ನವದೆಹಲಿ: ಇಂದು ಮೋದಿಯವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕಾರಕ್ಕೂ ಮುನ್ನಾ, ಸಂಪುಟ ಸೇರಲಿರುವಂತ ಸಚಿವರೊಂದಿಗೆ ಚಹಾ ಪೇ ಚರ್ಚೆ ನಡೆಸುತ್ತಿದ್ದಾರೆ. ಈ ವೇಳೆಯಲ್ಲೇ ಕರ್ನಾಟಕದ ಸಂಸದರಾದಂತ ಪ್ರಹ್ಲಾದ್ ಜೋಶಿ, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ ಹಾಗೂ ವಿ ಸೋಮಣ್ಣಗೆ ಸಚಿವ ಸ್ಥಾನ ಸಿಗೋದು ಖಚಿತವಾಗಿದೆ.
ಕರ್ನಾಟಕದಿಂದ ಮೋದಿ 3.0 ಸಚಿವ ಸಂಪುಟವನ್ನು ಈ ನಾಲ್ವರು ಸೇರುವುದು ಖಚಿತವಾಗಿದೆ. ಇಂದು ಸಂಜೆ 7.15ಕ್ಕೆ ರಾಷ್ಟ್ರಪತಿ ಭವನದಲ್ಲಿ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದ್ದು, ಇದಕ್ಕೂ ಮುನ್ನಾ ಮೋದಿ ನಿವಾಸದಲ್ಲಿ ಬೆಳಿಗ್ಗೆ 11.30ಕ್ಕೆ ಕ್ಯಾಬಿನೆಟ್ ಸಚಿವರಿಗೆ ಚಹಾ ಕೂಟವನ್ನು ಆಯೋಗಿಸಲಾಗಿತ್ತು.
ಈ ಚಹಾ ಕೂಟದಲ್ಲಿ ಕರ್ನಾಟಕದಿಂದ ಪ್ರಹ್ಲಾದ್ ಜೋಶಿ, ಹೆಚ್.ಡಿ ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ ಹಾಗೂ ವಿ.ಸೋಮಣ್ಣ ಕೂಡ ಭಾಗಿಯಾಗಿದ್ದಾರೆ. ನೂತನ ಸಂಪುಟ ಸೇರಲಿರುವಂತ ಎಲ್ಲಾ ಕ್ಯಾಬಿನೆಟ್ ಸಚಿವರಿಗೆ ಸಲಹೆ, ಸೂಚನೆಗಳನ್ನು ಮೋದಿ ನೀಡಿದ್ದಾರೆ.
ಹೆಚ್.ಡಿ ಕುಮಾರಸ್ವಾಮಿ ಹಾಗೂ ಪ್ರಹ್ಲಾದ್ ಜೋಶಿಯವರಿಗೆ ಮೋದಿಯವರು ಕ್ಯಾಬಿನೆಟ್ ಖಾತೆ, ಶೋಭಾ ಕರಂದ್ಲಾಜೆ ಮತ್ತು ವಿ ಸೋಮಣ್ಣಗೆ ರಾಜ್ಯ ಖಾತೆ ಸಿಗುವಂತ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆ ಬಗ್ಗೆ ಇಂದು ಸಂಜೆಯೊಳಗೆ ಖಚಿತ ಮಾಹಿತಿ ಹೊರಬೀಳಲಿದೆ.
Watch Video: ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೂ ಮುನ್ನ ಮೋದಿ ನಿವಾಸದಲ್ಲಿ NDA ನಾಯಕರ ಸಭೆ: ಇಲ್ಲಿದೆ ವೀಡಿಯೋ
BREAKING : ಮೋದಿ ಸಂಪುಟದಲ್ಲಿ ಕುಮಾರಸ್ವಾಮಿಗೆ ಮಂತ್ರಿಗಿರಿ ಫಿಕ್ಸ್ : ಕೃಷಿ ಖಾತೆ ಮೇಲೆ ಕಣ್ಣಿಟ್ಟ ʻHDKʼ!