Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : 2025-26ನೇ ಸಾಲಿನ `ಗ್ರಾಮಪಂಚಾಯಿತಿ ನೌಕರರ ವರ್ಗಾವಣೆ’ : ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ

27/06/2025 6:40 AM

ಮತದಾರರ ಪಟ್ಟಿಯಿಂದ ‘ಅಕ್ರಮ ವಲಸಿಗರನ್ನು’ ತೆಗೆದುಹಾಕಲು ಮನೆ ಮನೆಗೆ ತೆರಳಿದ ಚುನಾವಣಾ ಆಯೋಗ

27/06/2025 6:34 AM

ಚೀನಾ ಒಪ್ಪಂದದ ನಂತರ ಭಾರತದೊಂದಿಗೆ ‘ದೊಡ್ಡ ವ್ಯಾಪಾರ ಒಪ್ಪಂದದ’ ಸುಳಿವು ನೀಡಿದ ಡೊನಾಲ್ಡ್ ಟ್ರಂಪ್

27/06/2025 6:30 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಹಾವೇರಿಯಲ್ಲಿ ಪತ್ರಕರ್ತರ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜೂ.30ಕ್ಕೆ
KARNATAKA

ಹಾವೇರಿಯಲ್ಲಿ ಪತ್ರಕರ್ತರ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜೂ.30ಕ್ಕೆ

By kannadanewsnow0729/06/2024 6:21 AM

ಬೆಂಗಳೂರು: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದಿಂದ ಏರ್ಪಡಿಸಿರುವ ಪತ್ರಕರ್ತರ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಾವೇರಿಯ ಶ್ರೀ ಗುರುಸಿದ್ದರಾಮೇಶ್ವರ ಕಲ್ಯಾಣ ಮಂಟಪದಲ್ಲಿ ಜೂ.30ರಂದು ಭಾನುವಾರ ಬೆಳಿಗ್ಗೆ 10.30ಕ್ಕೆ ನಡೆಯಲಿದೆ.

ಹಾವೇರಿ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಸಹಕಾರದಲ್ಲಿ ಏರ್ಪಡಿಸಿರುವ ಕಾರ್ಯಕ್ರಮವನ್ನು ಎಪಿಎಂಸಿ, ಸಕ್ಕರೆ ಮತ್ತು ಜವಳಿ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರು ಉದ್ಘಾಟಿಸಲಿದ್ದು, ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರು ದಿಕ್ಸೂಚಿ ಮಾತುಗಳನ್ನಾಡಲಿದ್ದಾರೆ. ಕಾನೂನು ಮತ್ತು ಸಂಸದೀಯ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಮತ್ತು ಉಪ ಸಭಾಪತಿ ರುದ್ರಪ್ಪ ಲಮಾಣಿ ಅವರು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನೆರವೇರಿಸಿಕೊಡಲಿದ್ದಾರೆ.

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ಮುಖ್ಯ ಸಚೇತಕ ಸಲೀಂ ಅಹಮದ್ ಅವರು ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ವಹಿಸಲಿದ್ದಾರೆ.

ಶಾಸಕರಾದ ಶ್ರೀನಿವಾಸ ಮಾನೆ, ಬಸವರಾಜ ಶಿವಣ್ಣನವರ, ಯು.ಬಿ.ಬಣಕಾರ, ಪ್ರಕಾಶ್ ಕೋಳಿವಾಡ, ಜಿಲ್ಲಾಧಿಕಾರಿ ರಘುನಂದನಮೂರ್ತಿ, ಜಿಪಂ ಸಿಇಒ ಅಕ್ಷಯ ಶ್ರೀಧರ, ಎಸ್ಪಿಅಂಶು ಕುಮಾರ್, ನಗರಸಭೆ ಮಾಜಿ ಅಧ್ಯಕ್ಷ ಸಂಜೀವ ಕುಮಾರ್ ನೀರಲಗಿ ಅವರು ಭಾಗವಹಿಸಲಿದ್ದಾರೆ.

ಜಿಲ್ಲಾ ವಾರ್ತಾಧಿಕಾರಿ ಡಾ.ಬಿ.ಆರ್.ರಂಗನಾಥ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ದಿಲೀಪ್ ಕುರಂದವಾಡಿ ಅವರು ವಿದ್ಯಾರ್ಥಿಗಳಿಗೆ ಪ್ರೇರಣಾ ಭಾಷಣ ಮಾಡಲಿದ್ದಾರೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಜಿ.ವಿ.ಲೋಕೇಶ, ಕಾರ್ಯದರ್ಶಿ ನಿಂಗಪ್ಪ ಚಾವಡಿ ಅವರು ತಿಳಿಸಿದ್ದಾರೆ. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ.90ಕ್ಕೂ ಹೆಚ್ಚು ಅಂಕ ಪಡೆದ ಪತ್ರಕರ್ತರ ಮಕ್ಕಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Pratibha Puraskar for children of journalists to be held in Haveri on June 30
Share. Facebook Twitter LinkedIn WhatsApp Email

Related Posts

BIG NEWS : 2025-26ನೇ ಸಾಲಿನ `ಗ್ರಾಮಪಂಚಾಯಿತಿ ನೌಕರರ ವರ್ಗಾವಣೆ’ : ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ

27/06/2025 6:40 AM2 Mins Read

SHOCKING : ಹಾಸನದಲ್ಲಿ `ಹೃದಯಾಘಾತ’ಕ್ಕೆ ಒಂದೇ ತಿಂಗಳಲ್ಲಿ 15 ಯುವಜನರು ಬಲಿ.!

27/06/2025 6:24 AM1 Min Read

ರೈತರಿಗೆ ಭರ್ಜರಿ ಗುಡ್ ನ್ಯೂಸ್ :30 ಸಾವಿರ ರೂ. ಗಡಿ ದಾಟಿದ ಕೊಬ್ಬರಿ ದರ, ಸಾರ್ವಕಾಲಿಕ ಗರಿಷ್ಠ ಬೆಲೆ ದಾಖಲೆ

27/06/2025 6:18 AM1 Min Read
Recent News

BIG NEWS : 2025-26ನೇ ಸಾಲಿನ `ಗ್ರಾಮಪಂಚಾಯಿತಿ ನೌಕರರ ವರ್ಗಾವಣೆ’ : ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ

27/06/2025 6:40 AM

ಮತದಾರರ ಪಟ್ಟಿಯಿಂದ ‘ಅಕ್ರಮ ವಲಸಿಗರನ್ನು’ ತೆಗೆದುಹಾಕಲು ಮನೆ ಮನೆಗೆ ತೆರಳಿದ ಚುನಾವಣಾ ಆಯೋಗ

27/06/2025 6:34 AM

ಚೀನಾ ಒಪ್ಪಂದದ ನಂತರ ಭಾರತದೊಂದಿಗೆ ‘ದೊಡ್ಡ ವ್ಯಾಪಾರ ಒಪ್ಪಂದದ’ ಸುಳಿವು ನೀಡಿದ ಡೊನಾಲ್ಡ್ ಟ್ರಂಪ್

27/06/2025 6:30 AM

SHOCKING : ಹಾಸನದಲ್ಲಿ `ಹೃದಯಾಘಾತ’ಕ್ಕೆ ಒಂದೇ ತಿಂಗಳಲ್ಲಿ 15 ಯುವಜನರು ಬಲಿ.!

27/06/2025 6:24 AM
State News
KARNATAKA

BIG NEWS : 2025-26ನೇ ಸಾಲಿನ `ಗ್ರಾಮಪಂಚಾಯಿತಿ ನೌಕರರ ವರ್ಗಾವಣೆ’ : ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ

By kannadanewsnow5727/06/2025 6:40 AM KARNATAKA 2 Mins Read

ಬೆಂಗಳೂರು :2025-26ನೇ ಸಾಲಿನ ಗ್ರಾಮ ಪಂಚಾಯತಿ ಕಾರ್ಯದರ್ಶಿ ಗ್ರೇಡ್-1 ಮತ್ತು ಗ್ರೇಡ್-2 ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ವರ್ಗಾವಣೆ…

SHOCKING : ಹಾಸನದಲ್ಲಿ `ಹೃದಯಾಘಾತ’ಕ್ಕೆ ಒಂದೇ ತಿಂಗಳಲ್ಲಿ 15 ಯುವಜನರು ಬಲಿ.!

27/06/2025 6:24 AM

ರೈತರಿಗೆ ಭರ್ಜರಿ ಗುಡ್ ನ್ಯೂಸ್ :30 ಸಾವಿರ ರೂ. ಗಡಿ ದಾಟಿದ ಕೊಬ್ಬರಿ ದರ, ಸಾರ್ವಕಾಲಿಕ ಗರಿಷ್ಠ ಬೆಲೆ ದಾಖಲೆ

27/06/2025 6:18 AM

BIG NEWS : ರಾಜ್ಯದ `SSLC’ ವಿದ್ಯಾರ್ಥಿಗಳೇ ಗಮನಿಸಿ : ಪರೀಕ್ಷೆ-3 ರ ಅಂತಿಮ `ಪ್ರವೇಶ ಪತ್ರ’ ವಿತರಣೆ

27/06/2025 6:10 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.