ಹಾಸನ: ಮಾಜಿ ಸಚಿವ ಹೆಚ್.ಡಿ ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ದೂರು ನೀಡಿರುವಂತ ಸಂತ್ರಸ್ತ ಮಹಿಳೆ ಸರಿಯಿಲ್ಲ. ದೇವೇಗೌಡರ ಕುಟುಂಬಕ್ಕೆ ಕಪ್ಪುಚುಕ್ಕೆ ತರೋದಕ್ಕಾಗಿ ದೂರು ನೀಡಿದ್ದಾರೆ ಎಂಬುದಾಗಿ ಸಂತ್ರಸ್ತ ಮಹಿಳೆಯ ಸಂಬಂಧಿಕರೇ ಗಂಭೀರ ಆರೋಪ ಮಾಡಿದ್ದಾರೆ.
ಇಂದು ಹಾಸನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿದಂತ ಸಂತ್ರಸ್ತ ದೂರುದಾರ ಮಹಿಳೆಯ ಸಂಬಂಧಿಕರ ಕುಟುಂಬಸ್ಥರು, ಪ್ರಜ್ವಲ್ ರೇವಣ್ಣ, ಹೆಚ್.ಡಿ ರೇವಣ್ಣ ಅವರ ವಿರುದ್ಧ ದೂರು ನೀಡಿರುವಂತ ಮಹಿಳೆ ಸರಿಯಿಲ್ಲ. ತುಂಬಾ ಸಾಲ ಮಾಡಿಕೊಂಡಿದ್ದಾರೆ. ಜಮೀನು ಸಹ ಮಾರಾಟ ಮಾಡಿದ್ರು ಎಂದರು.
ದೇವೇಗೌಡ ಅವರ ಕುಟುಂಬಕ್ಕೆ ಕಪ್ಪುಚುಕ್ಕೆ ತರೋದಕ್ಕಾಗಿಯೇ ದೂರು ನೀಡಿದ್ದಾರೆ. 5 ವರ್ಷಗಳ ಹಿಂದೆ ಸುಮ್ಮನೇ ಇದ್ದು, ಚುನಾವಣೆ ವೇಳೆ ದೂರು ನೀಡಿದ್ದಾರೆ. ಸಂತ್ರಸ್ತೆಯನ್ನು ಹೆದರಿಸಿ ಕರೆದುಕೊಂಡು ಹೋಗಿ ದೂರು ಕೊಡಿಸಿದ್ದಾರೆ. ರೇವಣ್ಣ ಕುಟುಂಬ ನಮಗೆ ಸಂಬಂಧಿಕರು. ಸುಳ್ಳು ದೂರು ನೀಡಿದ್ದಾರೆ ಎಂಬುದಾಗಿ ಹೇಳಿದರು.
ಅಂದಹಾಗೇ ಹಾಸನ ಜಿಲ್ಲೆ ಹೊಳೇನರಸೀಪುರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತ ಮಹಿಳೆ ದೂರು ನೀಡಿದ್ದಾರೆ. ದೂರು ನೀಡಿರುವ ಮಹಿಳೆ ವಿರುದ್ಧ ಮಾತ್ರ ಸುದ್ದಿಗೋಷ್ಠಿ ನಡೆಸಿದ್ದೇವೆ. ಉಳಿದ ಅಶ್ಲೀಲ ವೀಡಿಯೋಗಳಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂಬುದಾಗಿ ತಿಳಿಸಿದರು.
ದ್ವಿತೀಯ PUC ಪರೀಕ್ಷೆ-2: ಮೊದಲ ದಿನ 25,790 ವಿದ್ಯಾರ್ಥಿಗಳು ಹಾಜರ್, 4609 ಗೈರು | Karnataka 2nd PUC Exam-2
ಪ್ರಧಾನಿ ಮೋದಿ ಮುಂದಿನ ಗುರಿ ‘ಶೂನ್ಯ ವಿದ್ಯುತ್ ಬಿಲ್’, ಪ್ರತಿ ಮನೆಯಲ್ಲೂ ‘ಸೌರ ಫಲಕ’ ಅಳವಡಿಕೆ