ್‌ನಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಕೈ ಕೈ ಹಿಡಿದುಕೊಂಡಿದ್ದು ಮತ್ತು ನಂತರ ತಮ್ಮ ಔರಸ್ ಸೆನಾಟ್ ಲಿಮೋಸಿನ್‌ನಲ್ಲಿ ಸವಾರಿ ಮಾಡಿದ’’ ನೋಟದಿಂದ. ಈ ದೃಶ್ಯಗಳು WeChat ಮತ್ತು Weibo ನಂತಹ ವೇದಿಕೆಗಳಲ್ಲಿ ಬೆಳಗಿದವು, #SCO_Summit_Modi_held_Putin’s_hand_and_entered_the_hall ಮತ್ತು #Modi_takes_Putin’s_car ನಂತಹ ಹ್ಯಾಶ್‌ಟ್ಯಾಗ್‌ಗಳನ್ನು ಹುಟ್ಟುಹಾಕಿದವು, ಪ್ರತಿಯೊಂದೂ ಲಕ್ಷಾಂತರ ವೀಕ್ಷಕರನ್ನು ಆಕರ್ಷಿಸಿತು.
“ಅವರಿಬ್ಬರೂ ಸ್ಥಳಕ್ಕೆ ಒಟ್ಟಿಗೆ ಆಗಮಸಿದ್ದೇ ಅಲ್ಲದೆ, ಸಮ್ಮೇಳನ ಸಭಾಂಗಣದಲ್ಲಿ ಒಬ್ಬರನ್ನೊಬ್ಬರು ಬಿಟ್ಟಿರಲಿಲ್ಲ’’ ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ. ವೈಬೋದಲ್ಲಿ ಹಲವರು “ಮೋದಿ-ಪುಟಿನ್ ನಡುವಿನ ಈ ಸ್ನೇಹವನ್ನು ನೋಡಿದರೆ ಟ್ರಂಪ್‌ಗೆ ಹೇಗನಿಸುತ್ತದೆ?” ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಗ್ಲೋಬಲ್ ಟೈಮ್ಸ್‌ನ ಮಾಜಿ ಪ್ರಧಾನ ಸಂಪಾದಕ ಹು ಕ್ಸಿಜಿನ್ ಕೂಡ ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು “ಟ್ರಂಪ್ ಸಾರ್ವಜನಿಕವಾಗಿ ಸೌಹಾರ್ದತೆಯ ಪ್ರದರ್ಶನದಿಂದ ಸಿಟ್ಟಾಗಿರಬಹುದು’’ ಎಂದು ಹೇಳಿದ್ದಾರೆ, ಇದು ಮೀಮ್‌ನ ಬೆಂಕಿಯನ್ನು ಮತ್ತಷ್ಟು ಹೆಚ್ಚಳಕ್ಕೆ ಕಾರಣವಾಗಿದೆ.
ಇತರರು ಈ ಸಾಂಕೇತಿಕತೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರು. “ಮೋದಿ ತಮ್ಮ ಅಧಿಕೃತ ಕಾರನ್ನು ಬಿಟ್ಟು ರಷ್ಯಾದ ಶಸ್ತ್ರಸಜ್ಜಿತ ಔರಸ್ ಸೆಡಾನ್‌ನಲ್ಲಿ ಪುಟಿನ್ ಅವರೊಂದಿಗೆ ಸವಾರಿ ಮಾಡಿದರು. ಇದು ಕೇವಲ ಪಯಣವಾಗಿರಲಿಲ್ಲ, ಇದು ಸೂಕ್ಷ್ಮವಾಗಿ ವ್ಯವಸ್ಥೆ ಮಾಡಲಾಗಿದ್ದ ರಾಜತಾಂತ್ರಿಕ ಸೂಚಕದಂದಿತಿತ್ತು. ಭಾರತ-ರಷ್ಯಾ ಸಾಮೀಪ್ಯವನ್ನು ಎತ್ತಿ ತೋರಿಸಲು ಅವರಿಬ್ಬರ ಸಾಮೀಪ್ಯ ಮತ್ತು ನೋಟವೇ ಸಾಕಿತ್ತು’’ ಎಂದು ವೀಬೊ ಪೋಸ್ಟ್ ವಿವರಿಸಿದೆ.
ಮತ್ತೊಬ್ಬ ಬಳಕೆದಾರರು “ಇದು ರಷ್ಯಾ-ಭಾರತ ಸಂಬಂಧಗಳಲ್ಲಿ ಒಂದು ಮೈಲಿಗಲ್ಲಿನ ಕ್ಷಣವಾಗಿದ್ದು, ಎಸ್ ಸಿಒ ದಲ್ಲಿ ಬಹುಪಕ್ಷೀಯ ಸಂವಹನಗಳ ಮೇಲೆ ಹೊಸ ಬೆಳಕು ಚೆಲ್ಲುತ್ತದೆ’’ ಎಂದು ಹೇಳಿದ್ದಾರೆ,
ನಡೆ–ನುಡಿ ಪರಿಶೀಲನೆ
ಸಾಮಾಜಿಕ ಮಾಧ್ಯಮ ಬಳಕೆದಾರರು ಕೈ ಹಿಡಿದು ಜೋಕ್ ಮಾಡುವುದಷ್ಟಕ್ಕೆ ಸುಮ್ಮನಾಗಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ನಡೆ ನುಡಿ, ದೈಹಿಕ ಭಂಗಿ (ಬಾಡಿ ಲಾಂಗ್ವೇಜ್) ಆನ್‌ಲೈನ್ ಚರ್ಚೆಯ ಮತ್ತೊಂದು ಕೇಂದ್ರಬಿಂದುವಾಯಿತು. ಟಿಕ್‌ಟಾಕ್‌ನ ಚೀನೀ ಆವೃತ್ತಿಯಾದ ಡೌಯಿನ್‌ನಲ್ಲಿನ ಅನೇಕ ವೀಡಿಯೊಗಳು, ಮೋದಿ ಅವರು ತಮ್ಮ ಚೀನಾ ಭೇಟಿಯ ಸಮಯದಲ್ಲಿ ಹೇಗೆ ನಗುತ್ತಿದ್ದರು ಮತ್ತು ಉತ್ಸಾಹಭರಿತ ಮತ್ತು ಸೌಹಾರ್ದಯುತವಾಗಿ ಕಾಣಿಸಿಕೊಂಡರು ಎಂಬುದನ್ನು ಎತ್ತಿ ತೋರಿಸಿದವು. ಹಲವಾರು ವೀಡಿಯೊಗಳಲ್ಲಿ ಪುಟಿನ್ ಅವರೊಂದಿಗೆ ಕೈ ಕೈ ಹಿಡಿದುಕೊಂಡಿವುದು, ಭಾರತ ಮತ್ತು ರಷ್ಯಾ ನಡುವಿನ ಮುರಿಯಲಾಗದ ಬಾಂಧವ್ಯ ಮತ್ತು ಟ್ರಂಪ್ ಅವರ ಕಿರಿಕಿರಿಯನ್ನು ಸೂಚಿಸಲು ಟ್ರಂಪ್ ವೀಡಿಯೊ ತುಣುಕುಗಳನ್ನು ಸಂಯೋಜಿಸಲಾಗಿತ್ತು.
ಇತರ ವೀಡಿಯೊಗಳು ನರೇಂದ್ರ ಮೋದಿ ಆತ್ಮವಿಶ್ವಾಸದಿಂದ ನಡೆಯುವುದನ್ನು ತೋರಿಸಿದವು, ವ್ಯಾಖ್ಯಾನವು ಅವರನ್ನು “ಕಠಿಣ” (ವ್ಯಕ್ತಿತ್ವ) ಎಂದು ನಿರೂಪಿಸಿತು ಮತ್ತು ಭಾರತವು ಟ್ರಂಪ್ ಅವರ ಸುಂಕಗಳಿಗೆ ದೃಢವಾಗಿ ಪ್ರತಿಕ್ರಿಯಿಸಿದೆ ಎಂದು ಸೂಚಿಸುತ್ತದೆ. ಕ್ವೊರಾದ ಚೀನೀ ಆವೃತ್ತಿಯಾದ ಝಿಹು ಕುರಿತು, ಒಂದು ಪೋಸ್ಟ್ ನಲ್ಲಿ ” ಮೋದಿ ಮತ್ತು ಟ್ರಂಪ್ ಇಬ್ಬರೂ ಅವರು ಮೊದಲು ಎಷ್ಟು ಸ್ನೇಹತರಾಗಿದ್ದರೋ, ಈಗ ಅಷ್ಟೇ ಪರಸ್ಪರ ಕೋಪಗೊಂಡಿದ್ದಾರೆ’’ ಎಂದು ಹೇಳಲಾಗಿತ್ತು.
ಬಿಲಿಬಿಲಿ ಎಂಬ ವೀಡಿಯೊ ವೇದಿಕೆಯಲ್ಲಿ, ಜನಪ್ರಿಯ ಪೋಸ್ಟ್‌ನಲ್ಲಿ ಹೀಗೆ ಬರೆಯಲಾಗಿದೆ: “ಮೋದಿ ಟ್ರಂಪ್ ಅವರ ಗಮನವನ್ನು ಕದ್ದಿದ್ದಾರೆ. ಅವರ ಟಿಯಾಂಜಿನ್ ಪ್ರವಾಸವು ಅವರು ಸಾಕಷ್ಟು ಗಮನ ಸೆಳೆಯುವಂತೆ ಮಾಡಿದೆ. ಟ್ರಂಪ್ ಕೂಡ ಬಂದಿದ್ದರೆ, ಅವರು ಬಹುಶಃ ಸಾಕಷ್ಟು ಅನುಯಾಯಿಗಳನ್ನು ಗಳಿಸುತ್ತಿದ್ದರು, ಅವರ ನೃತ್ಯ ಭಂಗಿಗಳು ಖಂಡಿತವಾಗಿಯೂ ಸಾಕಷ್ಟು ಅಭಿಮಾನಿಗಳನ್ನು ಆಕರ್ಷಿಸುತ್ತಿದ್ದವು” ಎಂದು ಹೇಳಲಾಗಿದೆ. ಚೀನೀ ಶೈಲಿಯ ಶ್ರೀಮಂತ ನಾಟಕದಲ್ಲಿ ಮೋದಿ ಮತ್ತು ಟ್ರಂಪ್ ಅವರನ್ನು ನಟಿಸುವ ಕೃತಕ ಬುದ್ಧಿಮತ್ತೆ ಸೃಷ್ಟಿಸಿದ ವೀಡಿಯೊ ಕೂಡ ಇತ್ತು, ಅಲ್ಲಿ ಮೋದಿ. ಟ್ರಂಪ್ ಅವರನ್ನು ಎದುರಿಸಿ ಗೆಲ್ಲುವುದನ್ನು ತೋರಿಸಲಾಗಿದೆ.
ಎಲ್ಲಾ ವ್ಯಾಖ್ಯಾನಗಳು ಹೊಗಳಿಕೆಯದ್ದಾಗಿರಲಿಲ್ಲ. “ಪುಟಿನ್ ಅವರಿಗೆ ಮೋದಿ ಅವರ ಉತ್ಸಾಹಭರಿತ ಪ್ರತಿಕ್ರಿಯೆಯು ಅವರ ದೌರ್ಬಲ್ಯಗಳನ್ನು ಬಹಿರಂಗಪಡಿಸಿತು. ಸಣ್ಣ ದೇಶವು ಸಣ್ಣ ದೇಶವಾಗಿದೆ; ಅದು ಗಾತ್ರದ ಬಗ್ಗೆ ಅಲ್ಲ ಆದರೆ ಶಾಂತತೆಯ ಬಗ್ಗೆ. ಅಮೆರಿಕ ಮತ್ತು ಪಶ್ಚಿಮ ದೇಶಗಳು ಸಂತೋಷಪಡಬೇಕು, ಭಾರತವು ಅಂತಿಮವಾಗಿ ಅವರಿಗೆ ಬಾಗುತ್ತದೆ, ”ಎಂದು ಜನಪ್ರಿಯ ವೀಬೊ ಪೋಸ್ಟ್‌ನಲ್ಲಿ ಓದಲಾಗಿದೆ. ಆದರೂ ಅಂತಹ ಟೀಕೆಗಳು ಕಡಿಮೆ ಮತ್ತು ಅವು ಸಾಕಷ್ಟು ದೂರದಲ್ಲಿದ್ದವು. “ಮೋದಿ ಅವರ ಚೀನಾ ಭೇಟಿ ಅವರು ಹಲವು ವರ್ಷಗಳಲ್ಲಿ ಹೊಂದಿದ್ದಕ್ಕಿಂತ ಹೆಚ್ಚಿನ ಸಂತೋಷದಾಯಕವಾಗಿತ್ತು” ಎಂದು ವ್ಯಾಪಕವಾಗಿ ಹಂಚಿಕೊಳ್ಳಲಾಗಿರುವ ಪ್ರತಿವಾದಲ್ಲಿ ಹೇಳಲಾಗಿದೆ.
ಅಪರೂಪದ ಸಕಾರಾತ್ಮಕ ಬೆಳಕು
ಚೀನಾದಲ್ಲಿ ಆನ್‌ಲೈನ್‌ನಲ್ಲಿ ಬಂದ ಹೆಚ್ಚಿನ ವ್ಯಾಖ್ಯಾನಗಳು, ಎಸ್ ಸಿಒ ಶೃಂಗಸಭೆಯಲ್ಲಿ ನರೇಂದ್ರ ಮೋದಿ ಇತರ ನಾಯಕರನ್ನು ಮೀರಿಸಿದ್ದರು ಮತ್ತು ಭಾರತದ ಪಾತ್ರ ಬದಲಾಗುತ್ತಿದೆ ಎಂದು ಸೂಚಿಸಿದವು. ಅಸಾಮಾನ್ಯವಾಗಿ ಅನೇಕ ಚಿತ್ರಗಳು ನರೇಂದ್ರ ಮೋದಿ ಅವರನ್ನು ಸಕಾರಾತ್ಮಕ ಬೆಳಕಿನಲ್ಲಿ ಚಿತ್ರಿಸಿವೆ, ಅವರು ಅಮೆರಿಕವನ್ನು ಎದುರಿಸುತ್ತಿದ್ದಾರೆ, ಚೀನಾದೊಂದಿಗಿನ ಸಂಬಂಧಗಳನ್ನು ತ್ವರಿತವಾಗಿ ಸರಿಪಡಿಸುತ್ತಿದ್ದಾರೆ ಮತ್ತು ರಷ್ಯಾಕ್ಕೆ ಧೈರ್ಯ ತುಂಬುತ್ತಿದ್ದಾರೆಂದು ತೋರಿಸಿವೆ. ಇತ್ತೀಚಿನ ವರ್ಷಗಳಲ್ಲಿ ಭಾರತದ ಇಂತಹ ಸಕಾರಾತ್ಮಕ ಚಿತ್ರಣಗಳು ಕಾಣುವುದು ಅಪರೂಪವಾಗಿತ್ತು.
ಇದರ ಹಿಂದಿನ ತಾರ್ಕಿಕತೆ ಸರಳವಾಗಿದೆ: ಇದೀಗ ಅಮೆರಿಕ ದೊಡ್ಡ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಚೀನಾದ ಸಾಮಾಜಿಕ ಮಾಧ್ಯಮಗಳು, ಭಾರತ-ಅಮೆರಿಕ ಬಿರುಕನ್ನು ಮತ್ತಷ್ಟು ವರ್ಧಿಸಲು, ಭಾರತ-ರಷ್ಯಾ ಸೌಹಾರ್ದತೆ ಸಂಬಂಧವನ್ನು ಮತ್ತಷ್ಟು ಸಂಭ್ರಮಿಸಲು ಮತ್ತು ಭಾರತ-ಚೀನಾ ಸಂಬಂಧಗಳನ್ನು ಸ್ಥಿರಗೊಳಿಸುವ ಗ್ರಹಿಕೆಯನ್ನು ಅಳವಡಿಸಿಕೊಳ್ಳಲು ಉತ್ಸುಕವಾಗಿವೆ.
ಲೇಖಕರು: ಸನಾ ಹಶ್ಮಿ
ಸೆ.13 ಹಾಗೂ 14 ರಂದು ಗಗನಚುಕ್ಕಿ ಜಲಪಾತೋತ್ಸವ: ಶಾಸಕ ಪಿ.ಎಂ.ನರೇಂದ್ರಸ್ವಾಮಿ