ಹಾಸನ: ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಸಂಸದ ಡಿ.ಕೆ ಸುರೇಶ್ ಆರೋಪದ ಬೆನ್ನಲ್ಲೇ, ಈಗ ಅಶ್ಲೀಲ ವೀಡಿಯೋ ಕೇಸ್ ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಅದೇ ಹಾಸನದ ಸಂಸದರ ಸರ್ಕಾರಿ ನಿವಾಸದಲ್ಲೇ ನೀಚ ಕೃತ್ಯ ನಡೆದಿದೆ ಎನ್ನಲಾಗುತ್ತಿದೆ.
ಹಾಸನದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಮೀಪದಲ್ಲೇ ಸಂಸದರ ಸರ್ಕಾರಿ ನಿವಾಸವಿದೆ. 2019ರಲ್ಲಿ ಹೆಚ್.ಡಿ ದೇವೇಗೌಡ ಪ್ರಧಾನಿಯಾಗಿದ್ದಂತ ಸಂದರ್ಭದಲ್ಲಿ ಅವರಿಗೆ ಅನುಕೂಲ ಕಲ್ಪಿಸೋ ಕಾರಣಕ್ಕಾಗಿ ಸರ್ಕಾರದಿಂದಲೇ ಸಂಸದರ ನಿವಾಸವನ್ನು ಕಟ್ಟಿಸಿಕೊಡಲಾಗಿತ್ತು. ಹಾಸನ ಸಂಸದರಾಗಿ ಪ್ರಜ್ವಲ್ ರೇವಣ್ಣ ಆಯ್ಕೆಯಾದ ನಂತ್ರ, ಅವರಿಗೆ ನಿವಾಸವನ್ನು ಹಸ್ತಾಂತರಿಸಲಾಗಿತ್ತು.
ಪ್ರಜ್ವಲ್ ರೇವಣ್ಣ ಅವರು ಹಾಸನಕ್ಕೆ ಬಂದಾಗಲೆಲ್ಲೇ ಸಂಸದರ ನಿವಾಸದಲ್ಲೇ ಉಳಿದು ಕೊಳ್ಳುತ್ತಿದ್ದರಂತೆ. ಎರಡು ಅಂತಸ್ತು ಒಳಗೊಂಡಿರುವಂತ ಸಂಸದರ ನಿವಾಸದಲ್ಲಿ ಕೆಳ ಅಂತಸ್ತು ಹಾಗೂ ಮೊದಲ ಮಹಡಿಯನ್ನು ಒಳಗೊಂಡಿರುವಂತ ನಿವಾಸವಾಗಿದೆ. ಇದೇ ನಿವಾಸದಲ್ಲಿ ಅಂದು ದೇವೇಗೌಡ ಅವರಿಗೆ ಅನುಕೂಲವಾಗಲಿ ಅಂತ ಲಿಫ್ಟ್ ವ್ಯವಸ್ಥೆ ಕೂಡ ಮಾಡಲಾಗಿತ್ತು.
ಹಾಸನಕ್ಕೆ ಬಂದಾಗಲೆಲ್ಲ ಸಂಸದ ಪ್ರಜ್ವಲ್ ರೇವಣ್ಣ ಇದೇ ನಿವಾಸದಲ್ಲಿ ಉಳಿದುಕೊಳ್ಳುತ್ತಿದ್ದರಂತೆ. ಒಟ್ಟು 4 ಕೊಠಡಿಗಳನ್ನು ಈ ಸರ್ಕಾರಿ ನಿವಾಸ ಒಳಗೊಂಡಿದೆ. ನೆಲ ಅಂತಸ್ತಿನಲ್ಲಿ ಎರಡು ಕೊಠಡಿ, ಮೊದಲ ಮಹಡಿಯಲ್ಲಿ ಎರಡು ಕೊಠಡಿಗಳಿದ್ದಾವೆ. ಇಂತಹ ಸಂಸದರ ಸರ್ಕಾರಿ ನಿವಾಸದಲ್ಲೇ ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋಗಳನ್ನು ಒಳಗೊಂಡು ವೈರಲ್ ಆಗಿರುವಂತ ನೀಚ ಕೃತ್ಯವನ್ನು ಎಸಗಿರೋದಾಗಿ ಹೇಳಲಾಗುತ್ತಿದೆ. ಆ ಬಗ್ಗೆ ತನಿಖೆಯಿಂದ ಮಾಹಿತಿ ತಿಳಿದು ಬರಬೇಕಿದೆ.
ಬೆಂಗಳೂರು: ಸಹಪಾಠಿಯಿಂದ 35 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ 10ನೇ ತರಗತಿ ವಿದ್ಯಾರ್ಥಿ ಬಂಧನ
‘ಪ್ರಜ್ವಲ್ ಅಶ್ಲೀಲ ವೀಡಿಯೋ’ ಬಿಡುಗಡೆಗೆ ‘ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ’ಯೇ ಕಾರಣ- ರಮೇಶ್ ಬಾಬು
BIG NEWS: ನಮಗೆ ತೊಂದ್ರೆ ಕೊಟ್ರೆ ‘ಸೂಸೈಡ್’ ಮಾಡಿಕೊಳ್ತೀವಿ: SIT ಮುಂದೆ ಹೇಳಿಕೆಗೆ ‘ಸಂತ್ರಸ್ತೆ’ಯರು ಹಿಂದೇಟು