ಬೆಂಗಳೂರು: ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿ ಪ್ರತಾಪ್ ರೆಡ್ಡಿಯವರು, ಇಂದು ದಿಢೀರ್ ಬೆಳವಣಿಗೆಯಲ್ಲಿ ತಮ್ಮ ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ನಿವೃತ್ತಿಗೆ 2 ತಿಂಗಳು ಬಾಕಿ ಇರುವಾಗಲೇ, ಹುದ್ದೆಗೆ ಗುಡ್ ಬೈ ಹೇಳಿ ಹೊರ ನಡೆದಿದ್ದಾರೆ.
ಕರ್ನಾಟಕದ ಆಂತರಿಕ ಭದ್ರತೆ ವಿಭಾಗದ ಡಿಜಿಪಿಯಾಗಿದ್ದಂತ ಪ್ರತಾಪ್ ರೆಡ್ಡಿ ಅವರು, ವೈಯಕ್ತಿಕ ಕಾರಣ ನೀಡಿ, ತಮ್ಮ ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಮುಂಬರುವಂತ ಏಪ್ರಿಲ್.30ಕ್ಕೆ ತಮ್ಮನ್ನು ಹುದ್ದೆಯಿಂದ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ. ಪ್ರತಾಪ್ ರೆಡ್ಡಿ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿಯೂ ಸೇವೆ ಸಲ್ಲಿಸಿದ್ದರು. 1991ನೇ ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿರುವಂತ ಅವರು, ಮೂಲತಃ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯವರಾಗಿದ್ದಾರೆ.
ಭಾರತದಲ್ಲಿ Snapchat ಸರ್ವರ್ ಡೌನ್ : ಕಂಟೆಂಟ್ ‘ಅಪ್‌ಲೋಡ್’ ಸಮಸ್ಯೆ ಎದುರಿಸಿದ ಬಳಕೆದಾರರು