ನವದೆಹಲಿ: ಭಾರತದ ಪ್ರಧಾನಿ ಹುದ್ದೆಗೆ ನರೇಂದ್ರ ಮೋದಿ ಅವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನೇಮಕ ಮಾಡಿದ್ದಾರೆ. ಈ ಮೂಲಕ ನೂತನ ಕೇಂದ್ರ ಸಂಪುಟ ರಚಿಸೋದಕ್ಕೆ ರಾಷ್ಟ್ರಪತಿ ಅನುಮೋದನೆ ನೀಡಿದ್ದಾರೆ.
ಇಂದು ನರೇಂದ್ರ ಮೋದಿಯವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ಸರ್ಕಾರ ರಚನೆ ಹಕ್ಕು ಮಂಡಿಸಿದರು. ಸಂಸದರ ಬೆಂಬಲ ಪತ್ರದೊಂದಿಗೆ ತೆರಳಿದ್ದಂತ ಅವರು ಸರ್ಕಾರ ರಚನೆಯ ಹಕ್ಕು ಮಂಡನೆಗೆ ಅವಕಾಶ ಕೋರಿದರು.
ಈ ಬಳಿಕ ಭಾರತದ ಸಂವಿಧಾನದ 75 (1) ನೇ ವಿಧಿಯಡಿ ಅವರಿಗೆ ನೀಡಲಾದ ಅಧಿಕಾರವನ್ನು ಚಲಾಯಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನರೇಂದ್ರ ಮೋದಿಯವರನ್ನು ಭಾರತದ ಪ್ರಧಾನಿ ಹುದ್ದೆಗೆ ನೇಮಕ ಮಾಡಿದ್ದಾರೆ.
ರಾಷ್ಟ್ರಪತಿಗಳು ಶ್ರೀ ನರೇಂದ್ರ ಮೋದಿ ಅವರನ್ನು ಹೀಗೆ ವಿನಂತಿಸಿದರು:
i) ಕೇಂದ್ರ ಮಂತ್ರಿಮಂಡಲದ ಸದಸ್ಯರಾಗಿ ನೇಮಕಗೊಳ್ಳಬೇಕಾದ ಇತರ ವ್ಯಕ್ತಿಗಳ ಹೆಸರುಗಳ ಬಗ್ಗೆ ಅವಳಿಗೆ ಸಲಹೆ ನೀಡುವುದು.
ii) ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಪ್ರಮಾಣ ವಚನ ಸ್ವೀಕಾರ ಸಮಾರಂಭದ ದಿನಾಂಕ ಮತ್ತು ಸಮಯವನ್ನು ಸೂಚಿಸುವುದು.
Exercising powers vested in her under Article 75 (1) of the Constitution of India, President Droupadi Murmu today appointed @narendramodi to the office of Prime Minister of India.
The President requested Shri Narendra Modi to:
i) advise her about the names of other persons to… pic.twitter.com/L3qELsX3Vl
— President of India (@rashtrapatibhvn) June 7, 2024
ಗಮನಿಸಿ: KEAಯಿಂದ ಈ ಹುದ್ದೆಗಳಿಗೆ ನಡೆದ ಪರೀಕ್ಷೆಯ ಅಂಕಗಳ ಪರಿಷ್ಕೃತ ತಾತ್ಕಾಲಿಕ ಪಟ್ಟಿ ಪ್ರಕಟ
BREAKING: ‘ಚೆಂದನ್ ಶೆಟ್ಟಿ-ನಿವೇದಿತಾ’ಗೆ ‘ವಿಚ್ಚೇದನ’ ಮಂಜೂರು: 4 ವರ್ಷಗಳ ‘ದಾಂಪತ್ಯ ಜೀವನ’ ಅಂತ್ಯ