ಬೆಂಗಳೂರು: ನಗರದಲ್ಲಿನ ಪ್ರತಿಷ್ಠಿತ ಕ್ರಿಪ್ಸೋ ಕರೆನ್ಸಿ ಕಂಪನಿಯಾಗಿರುವಂತ ನೆಬಿಲೋ ಟೊಕ್ನಾಲಜೀಸ್ ಹ್ಯಾಕ್ ಮಾಡಲಾಗಿದೆ. ಹ್ಯಾಕ್ ಮಾಡಿದಂತ ಸೈಬರ್ ವಂಚಕರು ಬರೋಬ್ಬರಿ 387 ಕೋಟಿ ಹಣವನ್ನು ದೋಚಿದ್ದಾರೆ.
ಬೆಂಗಳೂರಿನ ವೈಟ್ ಫೀಲ್ಡ್ ಸಿಇಎನ್ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರತಿಷ್ಠಿತ ಕ್ರಿಪ್ಸೋ ಕರೆನ್ಸಿ ಕಂಪನಿಯ ವೆಬ್ ಸೈಟ್ ಹ್ಯಾಕ್ ಮಾಡಲಾಗಿದೆ. ಆ ಬಳಿಕ ಸೈಬರ್ ವಂಚಕರು 378 ಕೋಟಿ ಹಣವನ್ನು ಕದ್ದಿರುವುದಾಗಿ ತಿಳಿದು ಬಂದಿದೆ.
ಈ ಸಂಬಂಧ ಕಂಪನಿಯು ಬೆಂಗಳೂರಿನ ವೈಟ್ ಫೀಲ್ಡ್ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದೆ. ಈ ದೂರು ಆಧರಿಸಿ ನೆಬಿಲೊ ಟೆಕ್ನಾಲಜೀಸ್ ಕಂಪನಿಯ ಸಿಬ್ಬಂದಿ ರಾಹುಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ರಾಹುಲ್ ನಿಂದ ಲ್ಯಾಪ್ ಟಾಪ್ ವಶಕ್ಕೆ ಪಡೆದು ವೈಟ್ ಫೀಲ್ಡ್ ಸೈಬರ್ ಕ್ರೈಂ ಪೊಲೀಸರು ವಿಚಾರಣೆ, ತನಿಖೆಯನ್ನು ನಡೆಸುತ್ತಿದ್ದಾರೆ. ಇದು ಕರ್ನಾಟಕದಲ್ಲೇ ನಡೆದಿರುವ ಅತಿದೊಡ್ಡ ಸೈಬರ್ ವಂಚನೆ ಪ್ರಕರಣವಾಗಿದೆ.
ರಾತ್ರಿ 2.37ಕ್ಕೆ ಕಂಪನಿ ವ್ಯಾಲೆಟ್ ನಿಂದ 1USDT ವರ್ಗಾವಣೆ. ಇನ್ನೊಂದು ವ್ಯಾಲೆಟ್ ಗೆ 1USDT ವರ್ಗಾಯಿಸಿದ್ದ ಕಂಪನಿ. ಬಳಿಕ ಬೆಳಗ್ಗೆ 9.40ಕ್ಕೆ ಮತ್ತೆ ಸರ್ವರ್ ಗೆ ಸೈಬರ್ ವಂಚಕ ಎಂಟ್ರಿ. ಈ ವೇಳೆ 378 ಕೋಟಿ ಹಣ ಹ್ಯಾಕ್ ಮಾಡಿ ಸೈಬರ್ ಕಳ್ಳರು ದೋಚಿದ್ದಾರೆ. ಹಣ ದೋಚಿ ವಂಚನೆ ಬಗ್ಗೆ ಆಂತರಿಕ ತನಿಖೆ ನಡೆಸಿದ್ದ ಕಂಪನಿ. ಲ್ಯಾಪ್ ಟಾಪ್ ನಲ್ಲಿ ಕೆಲಸ ಮಾಡಿ 15 ಲಕ್ಷ ಹಣ ಪಡೆದಿದ್ದ ರಾಹುಲ್. ಪಾರ್ಟ್ ಟೈಮ್ ಕೆಲಸ ಮಾಡುತ್ತಿದ್ದ ರಾಹುಲ್ ಲ್ಯಾಪ್ ಟಾಪ್ ಪರಿಶೀಲನೆ. ರಾಹುಲ್ ಬಳಸುತ್ತಿದ್ದ ಲ್ಯಾಪ್ ಟಾಪ್ ನಲ್ಲಿ ವಂಚನೆ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ರಾಹುಲ್ ಲ್ಯಾಪ್ ಟಾಪ್ ಬಳಸಿ ಹಣ ದೋಚಿದ್ದ ಸೈಬರ್ ಕಳ್ಳರು. ಈ ವೇಳೆ ಒಟ್ಟು 44 ಮಿಲಿಯನ್ ಡಾಲರ್ ವಂಚನೆ ಆಗಿರುವುದು ಪತ್ತೆಯಾಗಿತ್ತು. ಈ ಪ್ರಕರಣ ಸಂಬಂಧ ರಾಹುಲ್ ನನ್ನು ಸೆನ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಅಂದಹಾಗೇ ನೆಬಿಲೊ ಟೆಕ್ನಾಲಜಿಸ್ ಬೆಂಗಳೂರಲ್ಲಿ ಕ್ರಿಪ್ಸೋ ಕರೆನ್ಸಿ ಎಕ್ಸ್ ಚೇಂಜ್ ಮಾಡುವಂತ ಕಂಪನಿಯಾಗಿದೆ. ಇಂತಹ ಕಂಪನಿಯನ್ನೇ ಹ್ಯಾಕ್ ಮಾಡಿರುವಂತ ಸೈಬರ್ ಕಳ್ಳರು 378 ಕೋಟಿ ದೋಚಿದ್ದಾರೆ.
BREAKING: ಅಲಾಸ್ಕಾ, ಹವಾಯಿಯಲ್ಲಿ ಸುನಾಮಿ: 10 ಅಡಿ ಎತ್ತರದ ಅಲೆಗಳ ಅಬ್ಬರ !
ಆ.3ಕ್ಕೆ ಸಾಗರದಲ್ಲಿ ‘ಎಸ್.ವೆಂಕಟರಮಣ ಆಚಾರ್ ಪ್ರಾಮಾಣಿಕ ಸರ್ಕಾರಿ ಸೇವಾ ಪ್ರಶಸ್ತಿ’ ಪ್ರದಾನ: ಮ.ಸ.ನಂಜುಂಡಸ್ವಾಮಿ