ಲಂಡನ್: ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಭಾನುವಾರ ಲಂಡನ್‌ನ ಬಕಿಂಗ್‌ಹ್ಯಾಮ್ ಅರಮನೆ ಬಳಿಯ ಲ್ಯಾಂಕಾಸ್ಟರ್ ಹೌಸ್‌ಗೆ ಭೇಟಿ ನೀಡಿ ಬ್ರಿಟನ್‌ ರಾಣಿ ಎಲಿಜಬೆತ್ II (Queen Elizabeth II)ಅವರ ಅಂತಿಮ ದರ್ಶನ ಪಡೆದಿದ್ದಾರೆ. ಈ ವೇಳೆ, ಸಂತಾಪ ಸೂಚಕ ಪುಸ್ತಕಕ್ಕೆ ಸಹಿ ಹಾಕುವ ಮೂಲಕ ಅವರ ಹಾಗೂ ಭಾರತದ ಜನರ ಪರವಾಗಿ ಅಗಲಿದ ಆತ್ಮಕ್ಕೆ ಶ್ರದ್ಧಾಂಜಲಿ ಅರ್ಪಿಸಿದರು.

“ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಲಂಡನ್‌ನ ಲ್ಯಾಂಕಾಸ್ಟರ್ ಹೌಸ್‌ನಲ್ಲಿ ರಾಣಿ ಎಲಿಜಬೆತ್ II ರ ನೆನಪಿಗಾಗಿ ಸಂತಾಪ ಪುಸ್ತಕಕ್ಕೆ ಸಹಿ ಹಾಕಿ ಗೌರವ ಸಲ್ಲಿಸಿದ್ದಾರೆ” ಎಂದು ರಾಷ್ಟ್ರಪತಿ ಭವನ ಟ್ವೀಟ್ ಮಾಡಿದೆ.

ಮೂರು ದಿನಗಳ ಭೇಟಿಗಾಗಿ ಲಂಡನ್‌ನಲ್ಲಿರುವ ಮುರ್ಮು ಅವರು ಇಂದು ಎಲಿಜಬೆತ್ II ರ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳಲಿದ್ದಾರೆ.

ಸೆಪ್ಟೆಂಬರ್ 8 ರಂದು ಸ್ಕಾಟ್ಲೆಂಡ್‌ನಲ್ಲಿ ನಿಧನರಾದ ಎಲಿಜಬೆತ್ II ರ ನೆನಪಿಗಾಗಿ ಸಂತಾಪ ಸೂಚಿಸುವ ಪುಸ್ತಕಕ್ಕೆ ಸಹಿ ಹಾಕಲು ಭೇಟಿ ನೀಡುವ ವಿಶ್ವ ನಾಯಕರು ಲಂಡನ್‌ನ ಲ್ಯಾಂಕಾಸ್ಟರ್ ಹೌಸ್‌ಗೆ ಬರುತ್ತಾರೆ. ವಿಶ್ವದ ಸುಮಾರು 500 ನಾಯಕರು ಮತ್ತು ವಿಶ್ವಾದ್ಯಂತ ರಾಜಮನೆತನದ ಸದಸ್ಯರು ಅಬ್ಬೆಯಲ್ಲಿ ನಡೆಯಲಿರುವ ರಾಣಿಯ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಲಿದ್ದಾರೆ.

SHOCKING NEWS: ಅಕ್ರಮ ಸಂಬಂಧ: ಸರಸಕ್ಕೆಂದು ಬಂದವನ ಮರ್ಮಾಂಗವನ್ನೇ ಕತ್ತರಿಸಿದ ಪ್ರಿಯತಮೆ

BIGG NEWS : ಶೀಘ್ರವೇ ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ 15 ಸಾವಿರ ಹುದ್ದೆಗಳ ಭರ್ತಿ : ಸಿಎಂ ಬೊಮ್ಮಾಯಿ

BIG NEWS : ರಾಯಚೂರಿನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋದ ವೇಳೆ ಘೋರ ದುರಂತ : ಕಾಲುವೆಗೆ ಬಿದ್ದು ಇಬ್ಬರು ವಿದ್ಯಾರ್ಥಿಗಳು ಸಾವು

Share.
Exit mobile version