Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮಾರ್ಗನ್ ಸ್ಟಾನ್ಲಿಯಲ್ಲಿ ಭಾರಿ ಉದ್ಯೋಗ ಕಡಿತ: 2,500 ನೌಕರರ ವಜಾಕ್ಕೆ ಮುಂದಾದ ಜಾಗತಿಕ ಹಣಕಾಸು ಸಂಸ್ಥೆ | Morgan Stanley Layoffs 2026

06/03/2026 7:02 AM

ಮಧ್ಯರಾತ್ರಿ ಇದ್ದಕ್ಕಿದ್ದಂತೆ ನಿದ್ರೆ ಕೆಡುತ್ತಿದೆಯೇ? ತಕ್ಷಣ ನಿದ್ರಿಸಲು ಇಲ್ಲಿವೆ 4 ಪರಿಣಾಮಕಾರಿ ಮಾರ್ಗಗಳು!

06/03/2026 6:58 AM

ಪತ್ನಿ ಸಂಗೀತಾರಿಂದ ಡಿವೋರ್ಸ್ ಕೇಸ್ ಬೆನ್ನಲ್ಲೇ ನಟಿ ತ್ರಿಷಾ ಜೊತೆ ಕಾಣಿಸಿಕೊಂಡ ನಟ ವಿಜಯ್: ವಿಡಿಯೋ ವೈರಲ್!

06/03/2026 6:55 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಭಾರತ ಚುನಾವಣಾ ಆಯೋಗದಿಂದ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಪೂರ್ವ ಸಿದ್ಧತೆ: ಶಿವಮೊಗ್ಗ ಡಿಸಿ ಪ್ರಭುಲಿಂಗ ಕವಳಿಕಟ್ಟಿ
KARNATAKA

ಭಾರತ ಚುನಾವಣಾ ಆಯೋಗದಿಂದ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಪೂರ್ವ ಸಿದ್ಧತೆ: ಶಿವಮೊಗ್ಗ ಡಿಸಿ ಪ್ರಭುಲಿಂಗ ಕವಳಿಕಟ್ಟಿ

By kannadanewsnow0919/01/2026 7:14 PM

ಶಿವಮೊಗ್ಗ: ಮಾನ್ಯ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ 2002 ರ ಮತದಾರರ ಪಟ್ಟಿಯನ್ನು 2025 ರ ಪರಿಷ್ಕೃತ ಮತದಾರರ ಪಟ್ಟಿಗೆ ಮ್ಯಾಪಿಂಗ್ ಮಾಡುವ ಕಾರ್ಯ ಪ್ರಗತಿಯಲ್ಲಿದ್ದು ಈ ಪ್ರಕ್ರಿಯೆಯು ಪ್ರತಿಯೊಬ್ಬ ಮತದಾರರಿಗೂ ಅತಿ ಮಹತ್ವದ್ದಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದ್ದಾರೆ.

ಹಾಗೂ ಮಾನ್ಯ ಆಯೋಗವು ದಿನಾಂಕ: 06-01-2025 ರ ಆದೇಶವನ್ನು ಹೊರಡಿಸಿದ ದಿನಾಂಕದಲ್ಲಿ ಇದ್ದಂತೆ ಪ್ರಸ್ತುತ ಇರುವ ಪ್ರತಿಯೊಬ್ಬ ಮತದಾರನಿಗೆ ಮುಂಚಿತವಾಗಿ ಭರ್ತಿ ಮಾಡಲಾದ ಗಣತಿ ನಮೂನೆಯು ಲಭ್ಯವಿರತಕ್ಕದ್ದು ಮತ್ತ ಕರಡು ಮತದಾರನಿಗೆ ಪಟ್ಟಿಯು 2025 ರ ಜುಲೈ 25 ನೇ ದಿನಾಂಕಕ್ಕಿAತ ಮುಂಚೆ ಭರ್ತಿ ಮಾಡಿ ಸಲ್ಲಿಸಲಾಗಿರುವಂತಹ ಎಲ್ಲಾ ಮತದಾರರ ಹೆಸರುಗಳನ್ನು ಒಳಗೊಂಡಿರಬೇಕೆAದು ನಿರ್ದೇಶಿಸಿರುತ್ತದೆ.

ಸಂಸತ್ತು ಹಾಗೂ ರಾಜ್ಯ ವಿಧಾನ ಮಂಡಲಗಳಿಗೆ ಮುಕ್ತ ಮತ್ತು ನಿಷ್ಪಕ್ಷಪಾತ ಚುನಾವಣೆ ನಡೆಸಲು ಹಾಗೂ ಮತದಾರರ ಪಟ್ಟಿಗಳ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳುವುದು ಮೂಲಭೂತ ಅವಶ್ಯಕತೆಯಾಗಿರುವುದರಿಂದ ಭಾರತ ಸಂವಿಧಾನದ ಅನುಚ್ಛೇದ 32 ಜನತಾ ಪ್ರಾತಿನಿಧ್ಯ ಅಧಿನಿಯಮ, 1950 (ಆರ್ ಪಿ ಎ 1950) ರ ಅನುಸಾರ ಮತದಾರದ ಸಿದ್ಧಪಡಿಸುವಿಕೆಯು, ಮತದಾರರ ಪಟ್ಟಿಯಲ್ಲಿ ಎಲ್ಲಾ ಅರ್ಹ ನಾಗರೀಕರು ಸೇಪರ್ಡೆಗೊಂಡಿರುವುದನ್ನು ಮತ್ತು ಅಂತಹ ಯಾರೇ ನಾಗರೀಕರರನ್ನು ಮತದಾರರ ಪಟ್ಟಿಯಿಂದ ಹೊರಗಿಡದಿರುವುದನ್ನು ಖಾತ್ರಿಪಡಿಸಬೇಕಾಗಿರುವುದರಿಂದ, ಭಾರತದ ನಾಗರೀಕರಾಗಿರುವ ಮತ್ತು ಅರ್ಹತಾ ದಿನಾಂಕದAದು 18 ವರ್ಷಗಳ ವಯಸ್ಸಿಗಿಂತ ಕಡಿಮೆ ಇಲ್ಲದಿರುವ ಮತ್ತು ಯಾವುದೇ ಕಾನೂನಿನ ಮೇರೆಗೆ ಅನರ್ಹನಾಗಿಲ್ಲದ ಪ್ರತಿಯೊಬ್ಬ ವ್ಯಕ್ತಿಯು ಮತದಾರರ ಪಟ್ಟಿಯಲ್ಲಿ ಹೆಸರನ್ನು ನೊಂದಾಯಿಸಿಕೊಳ್ಳಲು ಹಕ್ಕುಳ್ಳವನಾಗಿರತಕ್ಕದೆಂದು ಸಂವಿಧಾನದ 326ನೇ ಅನುಚ್ಛೇದವು ಗೊತ್ತುಪಡಿಸಿದೆ.

ಕಳೆದ 20 ವರ್ಷಗಳ ಸುಧೀರ್ಘ ಅವಧಿಯಲ್ಲಿ ಅತೀ ದೊಡ್ಡ ಪ್ರಮಾಣದಲ್ಲಿ ಸೇರ್ಪಡೆಗಳು ಮತ್ತು ಬಿಟ್ಟುಬಿಡುವಿಕೆಗಳ ಕಾರಣದಿಂದಾಗಿ ಮತದಾರರ ಪಟ್ಟಿಯಲ್ಲಿ ಗಮನಾರ್ಹ ಬದಲಾವಣೆಯಾಗಿರುವುದು ಮಾನ್ಯ ಆಯೋಗದ ಗಮನಕ್ಕೆ ಬಂದಿರುವುದರಿAದ, ಅಸ್ತಿತ್ವದಲ್ಲಿರುವ ಮತದಾರರ ಪಟ್ಟಿಗಳನ್ನು ವಿಶೇಷ ಸಮಗ್ರ ಪರಿಷ್ಕರಣೆಯ ಅಡಿಯಲ್ಲಿ ಮಾನ್ಯ ಭಾರತ ಚುನಾವಣಾ ಆಯೋಗ, ನವದೆಹಲಿ ಇವರ ಆದೇಶ ಸಂಖ್ಯೆ:23/ಇಆರ್ ಎಸ್/ 2025, ದಿನಾಂಕ:24.06.2025 ರನ್ವಯ ಮಾನ್ಯ ಆಯೋಗವು ಮತದಾರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆಯನ್ನು ಗೊತ್ತುಪಡಿಸಿರುತ್ತದೆ.

ಮಾನ್ಯ ಆಯೋಗವು ಚಾಲ್ತಿಯಲ್ಲಿರುವ ಶಾಸನಗಳ ಅಡಿಯಲ್ಲಿ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಈ ಹಿಂದಿನ ವರ್ಷಗಳಲ್ಲಿ ಅಂದರೆ 1952-56, 1957, 1961, 1965, 1966, 1983-84 1987-89, 1992-1993, 1995, 2002, 2003 ಮತ್ತು 2004ರಲ್ಲಿ ಗಣತಿ ಮುಖಾಂತರ, ಹೊಸ ಮತದಾರರ ಪಟ್ಟಿಗಳನ್ನು ಸಿದ್ದಪಡಿಸುವುವುದಕ್ಕಾಗಿ ದೇಶವ್ಯಾಪಿ ಅಥವಾ ದೇಶದ ಕೆಲವು ಭಾಗಗಳಲ್ಲಿ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆಯನ್ನು ನಡೆಸಿರುತ್ತದೆ.

ಈ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ಮತದಾರರ ಪಟ್ಟಿಯಿಂದ ಯಾವುದೇ ಮತದಾರರ ಹೆಸರುಗಳನ್ನು ತೆಗೆದು ಹಾಕುವ ಅಥವಾ ಸೇರ್ಪಡೆ ಮಾಡುವ ಕಾರ್ಯವನ್ನು ಜರುಗಿಸಲಾಗುತ್ತಿಲ್ಲ ಎಂಬುದನ್ನು ಈ ಮೂಲಕ ಸ್ಪಷ್ಟಪಡಿಸುತ್ತಾ, ಈ ವಿಶೇಷ ಸಮಗ್ರ ಪರಿಷ್ಕರಣೆಯ ಪೂರ್ವದಲ್ಲಿ ಅರ್ಹ ಮತದಾರರು ಕೂಡಲೇ ಗಮನ ಹರಿಸಬೇಕಾದಂತಹ ಅಂಶಗಳು ಈ ಕೆಳಗಿನಂತೆ ಇರುತ್ತವೆ.

ಈ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ಮತದಾರರ ಪಟ್ಟಿಯಿಂದ ಯಾವುದೇ ಸರುಗಳನ್ನು ತೆಗೆದುಹಾಕುವ ಅಥವಾ ಸೇರ್ಪಡೆ ಮಾಡುವ ಕಾರ್ಯವನ್ನು ಜರುಗಿಸ ಐಬುದನ್ನು ಈ ಮೂಲಕ ಸ್ಪಷ್ಟಪಡಿಸುತ್ತಾ ಈ ವಿಶೇಷ ಸಮಗ್ರ ಪರಿಷ್ಕರಣೆಯ ಪೂರ್ವ ತದಾರರು ಕೂಡಲೇ ಗಮನಹರಿಸಬೇಕಾದಂತಹ ಅಂಶಗಳು ಈ ಕೆಳಕಂಡAತಿರುತ್ತವೆ.

* ಮಾನ್ಯ ಮುಖ್ಯ ಚುನಾವಣಾಧಿಕಾರಿಗಳು, ನವದೆಹಲಿ ನೀಡಿದ ನಿರ್ದೇಶನಗಳನ್ವಯ ಜಿಲ್ಲೆಯಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ (SIಖ) ಜರುಗಿಸುವ ಕುರಿತು ಪೂರ್ವ ಸಿದ್ಧತೆಗೆ 2025ರ ಮತದಾರರ ಯಾದಿಯಲ್ಲಿ ನೋಂದಣಿಯಾದ ಮತದಾರರನ್ನು 2002ರ ಪಟ್ಟಿಗೆ ತಾಳೆ(ಮ್ಯಾಪಿಂಗ್) ಮಾಡುವ ಕಾರ್ಯ ಕೈಗೊಳ್ಳಲಾಗಿರುತ್ತದೆ. ಮ್ಯಾಪಿಂಗ್ ಅಂದರೆ 2002ರ ಮತದಾರರ ಪಟ್ಟಿಯನ್ನು 2025ರ ಮತದಾರರ ಪಟ್ಟಿಗೆ ಜೋಡಣೆ ಮಾಡುವುದು. ಪ್ರೊಜೆನಿ ಮ್ಯಾಪಿಂಗ್ ಅಂದರೆ 2002ರ ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರುಗಳು ನೋಂದಣಿಯಾಗದಿದ್ದಲ್ಲಿ ಅವರ ತಂದೆ ತಾಯಿಯವರ ಭಾಗ ಸಂಖ್ಯೆ ಹಾಗೂ ಕ್ರಮ ಸಂಖ್ಯೆ ಅಥವಾ ಅಜ್ಜ ಅಜ್ಜಿಯರ ಭಾಗಸಂಖ್ಯೆ ಹಾಗೂ ಕ್ರಮ ಸಂಖ್ಯೆಯೊAದಿಗೆ (ಯಾವುದಾದರೂ ಸಂಬAಧಿಸಿದ) ಜೋಡಣೆ ಮಾಡಿಕೊಳ್ಳುವುದು.

* ಪ್ರಸ್ತುತ ಮಾನ್ಯ ಮುಖ್ಯ ಚುನಾವಣಾಧಿಕಾರಿಗಳು ನವದೆಹಲಿ ಇವರು ನೀಡಿದ ನಿರ್ದೇಶನದನ್ವಯ ಶಿವಮೊಗ್ಗ ಜಿಲ್ಲೆಯಲ್ಲಿ 111-ಶಿವಮೊಗ್ಗ, ಗ್ರಾಮಾಂತರ, 112- ಭದ್ರಾವತಿ, 113-ಶಿವಮೊಗ್ಗ ನಗರ, 114 ತೀರ್ಥಹಳ್ಳಿ 115-ಶಿಕಾರಿಪುರ 116-ಸೊರಬ ಮತ್ತು 117- ಸಾಗರ ಒಟ್ಟು 07 ವಿಧಾನ ಸಭಾ ಕ್ಷೇತ್ರಗಳಿದ್ದು 1530471 ಮತದಾರರಿದ್ದಾರೆ. ಈ ಪೈಕಿ ಮ್ಯಾಪಿಂಗ್ ಹಾಗೂ ಪ್ರೊಜೆನಿ (ಸಂತತಿ)ಯನ್ನು ಸೇರಿಸಿದಂತೆ ಶೇಕಡ 67.36 ಪ್ರಗತಿಯಾಗಿದ್ದು ಇನ್ನು ಶೇ 32.64 ರಷ್ಟು ಪ್ರಗತಿಯನ್ನು ಸಾಧಿಸಬೇಕಾಗಿದೆ.

* ಈ ಪ್ರಕಟಣೆಯ ಮೂಲಕ ಮತದಾರರಿಗೆ ತಿಳಿಸುವುದೇನೆಂದರೆ, ಕೂಡಲೇ ತಮ್ಮ ತಮ್ಮ ಮತಗಟ್ಟೆಗಳ ಅಧಿಕಾರಿ(ಬಿಎಲ್‌ಓ)ಗಳನ್ನು ಭೇಟಿ ಮಾಡಿ 2002ರ ಮತದಾರರ ಪಟ್ಟಿಗೆ 2025ರ ಮತಾರರ ಪಟ್ಟಿಯನ್ನು ಮ್ಯಾಪಿಂಗ್ ಮಾಡಿಕೊಳ್ಳುವುದು. ಹಾಗೂ 2002 ರಲ್ಲಿ ಹೊರ ರಾಜ್ಯದಲ್ಲಿ ವಾಸವಿದ್ದ ಮತದಾರರು ಪ್ರಸ್ತುತ 2025ರಲ್ಲಿ ಕರ್ನಾಟಕದ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಣಿಯಾಗಿದ್ದಲ್ಲಿ ಅಂತಹ ಮತದಾರರಿಗೂ ಸಹ ಮ್ಯಾಪಿಂಗ್ ಮಾಡಿಕೊಳ್ಳಲು ಮಾನ್ಯ ಭಾರತ ಚುನಾವಣಾ ಆಯೋಗದಿಂದ ಅವಕಾಶ ನೀಡಲಾಗಿರುತ್ತದೆ.

* 2002ರ ನಂತರ ಮದುವೆಯಾಗಿ ಬಂದಿರುವವರು ಅಥವಾ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವಲಸೆ (ಸ್ಥಳಾಂತರ) ಗೊಂಡಿರುವವರು ಅಥವಾ ಹೊಸದಾಗಿ ಅರ್ಹತೆ ಪಡೆದಿರುವವರು ನಿಮ್ಮ ಮ್ಯಾಪಿಂಗ್ ಕಾರ್ಯವನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು ಹಾಗೂ ನೀವು ಈ ಹಿಂದೆ ವಾಸವಿದ್ದಂತಹ ತಮ್ಮ ಹಿಂದಿನ ವಿಧಾನಸಭಾ ಕ್ಷೇತ್ರದ ಸಂಖ್ಯೆ ಭಾಗ ಸಂಖ್ಯೆ ಹಾಗೂ ತಮ್ಮ ಕ್ರಮ ಸಂಖ್ಯೆ ತಿಳಿದುಕೊಂಡು ಕೂಡಲೇ ಬಿಎಲ್‌ಓ ಗೆ ವರದಿ ನೀಡುವುದು.

* ಒಂದು ವೇಳೆ 2002ರ ಪಟ್ಟಿಯಲ್ಲಿ ನಿಮ್ಮಗಳ ಹೆಸರುಗಳು ಇಲ್ಲದಿದ್ದಲ್ಲಿ ನಿಮ್ಮಗಳ ತಂದೆ ತಾಯಿಯವರ ಭಾಗ ಸಂಖ್ಯೆ( ಪಾರ್ಟ್ ನಂ.)ಹಾಗೂ ಕ್ರಮ ಸಂಖ್ಯೆ(ಸೀರಿಯಲ್ ನಂ.)ಅಥವಾ ಅಜ್ಜ ಅಜ್ಜಿಯರ ಭಾಗ ಸಂಖ್ಯೆ ಹಾಗೂ ಕ್ರಮ ಸಂಖ್ಯೆಯೊAದಿಗೆ (ಯಾವುದಾದರು ಸಂಬಂಧಿಸಿದ) ಮಾಹಿತಿಯನ್ನು ಬಿಎಲ್‌ಓ ರವರಿಗೆ ಒದಗಿಸಿ ಮ್ಯಾಪಿಂಗ್ ಮಾಡಿಸಿಕೊಳ್ಳುವುದು.

ಮತಗಟ್ಟೆ ಅಧಿಕಾರಿಗಳು ಭಾರತ ಚುನಾವಣಾ ಆಯೋಗದ ಪ್ರತಿನಿಧಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವುದರಿಂದ, ಮೇಲ್ಕಂಡ ಎಲ್ಲಾ ಮಾಹಿತಿಯನ್ನು ನಿಮ್ಮ ಪ್ರದೇಶದ ಜವಾಬ್ದಾರಿಯುತ ಮತಗಟ್ಟೆ ಅಧಿಕಾರಿ (ಬಿಎಲ್‌ಓ) ರವರಿಗೆ ತಕ್ಷಣವೇ ಒಪ್ಪಿಸಿ ಅವರ ಮುಖಾಂತರ ಕಡ್ಡಾಯವಾಗಿ ಮ್ಯಾಪಿಂಗ್ ಮಾಡಿಸಿಕೊಳ್ಳುವಂತೆ, ಶಿವಮೊಗ್ಗ ಜಿಲ್ಲೆಯ ಎಲ್ಲಾ ಮತದಾರರು ಸಹಕರಿಸಬೇಕೆಂದು ಜಿಲ್ಲಾಧಿಕಾರಿಗಳು ಕೋರಿದ್ದಾರೆ.

Share. Facebook Twitter LinkedIn WhatsApp Email

Related Posts

ನಿಮ್ಮ ದೇಹದ ಮೇಲಿರುವ `ನರುಳ್ಳೆ-ಕೊಬ್ಬಿನ ಗಂಟು’ ಕರಗಲು ಜಸ್ಟ್ ಹೀಗೆ ಮಾಡಿ !

06/03/2026 6:46 AM2 Mins Read

ರಾಜ್ಯದಲ್ಲಿ ಶಾಲಾ ಪಠ್ಯಪುಸ್ತಕಗಳ ಬೆಲೆ ಶೇ. 50ರಷ್ಟು ಏರಿಕೆ : ಪೋಷಕರು, ವಿದ್ಯಾರ್ಥಿಗಳಿಗೆ ಶಾಕ್ !

06/03/2026 6:38 AM1 Min Read

ರಾಜ್ಯದ ವಿಕಲಚೇತನರಿಗೆ ಗುಡ್ ನ್ಯೂಸ್ : ಸರ್ಕಾರದಿಂದ ನಿಮಗೆ ಸಿಗಲಿವೆ ಈ ಎಲ್ಲಾ ಸೌಲಭ್ಯಗಳು !

06/03/2026 6:24 AM3 Mins Read
Recent News

ಮಾರ್ಗನ್ ಸ್ಟಾನ್ಲಿಯಲ್ಲಿ ಭಾರಿ ಉದ್ಯೋಗ ಕಡಿತ: 2,500 ನೌಕರರ ವಜಾಕ್ಕೆ ಮುಂದಾದ ಜಾಗತಿಕ ಹಣಕಾಸು ಸಂಸ್ಥೆ | Morgan Stanley Layoffs 2026

06/03/2026 7:02 AM

ಮಧ್ಯರಾತ್ರಿ ಇದ್ದಕ್ಕಿದ್ದಂತೆ ನಿದ್ರೆ ಕೆಡುತ್ತಿದೆಯೇ? ತಕ್ಷಣ ನಿದ್ರಿಸಲು ಇಲ್ಲಿವೆ 4 ಪರಿಣಾಮಕಾರಿ ಮಾರ್ಗಗಳು!

06/03/2026 6:58 AM

ಪತ್ನಿ ಸಂಗೀತಾರಿಂದ ಡಿವೋರ್ಸ್ ಕೇಸ್ ಬೆನ್ನಲ್ಲೇ ನಟಿ ತ್ರಿಷಾ ಜೊತೆ ಕಾಣಿಸಿಕೊಂಡ ನಟ ವಿಜಯ್: ವಿಡಿಯೋ ವೈರಲ್!

06/03/2026 6:55 AM
Israeli Prime Minister said Khamenei's compound had been destroyed.

ಖಮೇನಿ ಹತ್ಯೆ ಬೆನ್ನಲ್ಲೇ ‘X’ ಖಾತೆಯಲ್ಲಿ ಗೂಢ ಸಂದೇಶ: ಏನಿದು ‘ಖೋರಂಶಹರ್ ಕ್ಷಣಗಳ’ ಎಚ್ಚರಿಕೆ?

06/03/2026 6:46 AM
State News
KARNATAKA

ನಿಮ್ಮ ದೇಹದ ಮೇಲಿರುವ `ನರುಳ್ಳೆ-ಕೊಬ್ಬಿನ ಗಂಟು’ ಕರಗಲು ಜಸ್ಟ್ ಹೀಗೆ ಮಾಡಿ !

By kannadanewsnow5706/03/2026 6:46 AM KARNATAKA 2 Mins Read

ಬೆಂಗಳೂರು: ಇಂದಿನ ದಿನಗಳಲ್ಲಿ ಬದಲಾದ ಜೀವನಶೈಲಿ ಮತ್ತು ಹೊರಗಿನ ಮಾಲಿನ್ಯದಿಂದಾಗಿ ಅನೇಕರಲ್ಲಿ ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಅದರಲ್ಲಿಯೂ ಮುಖದ ಮೇಲೆ…

ರಾಜ್ಯದಲ್ಲಿ ಶಾಲಾ ಪಠ್ಯಪುಸ್ತಕಗಳ ಬೆಲೆ ಶೇ. 50ರಷ್ಟು ಏರಿಕೆ : ಪೋಷಕರು, ವಿದ್ಯಾರ್ಥಿಗಳಿಗೆ ಶಾಕ್ !

06/03/2026 6:38 AM

ರಾಜ್ಯದ ವಿಕಲಚೇತನರಿಗೆ ಗುಡ್ ನ್ಯೂಸ್ : ಸರ್ಕಾರದಿಂದ ನಿಮಗೆ ಸಿಗಲಿವೆ ಈ ಎಲ್ಲಾ ಸೌಲಭ್ಯಗಳು !

06/03/2026 6:24 AM

ರಾಜ್ಯದ ‘ಸರ್ಕಾರಿ PU ಕಾಲೇಜು ವಿದ್ಯಾರ್ಥಿ’ಗಳಿಗೆ ಸಿಹಿಸುದ್ದಿ: ಮುಂದಿನ ವರ್ಷದಿಂದ ಉಚಿತವಾಗಿ ‘ಪಠ್ಯಪುಸ್ತಕ’ ವಿತರಣೆ

06/03/2026 6:20 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.