ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಇನ್ನೂ ಸರಿಯಾಗಿ ಕಾಲಿಟ್ಟಿಲ್ಲ, ಬರಗಾಲ ಛಾಯೆಯಿಂದ ಹೊರ ಬರುವುದಕ್ಕೆ ಇನ್ನೂ ಹಲವು ದಿನಗಳು ಬೇಕಾಗಿದ್ದು, ಒಂದು ವೇಳೆ ಮಳೆ ಸಮಯಕ್ಕೆ ಸರಿಯಾಗಿ ಬಾರದೇ ಹೋದರೆ ಇಡೀ ಆರ್ಥ ವ್ಯವಸ್ಥೆ ಮೇಲೆ ಗಂಭಿರವಾದ ಪರಿಣಾಮ ಬೀರುವುದು ಸುಳ್ಳಲ್ಲ.
ಈ ನಡುವೆ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಟೊಮೆಟೊ ಸೇರಿದಂತೆ ಕಾಯಿಪಲ್ಲೆ, ಹಸಿರುಪಲ್ಲೆಗಳ ದರಗಳು ಹೆಚ್ಚಳವಾಗುತ್ತಿದ್ದು, ಬೆಲೆ ಕೇಳಿಸಿಕೊಳ್ಳುವ ಗ್ರಾಹಕ ತಮ್ಮಹಣಕಾಸಿನ ಸ್ಥಿತಿಯನ್ನು ಎರಡು ಎರಡು ಬಾರಿ ಯೋಚನೆ ಮಾಡಿ ಯಿಪಲ್ಲೆ, ಹಸಿರುಪಲ್ಲೆಗಳನ್ನು ಕೊಂಡುಕೊಳ್ಳುತ್ತಿದ್ದಾರೆ. ಕಳೆದ ವಾರವಷ್ಟೆ ಕೆಜಿಗೆ 50 ರೂ.ಗೆ ದೊರೆಯುತ್ತಿದ್ದ ಟೊಮೆಟೊ, ಈಗ ಏಕಾಏಕಿ 100 ರೂ. ಗಡಿ ದಾಟಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬಿದಿದ್ದೆ. ಇವೆಲ್ಲದರ ನಡುವೆ ಶನಿವಾರದಿಂದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯೂ ಹೆಚ್ಚಳ ಕಂಡಿದ್ದು, ಇದು ಕೂಡ ತರಕಾರಿಗಳ, ದಿನಸಿ ವಸ್ತುಗಳ ಬೆಲೆಯಲ್ಲಿನ ಹೆಚ್ಚಳಕ್ಕೆ ಕಾರಣವಾಗಬಹುದು ಎನ್ನಲಾಗಿದೆ.