ಬೆಂಗಳೂರು: ಮೋದಿ ಅವರೇ ನಿಮ್ಮ ಮಿತ್ರ ಪಕ್ಷದ ಅಭ್ಯರ್ಥಿ ಸಾವಿರಾರು ಮಹಿಳೆಯರ ಮಾಂಗಲ್ಯ ಕಸಿದಿದ್ದಾರೆ. ಇದರ ವಿರುದ್ಧ ನಿಮ್ಮ ಮೌನವೇಕೆ? ನಿಮ್ಮ ಮಾಂಗಲ್ಯ ಕಸಿಯುವ ಹೇಳಿಕೆಯನ್ನು ಹಿಂದಕ್ಕೆ ಪಡೆಯಬೇಕು, ಕ್ಷಮೆ ಕೇಳಬೇಕು. ರಾಜ್ಯದ ಜೆಡಿಎಸ್ ಹಾಗೂ ಬಿಜೆಪಿ ನಾಯಕರು ತಮ್ಮ ಎಲ್ಲಾ ಸ್ಥಾನಗಳಿಗೂ ರಾಜೀನಾಮೆ ಕೊಡಬೇಕು ಎಂಬುದಾಗಿ ಕಾಂಗ್ರೆಸ್ ನ ಮಂಜುಳಾ ನಾಯ್ಡು ಆಗ್ರಹಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ಪ್ರಜ್ವಲ್ ರೇವಣ್ಣ ಅವರ ಕಾಮ ಕಾಂಡ ಇಡೀ ವಿಶ್ವ, ದೇಶದ ನಾಗರೀಕ ಸಮಾಜ ತಲೆ ತಗ್ಗಿಸುವ ಹಾಗೂ ಅವಮಾನಕರ ಸಂಗತಿ. ಕೆಲಸದ ಜಾಗದಲ್ಲಿ ಹೆಣ್ಣುಮಕ್ಕಳ ಮೇಲೆ ಶೋಷಣೆ ನಡೆಯುತ್ತದೆ ಎಂದು ಕಾನೂನು ತರುವ ರಾಜಕಾರಣಿಯೇ ತನ್ನ ಸುತ್ತ ಇರುವ ಮಹಿಳೆಯರನ್ನು ಬಳಿಸಿಕೊಂಡು ಮಾಡಿರುವ ಕೃತ್ಯ ನಾಚಿಕೆಗೇಡು ಎಂಬುದಾಗಿ ಕಿಡಿಕಾರಿದರು.
ನೂರಾರು ವರ್ಷಗಳಿಂದ ಹೋರಾಟ ಮಾಡಿ ಮಹಿಳೆಯರ ಬದುಕಿಗೆ ಘನತೆ ತಂದು ಕೊಟ್ಟರೆ ಇವರು ಅದನ್ನು ಹಾಳು ಮಾಡಿ ಕೆಟ್ಟ ಉದಾಹರಣೆಯನ್ನು ಸಮಾಜಕ್ಕೆ ಕೊಟ್ಟಿರುವುದು ಹೀನ ಕೃತ್ಯ. ಶೋಷಣೆಗೆ ಒಳಗಾದ ಮಹಿಳೆಯರು ಹೊರಬಂದು ಈತನ ವಿರುದ್ಧ ನಿಲ್ಲಬೇಕಾಗಿದೆ. ಎಸ್ ಐ ಟಿ ಮತ್ತು ಕೋರ್ಟ್ ಮಾನಿಟರಿಂಗ್ ಎಲ್ಲವು ಒಟ್ಟಾಗಿ ನಡೆಯಬೇಕಿದೆ. ಸಾಮಾಜಿಕ ಜಾಲತಾಣಗಳಿಂದ ಹೊರಗೆ ಬರದೇ ಇದ್ದರೆ ಇನ್ನಷ್ಟು ಸಾವಿರಾರು ಹೆಣ್ಣುಮಕ್ಕಳ ಮಾನ ಹರಾಜಾಗಿ ಹೋಗುತ್ತಿತ್ತು. ನಮ್ಮ ಕಾಂಗ್ರೆಸ್ ಸರ್ಕಾರ ಈ ಮಾನಗೆಟ್ಟ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿದೆ ಎಂದರು.
ಇಂತಹ ಕೃತ್ಯಗಳನ್ನು ಇತಿಹಾಸದಲ್ಲಿ ಕೇಳುತ್ತಾ ಇದ್ದೆವು. ಆದರೆ ಇಂದು ಕಣ್ಣಾರೆ ಕಂಡಿದ್ದೇವೆ. ಹಿಟ್ಲರ್ ನಂತೆ ಪ್ರಜ್ವಲ್ ರೇವಣ್ಣ ನಡೆದುಕೊಂಡಿದ್ದಾನೆ. ಸರ್ಕಾರ ಸಂತ್ರಸ್ತ ಮಹಿಳೆಯರಿಗೆ ರಕ್ಷಣೆ ಕೊಡಬೇಕು. ಆರೋಪಿಗೆ ಉಗ್ರವಾದ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ದೇಶದ ಪ್ರಧಾನಿ ಮೋದಿ ಅವರಿಗೆ ಮೊದಲು ನಾಚಿಕೆ ಆಗಬೇಕು. ಕಾಂಗ್ರೆಸ್ ಮಹಿಳೆಯರ ಮಾಂಗಲ್ಯ ಕಾಸಿಯುತ್ತದೆ ಎಂದು ಹೇಳಿದ್ದಾರೆ. ದೇಶದ ಪ್ರಧಾನಿ ನಿರುದ್ಯೋಗ, ಆರ್ಥಿಕತೆ, ಆಡಳಿತ, ನೀತಿಗಳ ಬಗ್ಗೆ ಮಾತನಾಡಬೇಕು. ಅವರೇ ಹೀಗೆ ಮಾತನಾಡಿ ಹುದ್ದೆಗೆ ಇದ್ದ ಘನತೆ ಹಾಳು ಮಾಡಿದ್ದಾರೆ ಎಂಬುದಾಗಿ ಗುಡುಗಿದರು.
BREAKING: ಹಾಸನ ‘ಪೆನ್ ಡ್ರೈವ್’ ಕೇಸ್: ತನಿಖೆಗೆ ‘SIT ತಂಡ’ ರಚಿಸಿ ‘ರಾಜ್ಯ ಸರ್ಕಾರ’ ಅಧಿಕೃತ ಆದೇಶ