ಬೆಂಗಳೂರು: 2024 ಮೇ-5 ರಂದು ನಡೆಸಲು ಉದ್ದೇಶಿಸಲಾಗಿದ್ದ 384 ಗೆಜೆಟೆಡ್ ಪ್ರೊಬೆಷನರ್ಸ (KAS) ಹುದ್ದೆಗಳ Prelims Exam ನ್ನು ಇದೀಗ ಮುಂದೂಡಿ, 2024 ಜುಲೈ-7 ರಂದು ನಡೆಸಲು ದಿನಾಂಕ ನಿಗದಿಪಡಿಸಲಾಗಿದೆ. ಈ ಬಗ್ಗೆ ಆಯೋಗವು ತಿದ್ದುಪಡಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.
ಆದೇಶದಲ್ಲಿ ಉಲ್ಲೇಖ ಮಾಡಿರುವಂತೆ ದಿನಾಂಕ:02-04-2024 ಆಯೋಗವು 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ಗ್ರೂಪ್-ಫಿ ಮತ್ತು ಗ್ರೂಪ್-ಬಿ ವೃಂದದ ಒಟ್ಟು 384 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಧಿಸೂಚನೆ ಸಂಖ್ಯೆ ಪಿಎಸ್ ま 509/(1)/2023-24, ದಿನಾಂಕ:26-02-2024ರ ಹೊರಡಿಸಲಾಗಿದ್ದು, ಸದರಿ ಅಧಿಸೂಚನೆಯಲ್ಲಿನ ಗ್ರೂಪ್-ಎ ವೃಂದದ ಆರ್.ಪಿ.ಸಿ, ಮತ್ತು ಹೈ.ಕ. ವೃಂದದ ಹುದಗಳ ಒಟ್ಟು ಸಂಖ್ಯೆ 123 (ಆರ್.ಪಿ.ಸಿ.) ಮತ್ತು 36 (ಹೈ.ಕ.) ಎಂದೂ ಗ್ರೂಪ್-ಎ ಮತ್ತು ಗ್ರೂಪ್-ಬಿ ವೃಂದದ ಒಟ್ಟಾರೆ ಹುದ್ದೆಗಳ ಸಂಖ್ಯೆ 307 (ಆರ್.ಪಿ.ಸಿ) ಮತ್ತು 77 (ಹೈ.ಕ.) ಎಂದು ನಮೂದಾಗಿದ್ದು, ಅವುಗಳನ್ನು ಒಟ್ಟು ಸಂಖ್ಯೆ 126 (ಆರ್.ಪಿ.ಸಿ) ಮತ್ತು 33(ಹೈ.ಕ) ಎಂದೂ ಹಾಗೂ ಗ್ರೂಪ್-ಎ ಮತ್ತು ಗ್ರೂಪ್-ಬಿ ವೃಂದದ ಒಟ್ಟಾರೆ ಹುದ್ದೆಗಳ ಸಂಖ್ಯೆ 310 (ಆರ್.ಪಿ.ಸಿ.) ಮತ್ತು 74 (ಹೈ.ಕ.) ಎಂದೂ ಓದಿಕೊಳ್ಳತಕ್ಕದ್ದು,
ಸದರಿ ಅಧಿಸೂಚನೆಯಲ್ಲಿನ ಅನುಬಂಧ-1ರಲ್ಲಿನ ವಾಣಿಜ್ಯ ತೆರಿಗೆ ಅಧಿಕಾರಿ (ವಾಣಿಜ್ಯ ತೆರಿಗೆ ಇಲಾಖೆ) ಗ್ರೂಪ್-ಬಿ ವ್ಯಂದದ ಆರ್.ಪಿ.ಸಿ, ಮತ್ತು ಹೈಕ, ವೃಂದದ ವರ್ಗೀಕರಣದಲ್ಲಿ, ಆಂಗಭಾಷೆಯಲ್ಲಿ COMMERCIAL TAX INSPECTOR (COMMERCIAL TAX DEPARTMENT) GROUP-BES RELATES, CURS COMMERCIAL TAX OFFICER (COMMERCIAL TAX DEPARTMENT) GROUP-B ಓದಿಕೊಳ್ಳತಕ್ಕದ್ದು,
ಸದರಿ ನೇಮಕಾತಿಗೆ ಅರ್ಜಿ ಸಲ್ಲಿಸಲು ದಿನಾಂಕ:04-03-2024 ರಿಂದ 03-04-2024ರವರೆಗೆ ಅವಕಾಶ
ಕಲ್ಪಿಸಲಾಗಿದ್ದು, ಪೂರ್ವಭಾವಿ ಪರೀಕ್ಷೆಯನ್ನು ದಿನಾಂಕ:05-05-2024ರಂದು ನಡೆಸಲು ನಿಗದಿಪಡಿಸಲಾಗಿತ್ತು. ಪ್ರಸ್ತುತ ಅಭ್ಯರ್ಥಿಗಳ ಹಿತದೃಷ್ಟಿಯಿಂದ ಹಾಗೂ ಚುನಾವಣಾ ಕಾರ್ಯ ಪ್ರಗತಿಯಲ್ಲಿರುವ ಕಾರಣದಿಂದಾಗಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು 15-04-2024ರವರೆಗೆ ಮುಂದೊಡಲಾಗಿರುತ್ತದೆ. ಹಾಗೂ ಪೂರ್ವಭಾವಿ ಪರೀಕ್ಷೆಯನ್ನು ದಿನಾಂಕ:07-07-2024ರಂದು ನಡೆಸಲು ಮರುನಿಗದಿಪಡಿಸಲಾಗಿರುತ್ತದೆ ಅಂತ ತಿಳಿಸಿದೆ.