ರಾಯಚೂರು: ಪದೇ ಪದೇ ಪ್ರಧಾನಿ ನರೇಂದ್ರ ಮೋದಿಯವರನ್ನು, ಬಿಜೆಪಿಯನ್ನು ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವೀಡಿಯೋ ಪ್ರಕರಣದಲ್ಲಿ ಏಕೆ ಎಳೆದು ತರುತ್ತೀರಿ? ಪ್ರಧಾನಿ ಮೋದಿಗೂ ಈ ಪ್ರಕರಣಕ್ಕೂ ಏನು ಸಂಬಂಧ ಎಂಬುದಾಗಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಾಗ್ಧಾಳಿ ನಡೆಸಿದ್ದಾರೆ.
ರಾಯಚೂರಿನ ಸಿಂಧನೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಈಗಾಗಲೇ ಪ್ರಜ್ವಲ್ ರೇವಣ್ಣ ಅಶ್ಲೀಲ ಪ್ರಕರಣದ ಬಗ್ಗೆ ಕೇಂದ್ರ ಗೃಹ ಸಚಿವರು ಸಲಹೆ ಕೊಟ್ಟಿದ್ದಾರೆ. ನೋಟಿಸ್ ಬಳಿಕ ಆ ವ್ಯಕ್ತಿ ಒಂದು ವಾರ ಟೈಂ ಕೇಳಿದ್ದಾರೆ. ಇಲ್ಲಿಗೆ ಆ ವ್ಯಕ್ತಿ ಬರಲ್ಲ ಅಂದಿಲ್ಲವಲ್ಲ ಎಂದರು.
ಮಾಜಿ ಸಚಿವ ಹೆಚ್.ಡಿ ರೇವಣ್ಣ ಕೂಡ ಸಮಯ ಕೇಳಿದ್ದಾರೆ. ಮೊದಲ ಸಮನ್ಸ್ ಹಂತದಲ್ಲೇ ಈ ರೀತಿಯಾಗಿ ಮಾಡುತ್ತಿದ್ದೀರಿ. ನೀವು ಹಾಗೂ ನಿಮ್ಮ ಡಿಸಿಎಂ ಹೇಳಿಕೆ ಕೊಡುವ ಮೂಲಕ ಪ್ರಕರಣದ ತನಿಖೆ ಸರಿಯಾಗಿ ನಡೆಸಲು ಹೇಳುತ್ತಿದ್ದಿರೋ ಅಥವಾ ಪ್ರಚಾರಕ್ಕೆ ಈ ಪ್ರಕರಣವನ್ನು ಬಳಕೆ ಮಾಡ್ತಿದ್ದಿರೋ ಎಂದು ಕಿಡಿಕಾರಿದರು.
ನಾನು ದಾಖಲೆ ರೆಡಿ ಮಾಡಿದ್ದೇನೆ. ಯಾವಾಗ ಬೇಕಾದ್ರೂ ಬಿಡುಗಡೆ ಮಾಡುತ್ತೇನೆ ಎಂಬುದಾಗಿ ಹೊಸ ಬಾಂಬ್ ಸಿಡಿಸಿದರು.
ನಾನು ಅಶ್ಲೀಲ ಕ್ಯಾಸೆಟ್ ಬಿಟ್ಟ ಅಂತಾರೆ. ನನಗೇನು ಹುಚ್ಚಾ ಎಂಬುದಾಗಿ ಕಿಡಿಕಾರಿದಂತ ಅವರು, ಟೆಂಟ್ ನಲ್ಲಿ ಅಶ್ಲೀಲ ಸಿನಿಮಾ ಮಾರೋರಿಗೆ ಗೊತ್ತು ಎಂದರು.
ರಾಹುಲ್ ಗಾಂಧಿಯವರು ಪ್ರಜ್ವಲ್ 400 ಮಹಿಳೆಯರನ್ನು ರೇಪ್ ಮಾಡಿದ್ದಾರೆ ಎನ್ನುತ್ತಾರೆ. ಅವರೊಬ್ಬ ಮಾಜಿ ಪ್ರಧಾನಿ ಮಗನಾ ಎಂದು ಪ್ರಶ್ನಿಸಿದಂತ ಅವರು, ರಾಹುಲ್ ಗಾಂಧಿ ಹೇಳಿಕೆಗೆ ಕೆಂಡಾಮಂಡಲರಾದರು.
ಡಿಸಿಎಂ, ಗೃಹ ಸಚಿವರೇ ರಾಹುಲ್ ಗಾಂಧಿಗೆ ಈ ಮಾಹಿತಿ ಕೊಟ್ಟಿರಬೇಕು. ಹೀಗಾಗಿ ರಾಹುಲ್ ಗಾಂಧಿ ಬಳಿ ಮಾಹಿತಿ ಇದೆ. ಎಸ್ ಐಟಿ ಅಧಿಕಾರಿಗಳು ರಾಹುಲ್ ಗಾಂಧಿಗೆ ನೋಟಿಸ್ ಕೊಡಿ ಎಂಬುದಾಗಿ ಆಗ್ರಹಿಸಿದರು.
BREAKING : ಲೋಕಸಭಾ ಚುನಾವಣೆ : ರಾಯ್ ಬರೇಲಿ ಕ್ಷೇತ್ರದಿಂದ ‘ರಾಹುಲ್ ಗಾಂಧಿ’ ನಾಮಪತ್ರ ಸಲ್ಲಿಕೆ
ಕೋವಿಶೀಲ್ಡ್ ಬಗ್ಗೆ ಯಾವುದೇ ಸುತ್ತೋಲೆ ಹೊರಡಿಸಿಲ್ಲ: ಸ್ಪಷ್ಟನೆ ನೀಡಿದ ಆರೋಗ್ಯ ಇಲಾಖೆ