ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅಶ್ಲೀಲ ವೀಡಿಯೋ ಪ್ರಕರಣವನ್ನು ರಾಜ್ಯ ಸರ್ಕಾರ ಎಸ್ಐಟಿ ಪೊಲೀಸರ ತನಿಖೆಗೆ ವಹಿಸಿತ್ತು. ಈ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ಎಸ್ಐಟಿ ಪರವಾಗಿ ವಾದಿಸೋದಕ್ಕೆ ಹೆಚ್ಚುವರಿ ಎಸ್ ಪಿಪಿಯಾಗಿ ಜಾಯ್ನಾ ಕೊಥಾರಿ ಅವರನ್ನು ನೇಮಿಸಲಾಗಿತ್ತು. ಇಂತಹ ಹುದ್ದೆಗೆ ಅವರು ರಾಜೀನಾಮೆ ನೀಡಿದ್ದಾರೆ.
ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಪ್ರಕರಣ, ಜೆಡಿಎಸ್ ಶಾಸಕ ಹೆಚ್.ಡಿ ರೇವಣ್ಣ ವಿರುದ್ಧದ ಮಹಿಳೆ ಕಿಡ್ನ್ಯಾಪ್ ಪ್ರಕರಣ, ಭವಾನಿ ರೇವಣ್ಣ ವಿರುದ್ಧದ ಸಂತ್ರಸ್ತೆ ಕಿಡ್ನ್ಯಾಪ್ ಪ್ರಕರಣವನ್ನು ರಾಜ್ಯ ಸರ್ಕಾರ ಎಸ್ಐಟಿ ಪೊಲೀಸರ ಮೂಲಕ ತನಿಖೆ ನಡೆಸುತ್ತಿದೆ. ಈಗಾಗಲೇ ಹಲವರನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿದೆ. ಆರೋಪಿಗಳಿಗೆ ಸಂಬಂಧಿಸಿದಂತ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ಹೆಚ್ಚುವರಿ ಎಸ್ ಪಿಪಿಯಾಗಿ ಜಾಯ್ನಾ ಕೊಥಾರಿ ಸಮರ್ಥವಾಗೇ ವಾದಿಸಿದ್ದರು.
ಪ್ರಜ್ವಲ್, ರೇವಣ್ಣ, ಭವಾನಿ ಅವರು ಪ್ರಕರಣದಲ್ಲಿ ಮಧ್ಯಂತರ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಂತ ವೇಳೆಯಲ್ಲಿ ಎಸ್ಐಟಿ ಪರವಾಗಿ ಹೆಚ್ಚುವರಿ ಎಸ್ ಪಿಪಿಯಾಗಿ ವಾದಿಸಿದ್ದಂತ ಜಾಯ್ನಾ ಕೊಥಾರಿ ಅವರು, ಜಾಮೀನು ನೀಡದಂತೆ ನ್ಯಾಯಪೀಠಕ್ಕೆ ಮನವಿ ಮಾಡಿದ್ದರು. ಪ್ರಕರಣದಲ್ಲಿ ಹೆಚ್ಚಿನ ತನಿಖೆಗಾಗಿ ಎಸ್ಐಟಿ ಅಧಿಕಾರಿಳ ವಶಕ್ಕೆ ನೀಡುವಂತೆಯೂ ಕೋರಿದ್ದರು. ಈ ರೀತಿಯಾಗಿ ವಾದಿಸಿದ್ದಂತ ಹೆಚ್ಚುವರಿ ಎಸ್ ಪಿಪಿ ಜಾಯ್ನಾ ಕೊಥಾರಿ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿರುವುದಾಗಿ ತಿಳಿದು ಬಂದಿದೆ.
BREAKING: ವಿಮಾನ ಅಪಘಾತದಲ್ಲಿ ಮಲವಿ ಉಪಾಧ್ಯಕ್ಷ ಸೌಲೋಸ್ ಚಿಲಿಮಾ ಸೇರಿ 9 ಮಂದಿ ಸಾವು: ಅಧ್ಯಕ್ಷರ ಖಚಿತ ಮಾಹಿತಿ