ಬೆಂಗಳೂರು: ನಾನು ತನಿಖೆಗೆ ಸಹಕರಿಸುತ್ತೇನೆ. ಎಲ್ಲಿಯೂ ಹೋಗಲ್ಲ ಎಂಬುದಾಗಿ ತಮ್ಮ ಪುತ್ರ ಪ್ರಜ್ವಲ್ ವಿರುದ್ಧದ ಅಶ್ಲೀಲ ವೀಡಿಯೋ ಪ್ರಕರಣದ ಬಗ್ಗೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ಪ್ರತಿಕ್ರಿಯಿಸಿದ್ದರು. ಈಗ ಅವರು ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ತಮ್ಮ ಪುತ್ರನ ವಿರುದ್ಧದ ಅಶ್ಲೀಲ ವೀಡಿಯೋ ಪ್ರಕರಣ ಸಂಬಂಧ ಮಾಜಿ ಸಚಿವ ಹೆಚ್.ಡಿ ರೇವಣ್ಣ ವಿರುದ್ಧವೂ ಎಫ್ಐಆರ್ ದಾಖಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ್ದಂತ ಅವರು ತಾವು ಎಸ್ಐಟಿ ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿಯೂ ಹೇಳಿದ್ದರು.
ಇದಷ್ಟೇ ಅಲ್ಲದೇ ನಾನು ಎಲ್ಲಿಗೂ ಓಡಿ ಹೋಗೋದಿಲ್ಲ. ತನಿಖೆ ನಡೆಯಲಿ ತನಿಖೆಗೆ ಸಂಪೂರ್ಣ ಬೆಂಬಲ ನೀಡೋದಾಗಿ ಮಾಧ್ಯಮಗಳ ಮೂಲಕ ಮಾತನಾಡಿ ತಿಳಿಸಿದ್ದರು.
ಇಂದು ಅವರು ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಪ್ರಕರಣ ಸಂಬಂಧ ಬೆಂಗಳೂರಿನ ಸೆಷನ್ಸ್ ಕೋರ್ಟ್ ಗೆ ನಿರೀಕ್ಷಣಾ ಜಾಮೀನು ಕೋರಿ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅರ್ಜಿ ಸಲ್ಲಿಸಿದ್ದಾರೆ. ಈ ಮೂಲಕ ಪ್ರಕರಣ ಸಂಬಂಧ ಕೋರ್ಟ್ ಮೆಟ್ಟಿಲೇರಿದ್ದಾರೆ.
ಕ್ಯಾನ್ಸರ್ ಪ್ರಕರಣಗಳಿಗೆ 648 ಕೋಟಿ ಪರಿಹಾರ ನೀಡಲು `ಜಾನ್ಸನ್ & ಜಾನ್ಸನ್’ ಅಂಗಸಂಸ್ಥೆ ನಿರ್ಧಾರ