ಹುಬ್ಬಳ್ಳಿ: ಮಾರ್ಚ್.31ರ ಒಳಗಾಗಿ ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿಯನ್ನು ಬದಲಾವಣೆ ಮಾಡಬೇಕು. ಒಂದು ವೇಳೆ ಬದಲಾವಣೆ ಮಾಡದೇ ಇದ್ದರೇ ಮುಂದಿನ ನಿರ್ಧಾರ ಪ್ರಕಟಿಸೋದಾಗಿ ಬಿಜೆಪಿ ಹೈಕಮಾಂಡ್ ಗೆ ದಿಂಗಾಲೇಶ್ವರ ಸ್ವಾಮೀಜಿ ಡೆಡ್ ಲೈನ್ ನೀಡಿದ್ದಾರೆ.
ಇಂದು ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ಹುಬ್ಬಳ್ಳಿ – ನನ್ನ ಸ್ಪರ್ಧೆಗೆ ಬಗ್ಗೆ ಮಠಾಧೀಪತಿಗಳು ಮಹತ್ವದ ಸಲಹೆ ಕೊಟ್ಟಿದ್ದಾರೆ. ನಾವು ಏಪ್ರಿಲ್ ಎರಡರ ನಂತರ ಎಲ್ಲವನ್ನು ತಿಳಿಸಲಿದ್ದೇವೆ. ಅಭ್ಯರ್ಥಿ ಬಗ್ಗೆ ನಾವಿನ್ನೂ ಯೋಚನೆ ಮಾಡಿಲ್ಲ. ನಮ್ಮ ಬೇಡಿಕೆ ಜೋಶಿ ಅವರ ಬದಲಾವಣೆ ಮಾಡಬೇಕು. ಮಾಧ್ಯಮದ ಮೂಲಕ ಹೈಕಮಾಂಡ್ ಗೆ ನಾನು ಮನವಿ ಮಾಡ್ತೀನಿ ಎಂದರು.
ಜೋಶಿ ಅವರ ಬದಲಾವಣೆ ಮಾಡಬೇಕು. ಏಕಸ್ವಾಮ್ಯತೆ ಹೊಂದಿರೋ ಈ ವ್ಯಕ್ತಿಯ ಬದಲಾವಣೆ ಮಾಡಬೇಕು ಎಂಬುದಾಗಿ ಏಕವಚನದಲ್ಲಿ ಜೋಶಿ ವಿರುದ್ದ ದಿಂಗಾಲೇಶ್ವರ ಸ್ವಾಮೀಜಿ ವಾಗ್ದಾಳಿ ನಡೆಸಿದರು.
ಇದಕ್ಕಾಗಿ ಮಾರ್ಚ್ 31ರವರೆಗೆ ಅವಕಾಶ ಕೊಡುತ್ತೇವೆ. ಅಭ್ಯರ್ಥಿ ಬದಲಾವಣೆ ಮಾಡದೆ ಇದ್ದಲ್ಲಿ ಏಪ್ರಿಲ್ 2 ಕ್ಕೆ ನಮ್ಮ ನಿರ್ಧಾರ ಪ್ರಕಟಿಸುತ್ತೇವೆ ಸದ್ಯ ಸ್ಪರ್ಧೆ ಬಗ್ಗೆ ಮಾತಾಡಲ್ಲ. ಅಭ್ಯರ್ಥಿ ಯಾರೂ ಅನ್ನೋದರ ಬಗ್ಗೆ ಮಾತಾಡಲ್ಲ. ನಾವು ಇಲ್ಲಿ ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ಮಾತಾಡತೀದ್ದೀವಿ. ಕೇವಲ ಒಂದು ಸಮಾಜದ ಅಲ್ಲ. ಬಹಳ ಸಮುದಾಯದ ಜನರಿಗೆ ಅನ್ಯಾಯ ಆಗಿದೆ. ಹೀಗಾಗಿ ನಾವು ಜೋಶಿ ಅವರ ವಿರುದ್ದ ದ್ವನಿ ಎತ್ತಿದ್ದೇವೆ ಎಂದರು.
ಸಮಾಜಕ್ಕೆ ಆದ ನೋವು ರಾಷ್ಟ್ರೀಯ ನಾಯಕರ ಗಮನಕ್ಕೆ ತರುತ್ತಿದ್ದೇವೆ. ಅದನ್ನು ಸರಿಪಡಿಸುವ ಜವಾಬ್ದಾರಿ ಬಿಜೆಪಿ ಹೈಕಮಾಂಡ್ ಗೆ ಬಿಟ್ಟಿದ್ದು. ನಾವು ಬ್ರಾಹ್ಮಣರ ವಿರೋಧಿ ಅಲ್ಲ. ಕೇಂದ್ರ ಸಚಿವ ಜೋಶಿ ವ್ಯಕ್ತಿತ್ವದ ವಿರೋಧಿಸ್ತಿದೇವೆ ಎಂಬುದಾಗಿ ಹುಬ್ಬಳ್ಳಿಯಲ್ಲಿ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
‘ಅರವಿಂದ ಕೇಜ್ರಿವಾಲ್ ಬಂಧನ’ ವಿರೋಧಿಸಿ ಮಾ.31ಕ್ಕೆ ಬೃಹತ್ ಪ್ರತಿಭಟನೆ – AAP ಮೋಹನ್ ದಾಸರಿ
BREAKING: ‘ಯತ್ನಾಳ್’ ವಿರುದ್ಧ ‘ಡಿಕೆಶಿ ಮಾನನಷ್ಟ’ ಕೇಸ್: ಅರ್ಜಿ ವರ್ಗಾವಣೆಗೆ ‘ಹೈಕೋರ್ಟ್ ನಕಾರ’