ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಪ್ರಕರಣ ಬೆಳಕಿಗೆ ಬಂದು ಕೆಲ ದಿನಗಳೇ ಕಳೆದಿದೆ. ಪ್ರಜ್ವಲ್ ರೇವಣ್ಣ ಮಾತ್ರ ವಿದೇಶದಲ್ಲಿ ಇದ್ದಾರೆಯೇ ಹೊರತು, ಬೆಂಗಳೂರಿಗೆ ಮರಳಿಲ್ಲ. ಈ ನಡುವೆ ಅವರ ವಿರುದ್ಧ 3ನೇ ಎಫ್ಐಆರ್ ದಾಖಲಾಗಿದ್ದು, ಪ್ರಜ್ವಲ್ ರೇವಣ್ಣಗೆ ಮತ್ತಷ್ಟು ಕಾನೂನಿನ ಕುಣಿಕೆ ಬಿಗಿಯಾದಂತೆ ಆಗಿದೆ.
ಅತ್ಯಾಚಾರಕ್ಕೆ ಒಳಗಾದಂತ ಸಂತ್ರಸ್ತ ಮಹಿಳೆಯೊಬ್ಬರು ಮೇ.8ರಂದು ಪೊಲೀಸರಿಗೆ ದೂರೊಂದನ್ನು ನೀಡಿದ್ದಾರೆ. ಈ ದೂರನ್ನು ಅಧರಿಸಿ ಎಸ್ಐಟಿ ಅಧಿಕಾರಿಗಳು ಪ್ರಜ್ವಲ್ ರೇವಣ್ಣ ವಿರುದ್ಧ ಕಠಿಣ ಸೆಕ್ಷನ್ ಗಳನ್ನು ಹಾಕಿ, ಕಾನೂನಿನ ಕುಣಿಕೆಯನ್ನು ಬಿಗಿಗೊಳಿಸಿದ್ದಾರೆ.
ಸಂತ್ರಸ್ತ ಮಹಿಳೆಯೊಬ್ಬರು ನೀಡಿದಂತ ದೂರಿನ ಹಿನ್ನಲೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಎಸ್ಐಟಿಯಿಂದ ಮೂರನೇ ರೇಪ್ ಕೇಸಲ್ಲಿ ಐಪಿಸಿ ಸೆಕ್ಷನ್ 354(ಸಿ)ರಡಿಯಲ್ಲಿ ಖಾಸಗಿ ಚಿತ್ರಗಳು ಸೆರೆಹಿಡಿದು ವೀಕ್ಷಿಸುವುದು. 354(ಎ)ರಡಿ ಲೈಂಗಿಕ ಅನುಕೂಲಕ್ಕಾಗಿ ಒತ್ತಾಯ, 376(2)ರಡಿ ಜನಪ್ರತಿನಿಧಿಗಳ ಸ್ಥಾನದಲ್ಲಿದ್ದೂ ಅತ್ಯಾಚಾರ. 354(ಬಿ) ಬಟ್ಟೆ ಹಿಡಿದು ಎಳೆದಾಡಿದ ಆರೋಪ ಸೇರಿದಂತೆ ವಿವಿಧ ಸೆಕ್ಷನ್ ಗಳನ್ನು ಹಾಕಿದ್ದಾರೆ. ಹೀಗಾಗಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಕಾನೂನು ಸಂಕಷ್ಟ ಎದುರಾಗಿದೆ.
BIG NEWS: ಪ್ರಜ್ವಲ್ ಅಶ್ಲೀಲ ವೀಡಿಯೋ ಕೇಸ್: ಕಾರ್ತಿಕ್, ದೇವರಾಜೇಗೌಡಗೆ ಎಸ್‌ಐಟಿ ನೋಟಿಸ್