ಶಿವಮೊಗ್ಗ: ಜಿಲ್ಲೆಯ ಸಾಗರ ನಗರದಲ್ಲಿ ರಾಘವೇಂದ್ರ ಡೆವಲಪರ್ಸ್ ನಿಂದ ಲೇಔಟ್ ಮಾಡಲಾಗಿದೆ. ಈ ಲೇಔಟ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ಸತ್ಯಕ್ಕೆ ದೂರವಾದಂತ ಸುದ್ದಿಗಳು ಹರಿದಾಡುತ್ತಿದ್ದವು. ಈ ಬಗ್ಗೆ ರಾಘವೇಂದ್ರ ಡೆವಲಪರ್ಸ್ ಮಾಲೀಕ ಪ್ರದೀಪ್ ಕುಮಾರ್ ಮಹತ್ವದ ಸ್ಪಷ್ಟನೆ ನೀಡಿದ್ದಾರೆ. ಅದು ಏನು ಅಂತ ಮುಂದೆ ಓದಿ.
ಇಂದು ಈ ಕುರಿತಂತೆ ವೀಡಿಯೋ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ಸಾಗರ ಜನತೆಗೆ ನಮಸ್ಕಾರ. ನಾನು ಪ್ರದೀಪ್ ಕುಮಾರ್. ರಾಘವೇಂದ್ರ ಡೆವಲಪರ್ಸ್ ಮಾಲೀಕನಾಗಿದ್ದೇನೆ. ನಾನು ಸಾಗರ ನಗರಸಭೆ ವ್ಯಾಪ್ತಿಯನ್ನು ಒಳಗೊಂಡ ವಿಜಯನಗರ 2ನೇ ಹಂತದಲ್ಲಿ 4 ಎಕರೆ ಜಮೀನನ್ನು ಜಂಟಿ ಅಭಿವೃದ್ಧಿ ಮಾಡಲು ಮಾಲೀಕರಾದಂತ ಅನಿಲ್ ಕುಮಾರ್ ಅವರಿಂದ ಖರೀದಿಸಿರುತ್ತೇನೆ ಎಂದಿದ್ದಾರೆ.
ಸಾಗರದ ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ಈ ಸಂಬಂಧ ನೋಂದಾಯಿಸಿಕೊಳ್ಳಲಾಗಿದೆ. ಒಪ್ಪಂದದಂತೆ ನನ್ನ ಬ್ಯಾಂಕ್ ಖಾತೆಯಿಂದ ಅವರ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಲಾಗಿರುತ್ತದೆ. ಒಪ್ಪಂದದ ಪ್ರಕಾರ ನಾನು ರಸ್ತೆ, ಚರಂಡಿ, ಯುಜಿಡಿ, ವಿದ್ಯುತ್ ಕಂಬಗಳನ್ನು ಕೂಡ ಅಳವಡಿಸಲಾಗಿರುತ್ತದೆ ಎಂದು ತಿಳಿಸಿದ್ದಾರೆ.
ಜಂಟಿ ಅಭಿವೃದ್ಧಿಯ ಪ್ರಕಾರ ನನಗೆ ನಗರಸಭೆಯ ಖಾತೆಗಳನ್ನು ಹೊಂದಲಾಗಿದೆ. 40 ಅನುಪಾತದಲ್ಲಿ ಅಭಿವೃದ್ಧಿಗೊಂಡಿರುವ ನಿವೇಶನಗಳನ್ನು ಖರೀದಿ ಮಾಡಲು ಯಾವುದೇ ತೊಂದರೆಯಿರುವುದಿಲ್ಲ. ಏಕೆಂದರೆ ಕಾನೂನಿನಂತೆ ಲೇಔಟ್ ನಿರ್ಮಿಸಲಾಗಿದೆ. ಸಬ್ ರಿಜಿಸ್ಟಾರ್ ಕಚೇರಿಯಲ್ಲಿಯೂ ನೋಂದಾಯಿಸಲಾಗಿದೆ ಎಂದಿದ್ದಾರೆ.
ಸೋ ಸಾರ್ವಜನಿಕರು ಸಾಗರನ ನಗರಸಭೆ ವ್ಯಾಪ್ತಿಯ ವಿಜಯನಗರದ ಸರ್ವೇ ನಂ.63ರಲ್ಲಿ ಮಾಡಿರುವಂತ ಲೇಔಟ್ ನಿಂದ ಸೈಟುಗಳನ್ನು ಖರೀದಿಸಬಹುದಾಗಿದೆ. 28 ಸೈಟುಗಳು ಕಾನೂನು ಬದ್ಧವಾಗಿದ್ದು, ನ್ಯಾಯಬದ್ಧವಾಗಿ ಮಾರಾಟ ಮಾಡಲಾಗುತ್ತಿದೆ. ಯಾರೂ ಅನುಮಾನ, ಆತಂಕ, ಭಯ ಪಡುವ ಅಗತ್ಯವಿಲ್ಲ ಎಂಬುದಾಗಿ ರಾಘವೇಂದ್ರ ಡೆವಲಪರ್ಸ್ ಮಾಲೀಕ ಪ್ರದೀಪ್ ಕುಮಾರ್ ಸ್ಪಷ್ಟ ಪಡಿಸಿದ್ದಾರೆ.
ED ಬಾರದೆ ಇದ್ದಲ್ಲಿ ವಾಲ್ಮೀಕಿ ನಿಗಮದ ಹಗರಣ ಮುಚ್ಚಿ ಹೋಗುತ್ತಿತ್ತು: ಮಾಜಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ
BIG NEWS: ‘ಕ್ರೈಂ ಗಣೇಶ್’ ಎಂದೇ ಖ್ಯಾತರಾಗಿದ್ದ ‘ಪತ್ರಕರ್ತ ಗಣೇಶ್’ ಇನ್ನಿಲ್ಲ | Crime Ganesh No More