ಬೆಂಗಳೂರು: ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ದಳದಿಂದ ಮತ್ತೋರ್ವ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ. ಎ6 ಆರೋಪಿಯಾಗಿ, ಕೊಲೆ ಸಂಚು ರೂಪಿಸಿದ್ದಂತ ತಂಡದಲ್ಲಿ ಬಂಧಿತ ಆರೋಪಿಯಿದ್ದನು.
ವಿದೇಶದಿಂದ ಹಿಂದಿರುಗುತ್ತಿದ್ದಂತ ಸಂದರ್ಭದಲ್ಲಿ ಇಂದು ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ ಸಂಬಂಧ ಎನ್ಐಎ ಅಧಿಕಾರಿಗಳು ಎ6 ಆರೋಪಿ ಮೊಹಮ್ಮದ್ ಷರೀಫ್ ಎಂಬಾತನನ್ನು ಬಂಧಿಸಿದ್ದಾರೆ.
ಪ್ರವೀಣ್ ನೆಟ್ಟಾರು ಕೊಲೆಗೆ ಸಂಚು ರೂಪಿಸಿದ್ದ ತಂಡದಲ್ಲಿ ಬಂಧಿತ ಷರೀಫ್ ಗುರುತಿಸಿಕೊಂಡಿದ್ದನು. ಕೊಲೆ ನಂತ್ರ ವಿದೇಶಕ್ಕೆ ಪರಾರಿಯಾಗಿ ತಲೆ ಮರೆಸಿಕೊಂಡಿದ್ದನು. ಈತನ ಪತ್ತೆಗೆ ಎನ್ಐಎಯಿಂದ 5 ಲಕ್ಷ ಬಹುಮಾನ ಕೂಡ ಘೋಷಿಸಲಾಗಿತ್ತು.
ಮೊಹಮ್ಮದ್ ಷರೀಫ್ ನಿಷೇಧಿತ ಪಿಎಫ್ಐ ಸಂಘಟನೆಯ ಮುಖಂಡನಾಗಿದ್ದಾನೆ. ಈತನ ಮನೆಯ ಮೇಲೆ 2 ಬಾರಿ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ದಾಳಿ ನಡೆಸಿದ್ದರು. ಇಂತಹ ಆರೋಪಿಯನ್ನು ಇಂದು ಎನ್ಐಎ ಬಂಧಿಸಿದ್ದಾರೆ.
ಮಲೆನಾಡಲ್ಲಿ ‘ಹೊಸ ವರ್ಷ ಆಚರಣೆ’ ಆಸೆ ಇದೆಯೇ? ಇಲ್ಲಿದೆ ಸುವರ್ಣಾವಕಾಶ | Malnad Karnival New Year Celebration
ಓದಿ ಉತ್ತಮ ಸಾಧನೆ ಮಾಡಬೇಕಿದ್ದ ಬಾಲಕಿಗೆ ಅನಾರೋಗ್ಯ: ನಿಮ್ಮ ನೆರವು, ಸಹಕಾರಕ್ಕೆ ಮನವಿ