ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಅವರು ಜರ್ಮನಿಯಲ್ಲಿ ಇದ್ದಾರೆ ಎನ್ನಲಾಗುತ್ತಿತ್ತು. ಆದ್ರೇ ಅವರು ಅಲ್ಲಿಯೂ ಇಲ್ಲ. ಎಲ್ಲಿದ್ದೀಯಪ್ಪ ಪ್ರಜ್ವಲ್ ಅಂತ ನೋಡೋದಾದ್ರೇ, ರಾಜ್ಯ ಸರ್ಕಾರಕ್ಕೆ ಪ್ರಜ್ವಲ್ ದುಬೈನಲ್ಲಿ ಇರೋ ಮಾಹಿತಿ ಕಲೆ ಹಾಕಿದೆ ಅಂತ ತಿಳಿದು ಬಂದಿದೆ.
ಮೇ.31ರಂದು ಬೆಂಗಳೂರಿಗೆ ವಿದೇಶದಿಂದ ಸಂಸದ ಪ್ರಜ್ವಲ್ ರೇವಣ್ಣ ವಾಪಾಸ್ ಆಗಲಿದ್ದಾರೆ ಎನ್ನಲಾಗುತ್ತಿದೆ. ಇದರ ನಡುವೆ ಇಂದು ತಮ್ಮ ವಿರುದ್ಧದ ಮೂರು ಪ್ರಕರಣಗಳಲ್ಲಿ ಜಾಮೀನಿಗಾಗಿ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದ್ದಾರೆ.
ಈ ನಡುವೆ ಸಂಸದ ಪ್ರಜ್ವಲ್ ರೇವಣ್ಣ ಅವರು ಜರ್ಮನಿಯಲ್ಲಿ ಇಲ್ಲ. ದುಬೈನಲ್ಲಿ ಇರೋ ಮಾಹಿತಿಯನ್ನು ರಾಜ್ಯ ಸರ್ಕಾರ ಪತ್ತೆ ಹಚ್ಚಿದೆ ಎನ್ನಲಾಗುತ್ತಿದೆ. ಜರ್ಮನಿಯಿಂದ ದುಬೈಗೆ ಹಾರಿರುವಂತ ಸಂಸದ ಪ್ರಜ್ವಲ್ ರೇವಣ್ಣ, ಅಲ್ಲಿ ಅಪಾರ್ಮೆಂಟ್ ಒಂದರಲ್ಲಿ ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಪ್ರಜ್ವಲ್ ರೇವಣ್ಣ ಅವರು ದುಬೈನ ಅಪಾರ್ಮೆಂಟ್ ಒಂದರಲ್ಲಿ ಉಳಿದುಕೊಳ್ಳೋದಕ್ಕೆ ಹಾಸನದ ಅವರ ಕೆಲ ಸ್ನೇಹಿತರು ಸಹಾಯ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
ಸ್ಯಾಂಡಲ್ ವುಡ್ ನಿರ್ಮಾಪಕರ ಗಲಾಟೆ ಕೇಸ್: ‘ಸ್ಪೂನ್’ನಿಂದ ಸತೀಶ್ ಹಲ್ಲೆ: ಎ.ಗಣೇಶ್ ಗಂಭೀರ ಆರೋಪ
ಮೇ 31ರೊಳಗೆ ಪ್ಯಾನ್ ಅನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಿ: ತೆರಿಗೆದಾರರಿಗೆ ಆದಾಯ ತೆರಿಗೆ ಇಲಾಖೆ ಸೂಚನೆ