ಶಿವಮೊಗ್ಗ: 400 ಮಹಿಳೆಯ ಮೇಲೆ ಪ್ರಜ್ವಲ್ ರೇವಣ್ಣ ಅತ್ಯಾಚಾರ ನಡೆಸಿದ್ದಾರೆ. ಕೃತ್ಯದ ವೀಡಿಯೋ ಸಹ ಮಾಡಿಕೊಂಡಿದ್ದಾನೆ. ಇದು ಲೈಂಗಿಕರ ಹಗರಣವಲ್ಲ ಸಾಮೂಹಿಕ ಅತ್ಯಾಚಾರ ಎಂಬುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿ ಇಂದು ಪ್ರಜಾಧ್ವನಿ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದಂತ ಅವರು, ಪ್ರಜ್ವಲ್ ರೇವಣ್ಣ ಕೃತ್ಯ ನಡೆಸಿರೋದಲ್ಲದೇ ವೀಡಿಯೋ ಕೂಡ ಮಾಡಿಕೊಂಡಿದ್ದಾನೆ. ಇದು ಲೈಂಗಿಕ ಹಗರಣವಲ್ಲ. ಬದಲಾಗಿ ಸಾಮೂಹಿಕ ಅತ್ಯಾಚಾರವಾಗಿದೆ ಎಂಬುದಾಗಿ ಆಕ್ರೋಶ ಹೊರ ಹಾಕಿದರು.
ಪ್ರಧಾನಿ ನರೇಂದ್ರ ಮೋದಿಯವರು ಅತ್ಯಾಚಾರಿಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಪ್ರಜ್ವಲ್ ರೇವಣ್ಣಗೆ ವೋಟ್ ಹಾಕಿದ್ರೆ ನನಗೆ ಮತ ಹಾಕಿದಂತೆ ಅಂದಿದ್ದಾರೆ. ಬಿಜೆಪಿ ನಾಯಕರಿಗೆ ಅತ್ಯಾಚಾರ ಅನ್ನೋದು ಗೊತ್ತಿಲ್ವ ಅಂತ ಪ್ರಶ್ನಿಸಿದರು
ಕ್ಯಾನ್ಸರ್ ಪ್ರಕರಣಗಳಿಗೆ 648 ಕೋಟಿ ಪರಿಹಾರ ನೀಡಲು `ಜಾನ್ಸನ್ & ಜಾನ್ಸನ್’ ಅಂಗಸಂಸ್ಥೆ ನಿರ್ಧಾರ
ರಾಹುಲ್ ಗಾಂಧಿಯನ್ನು ಭಾರತದ ಪ್ರಧಾನಿಯನ್ನಾಗಿ ಮಾಡಲು ಪಾಕ್ ಬಯಸಿದೆ: ಮೋದಿಯಿಂದ ಸ್ಪೋಟಕ ಮಾಹಿತಿ