ನವದೆಹಲಿ: ಇಂದು ಮಧ್ಯಾಹ್ನ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿಯಾಗಿದ್ದಂತ ಮೋದಿಯವರು ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿ್ದದರು. ಅಲ್ಲದೇ ಕೇಂದ್ರ ಸಚಿವ ಸಂಪುಟ ವಿಸರ್ಜನೆಗೂ ಪತ್ರ ಸಲ್ಲಿಸಿದ್ದರು. ಈ ಬೆನ್ನಲ್ಲೇ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, 17ನೇ ಲೋಕಸಭೆ ವಿಸರ್ಜನೆ ಶಿಫಾರಸ್ಸಿಗೆ ಅಂಕಿತವನ್ನು ಹಾಕಿದ್ದಾರೆ. ಈ ಮೂಲಕ ಕೇಂದ್ರ ಸಚಿವ ಸಂಪುಟ ವಿಸರ್ಜನೆ ಆದಂತೆ ಆಗಿದೆ.
ಕ್ಯಾಬಿನೆಟ್ ತನ್ನ ಇಂದಿನ ಸಭೆಯಲ್ಲಿ, 17 ನೇ ಲೋಕಸಭೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಿಸರ್ಜಿಸುವಂತೆ ರಾಷ್ಟ್ರಪತಿಗಳಿಗೆ ಸಲಹೆ ನೀಡಿದೆ. ರಾಷ್ಟ್ರಪತಿಗಳು ಸಂಪುಟದ ಸಲಹೆಯನ್ನು ಸ್ವೀಕರಿಸಿದ್ದಾರೆ. 17 ನೇ ಲೋಕಸಭೆಯನ್ನು ವಿಸರ್ಜಿಸುವ ಆದೇಶಕ್ಕೆ ಸಹಿ ಹಾಕಿದ್ದಾರೆ. ಈ ಮೂಲಕ 17ನೇ ಲೋಕಸಭೆ ವಿಸರ್ಜನೆಯೊಂದಿಗೆ ಕೇಂದ್ರ ಸಚಿವ ಸಂಪುಟ ವಿಸರ್ಜನೆಯಾದಂತೆ ಆಗಿದೆ.
The Cabinet, in its today's meeting, has advised the President to dissolve the 17th Lok Sabha with immediate effect. The President has accepted the advice of the Cabinet and signed the order dissolving the 17th Lok Sabha. pic.twitter.com/5FNUmiOTFS
— ANI (@ANI) June 5, 2024
ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿಯಾದ ಮೋದಿ: 17ನೇ ಲೋಕಸಭೆ ವಿಸರ್ಜನೆಗೆ ಶಿಫಾರಸು
ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ಒಂದು ದಿನದ ನಂತರ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ 17ನೇ ಲೋಕಸಭೆಯನ್ನು ವಿಸರ್ಜಿಸಲು ಶಿಫಾರಸು ಮಾಡಿದೆ. ಆ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿಯಾಗಿ, 17ನೇ ಲೋಕಸಭೆ ವಿಸರ್ಜನೆಗೆ ಶಿಫಾರಸ್ಸು ಮಾಡಿದರು. ಜೊತೆಗೆ ತಮ್ಮ ಪ್ರಧಾನಿ ಹುದ್ದೆಗೆ ರಾಜೀನಾಮೆಯನ್ನು ಮೋದಿ ನೀಡಿದ್ದಾರೆ. ಅವರ ರಾಜೀನಾಮೆ ಪತ್ರವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಗೀಕರಿಸಿದ್ದಾರೆ.
BREAKING: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಸ್ಥಾನಕ್ಕೆ ‘ದೇವೇಂದ್ರ ಫಡ್ನವೀಸ್’ ರಾಜೀನಾಮೆ
ʻಪ್ರಧಾನ ಮಂತ್ರಿ’ ಸ್ಥಾನಕ್ಕೆ ‘ನರೇಂದ್ರ ಮೋದಿ’ ರಾಜೀನಾಮೆ : ಈಗ ದೇಶದ ಉಸ್ತುವಾರಿ ಪ್ರಧಾನಿ ಯಾರು?