Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ‘ಅಗ್ನಿವೀರ್’ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳೇ ಗಮನಿಸಿ : ಜೂ.30ರಿಂದ ಪ್ರವೇಶ ಪರೀಕ್ಷೆ ಆರಂಭ | Agni veer Recruitment 2025

18/06/2025 5:34 AM
vidhana soudha

ರಾಜ್ಯ ಸರ್ಕಾರದಿಂದ ‘ಆಡಳಿತ ಯಂತ್ರ’ಕ್ಕೆ ಮೇಜರ್ ಸರ್ಜರಿ: ’16 IAS ಅಧಿಕಾರಿ’ ವರ್ಗಾವಣೆ ಮಾಡಿ ಆದೇಶ | IAS Officer Transfer

18/06/2025 5:30 AM

ವಾಹನ ಮಾಲೀಕರೇ ಗಮನಿಸಿ : ನಿಮ್ಮ ವಾಹನದ ‘RC’ ಕಳೆದು ಹೋಗಿದ್ರೆ ಜಸ್ಟ್ ಹೀಗೆ ಡೌನ್ಲೋಡ್ ಮಾಡಿ!

18/06/2025 5:30 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಪೆನ್‌ ಡ್ರೈವ್ ಪ್ರಕರಣ’ದ ಬಗ್ಗೆ ಮೊದಲೇ ‘ಪ್ರಜ್ವಲ್‌ ರೇವಣ್ಣ’ ಸಂಧಾನ ನಡೆಸಿದ್ದರು: ಹೊಸ ಬಾಂಬ್ ಸಿಡಿಸಿದ ‘ರಮೇಶ್ ಬಾಬು’
KARNATAKA

‘ಪೆನ್‌ ಡ್ರೈವ್ ಪ್ರಕರಣ’ದ ಬಗ್ಗೆ ಮೊದಲೇ ‘ಪ್ರಜ್ವಲ್‌ ರೇವಣ್ಣ’ ಸಂಧಾನ ನಡೆಸಿದ್ದರು: ಹೊಸ ಬಾಂಬ್ ಸಿಡಿಸಿದ ‘ರಮೇಶ್ ಬಾಬು’

By kannadanewsnow0901/05/2024 3:28 PM

ಬೆಂಗಳೂರು: ಪೆನ್ ಡ್ರೈವ್ ಬಿಡುಗಡೆಗೂ ಮುನ್ನವೇ, ಬಿಡುಗಡೆ ಮಾಡದಂತೆ ಮೊದಲೇ ಸಂಧಾನವನ್ನು ಪ್ರಜ್ವಲ್ ರೇವಣ್ಣ ನಡೆಸಿದ್ದರು ಎಂಬುದಾಗಿ ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷರು, ಮಾಜಿ ಪರಿಷತ್ ಸದಸ್ಯರಾಗಿರುವಂತ ರಮೇಶ್ ಬಾಬು ಹೊಸ ಬಾಂಬ್ ಸಿಡಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ಪೆನ್‌ ಡ್ರೈವ್‌ ವಿಚಾರ ಕುಮಾರಸ್ವಾಮಿ ಹಾಗೂ ಬಿಜೆಪಿಯ ಎಲ್ಲಾ ನಾಯಕರಿಗೆ ಮೊದಲೇ ತಿಳಿದಿತ್ತು. ಬಿಜೆಪಿ ನಾಯಕ, ವಕೀಲ ದೇವರಾಜೇಗೌಡ ಹಾಗೂ ಮಾಜಿ ಶಾಸಕ ಪ್ರೀತಂ ಗೌಡ ಕೂಡ ಕುಮಾರಸ್ವಾಮಿ ಅವರನ್ನು ಭೇಟಿಯಾಗಿದ್ದರು ಎಂಬುದಾಗಿ ಗಂಭೀರ ಆರೋಪ ಮಾಡಿದ್ದಾರೆ.

ಕುಮಾರಸ್ವಾಮಿ ಅವರು ಅನವಶ್ಯಕವಾಗಿ ತಮ್ಮ ಕುಟುಂಬದ ಒಳ ಜಗಳವನ್ನು ಕಾಂಗ್ರೆಸ್‌ ಪಕ್ಷ, ಡಿ.ಕೆ.ಶಿವಕುಮಾರ್ , ಸಿಎಂ ಸಿದ್ದರಾಮಯ್ಯ ಅವರ ಮೇಲೆ ಹಾಕುತ್ತಿದ್ದಾರೆ. ಉದ್ದೇಶಪೂರ್ವಕವಾಗಿ ಇವರ ಹೆಸರು ತರುವುದು ಬೇಡ. ತನಿಖೆಯ ಹಾದಿ ತಪ್ಪಿಸುವುದು ಬಿಟ್ಟು ತನಿಖೆ ಪೂರಕವಾಗಿ ನಡೆದುಕೊಳ್ಳಿ. ವಾಸ್ತವತೆಯ ಬಗ್ಗೆ ಮಾತನಾಡಿ ಎಂದು ಒತ್ತಾಯಿಸಿದ್ದಾರೆ.

ಬಿಜೆಪಿಗೆ ಜೆಡಿಎಸ್‌ ಮೇಲೆ ಇರುವ ಕೋಪವನ್ನು ಈ ರೀತಿಯಾಗಿ ತೀರಿಸಿಕೊಳ್ಳುವ ಕೆಲಸ ನಡೆದಿದೆ. ಹುಣಸೂರಿನಿಂದ ಪ್ರಜ್ವಲ್‌ ಅವರು ಸ್ಪರ್ಧಿಸಬೇಕು ಎನ್ನುವ ಚರ್ಚೆ ಬಂದಾಗ ʼನಮ್ಮ ಪಕ್ಷದಲ್ಲಿ ಸೂಟ್‌ ಕೇಸ್‌ ಸಂಸ್ಕೃತಿ ಇದೆ ಅದು ಹೋಗುವ ತನಕ ಇದೆಲ್ಲಾ ನಿಲ್ಲುವುದಿಲ್ಲʼ ಎಂದಿದ್ದರು. ಈ ಕಾರಣಕ್ಕೆ ರೇವಣ್ಣ ಮತ್ತು ಕುಮಾರಸ್ವಾಮಿ ಕುಟುಂಬದ ನಡುವೆ ಅಸಮಾಧಾನ ಹೊತ್ತಿಕೊಂಡಿತು ಎಂದು ಹೇಳಿದ್ದಾರೆ.

ಭವಾನಿ ರೇವಣ್ಣ ಅವರು ಸಹ ಕೆ.ಆರ್‌.ನಗರ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ ಎಂದಾಗ ಕುಮಾರಸ್ವಾಮಿ ಅವರು ಅವಕಾಶ ಕೊಡಲಿಲ್ಲ. ಮತ್ತೆ ಭವಾನಿ ರೇವಣ್ಣ ಅವರು ಹಾಸನದಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದಾಗ ಕುಮಾರಸ್ವಾಮಿ ಎಂಥೆಂತಾ ಮಾತುಗಳನ್ನು ಆಡಿದರು. ಆರ್‌. ಆರ್ ನಗರದಿಂದಲೂ ಪ್ರಜ್ವಲ್‌ ಸ್ಪರ್ಧೆ ಮಾಡುತ್ತೇನೆ ಎಂದಾಗಲೂ ಅಸಮಾಧಾನ ಹೆಚ್ಚಾಗಿತ್ತು. ಇದು ಕುಟುಂಬಗಳ ಮಧ್ಯದ ಪೈಪೋಟಿ ಎಂದು ತಿಳಿಸಿದ್ದಾರೆ.

ನಮ್ಮ ಕುಟುಂಬದಿಂದ ನಾನು ಮತ್ತು ರೇವಣ್ಣ ಇಬ್ಬರೇ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದರು. ಆವರೇ ಎರಡು ಕಡೆ ಸ್ಪರ್ಧೆ ಮಾಡಿ ನಂತರದ ಉಪಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ಅವರನ್ನು ನಿಲ್ಲಿಸಿದರು. ಇಲ್ಲಿಂದ ಕುಟುಂಬದಲ್ಲಿ ಆಂತರಿಕ ಕಿತ್ತಾಟ ಹೆಚ್ಚಾಯಿತು. ಇದೆಲ್ಲಾ ಕಾರಣಕ್ಕೆ ದೇವೇಗೌಡರು ಹಾಸನವನ್ನು ಪ್ರಜ್ವಲ್‌ ಅವರಿಗೆ ಬಿಟ್ಟುಕೊಟ್ಟರು. ನಂತರದ ಬೆಳವಣಿಗೆಗಳು ಎಲ್ಲರಿಗೂ ತಿಳಿದೇ ಇದೆ ಎಂದಿದ್ದಾರೆ.

ಮಂಗಳವಾರ ಮಾತನಾಡಿದ್ದ ಕುಮಾರಸ್ವಾಮಿ ಅವರು ಪೆನ್‌ ಡ್ರೈವ್‌ ಹಂಚಿಕೆ ಹಿಂದೆ ಡಿ.ಕೆ.ಶಿವಕುಮಾರ್‌ ಅವರು ಇದ್ದಾರೆ ಎನ್ನುವ ಹತಾಶೆಯ ಹೇಳಿಕೆ ಕೊಟ್ಟಿದ್ದಾರೆ. ಏಕೆಂದರೆ ಮಂಗಳವಾರ ಬೆಳಿಗ್ಗೆ ಅಮಿತ್‌ ಶಾ ಅವರು ಕುಮಾರಸ್ವಾಮಿ ಅವರಿಗೆ ದೂರವಾಣಿ ಕರೆ ಮಾಡಿ ಹಾಗು ಯಡಿಯೂರಪ್ಪ ಅವರ ಜೊತೆಗೂ ಮಾತನಾಡಿ ʼಈ ಘಟನೆಯಿಂದ ಬಿಜೆಪಿಗೆ ರಾಷ್ಟ್ರೀಯ ಮಟ್ಟದಲ್ಲಿ ಹಾನಿಯಾಗಿದೆ. ಈ ಪ್ರಕರಣವನ್ನು ನೀವೇಕೆ ಮೊದಲೇ ಸರಿ ಪಡಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ.

ಕುಮಾರಸ್ವಾಮಿ ಅವರು ಈ ಘಟನೆಯಿಂದ ವಿಚಲಿತ ಹಾಗೂ ಹತಾಶರಾಗಿದ್ದಾರೆ. ಇದರಿಂದ ಕಂಡಕಂಡವರ ಮೇಲೆ ಆರೋಪ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಆರೋಪ ಮಾಡಿದರು. ಆದರೆ ಸಿಎಂ ಅವರು ಪ್ರಕರಣ ಸಾರ್ವಜನಿಕ ಚರ್ಚೆಗೆ ಬಂದ ತಕ್ಷಣ ತನಿಖೆಗೆ ಆದೇಶ ಮಾಡಿದ್ದಾರೆ ಎಂದರು.

ಇದನ್ನೂ ಪ್ರಶ್ನೆ ಮಾಡಿರುವ ಕುಮಾರಸ್ವಾಮಿ ಅವರು ಮೋದಿ ಅವರು ಸಹಾಯ ಮಾಡಿದರು ಎನ್ನುವ ದಾಟಿಯಲ್ಲಿ ಮಾತನಾಡಿದ್ದಾರೆ. ಇದೆಲ್ಲಾ ಕುಮಾರಸ್ವಾಮಿ ಅವರ ಕಟ್ಟುಕತೆ ಮತ್ತು ಕೆಳಮಟ್ಟದ ಹೇಳಿಕೆಗಳು. ಡಿ.ಕೆ.ಶಿವಕುಮಾರ್‌ ಹಂಚಿಕೆಯ ಹಿಂದೆ ಇದ್ದಾರೆ ಎಂದು ಹೇಳಿರುವುದು ಹತಾಶ ಮನೋಭಾವದ ಮುಂದುವರೆದ ಭಾಗ. ಕುಮಾರಸ್ವಾಮಿ ಅವರು ಅನೇಕ ಪ್ರಶ್ನೆಗಳಿಗೆ ಉತ್ತರವನ್ನು ಕೊಟ್ಟಿಲ್ಲ. ಪ್ರೀತಂ ಗೌಡ, ದೇವರಾಜೇಗೌಡ ಭೇಟಿ ಮಾಡಿದ್ದರು ಎನ್ನುವ ಸವಾಲಿಗೆ ಉತ್ತರ ನೀಡಿಲ್ಲ. ಇದಕ್ಕೆ ಕುಮಾರಸ್ವಾಮಿ ಅವರು ಮಾತ್ರ ಉತ್ತರ ನೀಡಬೇಕಾಗಿಲ್ಲ. ವಿಜಯೇಂದ್ರ, ಆರ್‌. ಅಶೋಕ ಅವರು ಉತ್ತರಿಸಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಮುಖಂಡ ದೇವರಾಜೇಗೌಡರು ಕಳೆದ ಎರಡು- ಮೂರು ವರ್ಷಗಳಿಂದ ದೇವೇಗೌಡರ ಕುಟುಂಬದ ಅವ್ಯವಹಾರಗಳ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಹೋರಾಟ ಮಾಡುತ್ತಿದ್ದಾರೆ. ಪೆನ್‌ ಡ್ರೈವ್ ಪ್ರಕರಣದ ಬಗ್ಗೆ ಯಾವ ಮಾಹಿತಿಯನ್ನು ಬಿಡುಗಡೆ ಮಾಡಬಾರದು ಎಂದು ಈ ಮೊದಲೇ ಪ್ರಜ್ವಲ್‌ ರೇವಣ್ಣ ಸಂಧಾನ ಮಾಡಿದ್ದರು. 2023 ಡಿಸೆಂಬರ್‌ 8 ರಂದು ದೇವರಾಜೇಗೌಡರು ಪ್ರಜ್ವಲ್‌ ರೇವಣ್ಣ ಅವರ ಸಿಡಿ ಇದೆ ಇದರ ಬಗ್ಗೆ ರಾಷ್ಟ್ರೀಯ ಬಿಜೆಪಿ ನಾಯಕರಿಗೆ ಪತ್ರ ಬರೆದಿದ್ದರು. ಹಾಸನದಲ್ಲಿ ಮಾಧ್ಯಮಗೋಷ್ಠಿ ನಡೆಸಿ ನನ್ನ ಬಳಿ ಸಿಡಿ ಇದೆ ಯಾವಾಗ ಬೇಕಾದರೂ ಅದನ್ನು ಬಿಡುಗಡೆ ಮಾಡುತ್ತೇನೆ ಎಂದು ಹೇಳಿದ್ದರು ಎಂದು ತಿಳಿಸಿದರು.

ಎಲ್ಲಾ ವಿಚಾರಗಳು ಗೊತ್ತಿದ್ದ ಬಿಜೆಪಿ ನಾಯಕರು ಏಕೆ ಈ ವಿಚಾರದಲ್ಲಿ ಮೌನವಾಗಿದ್ದಾರೆ. ಆರ್.ಆಶೋಕ್, ವಿಜಯೇಂದ್ರ ಅವರಿಗೂ ಈ ವಿಚಾರ ಗೊತ್ತಿತ್ತು. ಪ್ರೀತಂಗೌಡ ಅವರು ಜೆಡಿಎಸ್‌ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡುವುದಿಲ್ಲ ಎಂದಾಗ ಕುಮಾರಸ್ವಾಮಿ ಮನೆಗೆ ಕರೆಸಿಕೊಂಡು ಮಾತುಕತೆ ನಡೆಸುತ್ತಾರೆ. ಮಹಿಳೆಯರ ಜೀವದ ಪ್ರಶ್ನೆ ಇಲ್ಲಿದೆ. ಇದರಿಂದ ಸಾವಿರಾರು ಮಹಿಳೆಯರ ಘನತೆಗೆ ಪೆಟ್ಟಾಗಿದೆ. ಕುಮಾರಸ್ವಾಮಿ ಅವರೇ ಈ ಪ್ರಕರಣದ ಬಗ್ಗೆ ಪಶ್ಚಾತ್ತಾಪ ಪಡಬೇಕು. ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡುತ್ತೇನೆ ಎಂದ ಹಾಸನ ಜಿಲ್ಲಾಧಿಕಾರಿ ಮಾತಿಗೂ ಕುಮಾರಸ್ವಾಮಿ ಹತಾಶೆಯಿಂದ ಉತ್ತರಿಸುತ್ತಿದ್ದಾರೆ ಎಂದು ಗುಡುಗಿದರು.

ಪ್ರಜ್ವಲ್ ರೇವಣ್ಣ ‘ಅಶ್ಲೀಲ ವೀಡಿಯೋ ಕೇಸ್’ಗೆ ಬಿಗ್ ಟ್ವಿಸ್ಟ್: ಹಾಸನದ ಸಂಸದರ ‘ಸರ್ಕಾರಿ ನಿವಾಸ’ದಲ್ಲೇ ‘ನೀಚ ಕೃತ್ಯ’?

BIG NEWS: ನಮಗೆ ತೊಂದ್ರೆ ಕೊಟ್ರೆ ‘ಸೂಸೈಡ್’ ಮಾಡಿಕೊಳ್ತೀವಿ: SIT ಮುಂದೆ ಹೇಳಿಕೆಗೆ ‘ಸಂತ್ರಸ್ತೆ’ಯರು ಹಿಂದೇಟು

Share. Facebook Twitter LinkedIn WhatsApp Email

Related Posts

BIG NEWS : ‘ಅಗ್ನಿವೀರ್’ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳೇ ಗಮನಿಸಿ : ಜೂ.30ರಿಂದ ಪ್ರವೇಶ ಪರೀಕ್ಷೆ ಆರಂಭ | Agni veer Recruitment 2025

18/06/2025 5:34 AM1 Min Read
vidhana soudha

ರಾಜ್ಯ ಸರ್ಕಾರದಿಂದ ‘ಆಡಳಿತ ಯಂತ್ರ’ಕ್ಕೆ ಮೇಜರ್ ಸರ್ಜರಿ: ’16 IAS ಅಧಿಕಾರಿ’ ವರ್ಗಾವಣೆ ಮಾಡಿ ಆದೇಶ | IAS Officer Transfer

18/06/2025 5:30 AM3 Mins Read

ವಾಹನ ಮಾಲೀಕರೇ ಗಮನಿಸಿ : ನಿಮ್ಮ ವಾಹನದ ‘RC’ ಕಳೆದು ಹೋಗಿದ್ರೆ ಜಸ್ಟ್ ಹೀಗೆ ಡೌನ್ಲೋಡ್ ಮಾಡಿ!

18/06/2025 5:30 AM2 Mins Read
Recent News

BIG NEWS : ‘ಅಗ್ನಿವೀರ್’ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳೇ ಗಮನಿಸಿ : ಜೂ.30ರಿಂದ ಪ್ರವೇಶ ಪರೀಕ್ಷೆ ಆರಂಭ | Agni veer Recruitment 2025

18/06/2025 5:34 AM
vidhana soudha

ರಾಜ್ಯ ಸರ್ಕಾರದಿಂದ ‘ಆಡಳಿತ ಯಂತ್ರ’ಕ್ಕೆ ಮೇಜರ್ ಸರ್ಜರಿ: ’16 IAS ಅಧಿಕಾರಿ’ ವರ್ಗಾವಣೆ ಮಾಡಿ ಆದೇಶ | IAS Officer Transfer

18/06/2025 5:30 AM

ವಾಹನ ಮಾಲೀಕರೇ ಗಮನಿಸಿ : ನಿಮ್ಮ ವಾಹನದ ‘RC’ ಕಳೆದು ಹೋಗಿದ್ರೆ ಜಸ್ಟ್ ಹೀಗೆ ಡೌನ್ಲೋಡ್ ಮಾಡಿ!

18/06/2025 5:30 AM

BIG NEWS : ರಾಜ್ಯದ ವೈದ್ಯರು, ಸಿಬ್ಬಂದಿಗಳಿಗೆ ಜು.1 ರಿಂದ ‘ಮೊಬೈಲ್ ಹಾಜರಾತಿ’ ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ.!

18/06/2025 5:25 AM
State News
KARNATAKA

BIG NEWS : ‘ಅಗ್ನಿವೀರ್’ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳೇ ಗಮನಿಸಿ : ಜೂ.30ರಿಂದ ಪ್ರವೇಶ ಪರೀಕ್ಷೆ ಆರಂಭ | Agni veer Recruitment 2025

By kannadanewsnow5718/06/2025 5:34 AM KARNATAKA 1 Min Read

ಬೆಂಗಳೂರು: ಭಾರತೀಯ ಸೇನೆಗೆ ಅಗ್ನಿವೀರರ ನೇಮಕಾತಿಗೆ ಕರ್ನಾಟಕದಿಂದ ನೋಂದಾಯಿಸಿಕೊಂಡಿದ್ದ ಅಭ್ಯರ್ಥಿಗಳಿಗೆ ಆನ್ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆಯ ದಿನಾಂಕವನ್ನು ಪ್ರಕಟಿಸಲಾಗಿದೆ. ಇದೇ…

vidhana soudha

ರಾಜ್ಯ ಸರ್ಕಾರದಿಂದ ‘ಆಡಳಿತ ಯಂತ್ರ’ಕ್ಕೆ ಮೇಜರ್ ಸರ್ಜರಿ: ’16 IAS ಅಧಿಕಾರಿ’ ವರ್ಗಾವಣೆ ಮಾಡಿ ಆದೇಶ | IAS Officer Transfer

18/06/2025 5:30 AM

ವಾಹನ ಮಾಲೀಕರೇ ಗಮನಿಸಿ : ನಿಮ್ಮ ವಾಹನದ ‘RC’ ಕಳೆದು ಹೋಗಿದ್ರೆ ಜಸ್ಟ್ ಹೀಗೆ ಡೌನ್ಲೋಡ್ ಮಾಡಿ!

18/06/2025 5:30 AM

BIG NEWS : ರಾಜ್ಯದ ವೈದ್ಯರು, ಸಿಬ್ಬಂದಿಗಳಿಗೆ ಜು.1 ರಿಂದ ‘ಮೊಬೈಲ್ ಹಾಜರಾತಿ’ ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ.!

18/06/2025 5:25 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.