ಹಾಸನ: ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಪ್ರಕರಣ ಸಂಬಂಧ ಇಂದು ಮತ್ತೆ ಎಸ್ಐಟಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಏಕಕಾಲಕ್ಕೆ ಹಾಸನ ಜಿಲ್ಲೆಯ 3 ಕಡೆ ಎಸ್ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಸರ್ಚ್ ವಾರೆಂಟ್ ನೋಂದಿಗೆ ಆಗಮಿಸಿರುವಂತ ಎಸ್ಐಟಿ ಪೊಲೀಸರು, ಹಾಸನ ಜಿಲ್ಲೆಯ 3 ಕಡೆ ದಾಳಿ ನಡೆಸಿದ್ದಾರೆ. ಹತ್ತಾರು ಅಧಿಕಾರಿಗಳ ತಂಡದಿಂದ ಮೂರು ಕಡೆ ಶೋಧಕಾರ್ಯ ನಡೆಸಿದ್ದಾರೆ.
ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀ ವೀಡಿಯೋ ಪ್ರಕರಣ ಸಂಬಂಧ ಹೊಳೆನರಸೀಪುರ ರೇವಣ್ಣ ಮನೆ, ಹಾಸನದ ಎಂ.ಪಿ ಮನೆಯ ಮೇಲೆ ದಾಳಿ ನಡೆಸಲಾಗಿದೆ. ಇದಲ್ಲದೇ ಚನ್ನರಾಯಪಟ್ಟಣದ ಗನ್ನಿಕಡ ತೋಟದ ಮನೆಯಲ್ಲೂ ಎಸ್ಐಟಿ ಶೋಧ ನಡೆಸುತ್ತಿದೆ.
ಇನ್ಸ್ ಪೆಕ್ಟರ್ ರಾವ್ ಗಣೇಶ್, ಶೋಭಾ ನೇತೃತ್ವದಲ್ಲಿ ದಾಳಿಯನ್ನು ನಡೆಸಲಾಗಿದೆ. ಎಫ್ ಎಸ್ ಎಲ್ ತಂಡದೊಂದಿಗೆ ಎಸ್ಐಟಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ.
BREAKING : ವೀರ ಸಾವರ್ಕರ್ ಮೇಲ್ಸೇತುವೆ ನಾಮಫಲಕಕ್ಕೆ ಮಸಿ ಬಳಿದ ಪುಂಡರು : ಮೂವರ ಬಂಧನ
ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ಪ್ರಕರಣ: ಕೇಜ್ರಿವಾಲ್ ಆಪ್ತ ‘ಬಿಭವ್ ಕುಮಾರ್’ಗೆ 3 ದಿನ ಪೊಲೀಸ್ ಕಸ್ಟಡಿಗೆ