ಬೆಂಗಳೂರು: ಒಬ್ಬ ಹೋಮ್‌ ಮಿನಿಸ್ಟರ್, ಪಕ್ಷ ಅಂತ ತೊಗೊಂಡರೇ ರಾಜ್ಯ ಉಳಿಯಲು ಸಾಧ್ಯವಿಲ್ಲ. ಕಳೆದ ಹದಿನೈದು ದಿನಗಳ ಹಿಂದೆ ಇದೇ ರೀತಿಯ ಘಟನೆ ನಡೆದಿದೆ. ಯಾರದ್ದೊ‌ ಕಡೆ ಬೆರಳು ತೋರಿಸಿ ಸುಮ್ಮನೆ ಅವಲಕ್ಷಣ ಎನ್ನಿಸಿಕೊಳ್ಳಬೇಡಿ. ಯಾರು ಇದರಲ್ಲಿ ಭಾಗಿಯಾಗಿದ್ದಾರೆಂದು ಡಿಜಿಪಿ ಇಲ್ಲವೇ ಎಸ್‌ಪಿ ಹೇಳಬೇಕು. ಇತಂಹ ಕೊಲೆಗಳು ರಾಜಕೀಯವಾಗಿ ಆಯ್ತಾ ? ಖಾಸಗೀಯಾಗಿ ಆಯಿತಾ, ಬೇರೆ ಉದ್ದೇಶದಿಂದ ಆಯ್ತಾ ಅಂತಾ ಪೊಲೀಸ್ ಅಧಿಕಾರಿಗಳು ಪ್ರಾಮಾಣೀಕರಿಸಬೇಕು. ತನಿಖೆ‌ ಮಾಡಿ ಯಾರೇ ಆದರೂ ಕಾನೂನು ಕ್ರಮ ಆಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ( KPCC President DK Shivakumar )  ಹೇಳಿದ್ದಾರೆ. 

ಶಿವಮೊಗ್ಗ: ನಾಳೆ ನಗರದ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | Power Cut

ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಗೃಹ ಸಚಿವರು, ಸರ್ಕಾರ ವಿಫಲವಾಗಿದೆ. ಸುಮ್ಮನೆ ಬಾಳೆಹಣ್ಣು ತಿಂದು ಸಿಪ್ಪೆನಾ ಬೇರೆ ಬಾಯಿಗೆ ಒರಸುವ ಪ್ರಯತ್ನ ಮಾಡಬಾರದು. ತನಿಖೆ ನಡೆಯಲಿ, ಅವರನ್ನು ಬಂಧಿಸಬೇಕು. ಸತ್ಯಾಂಶವನ್ನು ಹೊರಗೆ ಬರಲಿ ಎಂದರು.

BIG NEWS: ಸಂಸತ್ ಸಂಕೀರ್ಣದ ಬಳಿಯಲ್ಲಿ 50 ಗಂಟೆಗಳ ಸುದೀರ್ಘ ಪ್ರತಿಭಟನೆ ಆರಂಭಿಸಿದ ಅಮಾನತುಗೊಂಡ ರಾಜ್ಯಸಭಾ ಸಂಸದರು

ಪ್ರವೀಣ್ ನೆಟ್ಟಾರು ಹತ್ಯೆಯನ್ನು ರಾಜಕೀಯಕ್ಕೆ ಮಾಡಿದ್ದಾರೋ, ಬೇರೆ ವೈಯಕ್ತಿಕ ವಿಚಾರಕ್ಕೆ ಮಾಡಿದ್ದಾರೋ ಎಂಬುದು ತನಿಖೆಯಿಂದ ಗೊತ್ತಾಗಲಿದೆ. ಸತ್ಯಾಂಶ ಎಲ್ಲವೋ ಹೊರಗೆ ಬರಬೇಕು, ಜನರಿಗೂ ಗೊತ್ತಾಗಬೇಕು. ಯಾವ ತನಿಖೆ ಬೇಕಾದರೂ ಮಾಡಲಿ. ಒಟ್ಟಾರೆ ಪೊಲೀಸ್ ನವರು ವಿಫಲರಾಗಿದ್ದಾರೆ. ಕಾನೂನು ವ್ಯವಸ್ಥೆಯಲ್ಲಿ ಫೇಲ್ ಆಗಿದೆ. ಗೃಹ ಸಚಿವರು ಹೇಳಿದ್ದನ್ನು ಲೋಕಲ್ ಎಸ್‌ಪಿ ಹೇಳಲಿ. ಬಿಜೆಪಿಯವರಿಗೆ ರಾಜಕೀಯನೇ ಮುಖ್ಯವಾಗಿದೆ ಎಂಬುದಾಗಿ ಬಿಜೆಪಿ ವಿರುದ್ಧ ಕಿಡಿಕಾರಿದರು.

BIG NEWS: ಸಂಸತ್ ಸಂಕೀರ್ಣದ ಬಳಿಯಲ್ಲಿ 50 ಗಂಟೆಗಳ ಸುದೀರ್ಘ ಪ್ರತಿಭಟನೆ ಆರಂಭಿಸಿದ ಅಮಾನತುಗೊಂಡ ರಾಜ್ಯಸಭಾ ಸಂಸದರು

Share.
Exit mobile version