ಚಿಕ್ಕಬಳ್ಳಾಪುರ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಗೆದ್ದಿದ್ದೇ ಆದ್ರೆ ತಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದಂತ ಶಾಸಕ ಪ್ರದೀಪ್ ಈಶ್ವರ್ ಹೇಳಿಕೆ ವೈರಲ್ ಆಗಿತ್ತು. ಈ ಬೆನ್ನಲ್ಲೇ ಅವರ ರಾಜೀನಾಮೆ ಪತ್ರ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಾಗಾದ್ರೆ ಶಾಸಕ ಸ್ಥಾನಕ್ಕೆ ಪ್ರದೀಪ್ ಈಶ್ವರ್ ರಾಜೀನಾಮೆ ನೀಡಿದ್ರಾ.? ವೈರಲ್ ಸುದ್ದಿಯ ಅಸಲಿ ಸತ್ಯ ಏನು ಅಂತ ಮುಂದೆ ಓದಿ.
ನಿನ್ನೆ ಪ್ರಕಟವಾದಂತ ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ ಸುಧಾಕರ್ 1,62,099 ಮತಗಳ ಅಂತರದಿಂದ ಭರ್ಜರಿ ಗೆಲುವನ್ನು ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸಾಧಿಸಿದ್ದಾರೆ. ಈ ಬೆನ್ನಲ್ಲೇ ಶಾಸಕ ಪ್ರದೀಪ್ ಈಶ್ವರ್ ರಾಜೀನಾಮೆಗೆ ಒತ್ತಾಯ, ಆಗ್ರಹ ಹೆಚ್ಚಾಗಿದೆ.
ಇದರ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಅವರು ಏನೇ ಮಾಡಿದರೂ ಸುಧಾಕರ್ ಈ ಲೋಕಸಭಾ ಚುನಾವಣೆಯಲ್ಲಿ ಗೆಲ್ಲೋದಿಲ್ಲ. ಇದು ನನ್ನ ಭವಿಷ್ಯವಾಗಿದೆ. ಒಂದು ವೇಳೆ ಕಾಂಗ್ರೆಸ್ ಗಿಂತ ಒಂದೇ ಒಂದು ಹೆಚ್ಚು ಮತ ತೆಗೆದುಕೊಂಡಿದ್ದೇ ಆದರೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದಂತ ವೀಡಿಯೋ ವೈರಲ್ ಆಗಿತ್ತು.
ಇದೀಗ ಸಾಮಾಜಿಕ ಜಾಲತಾಣದಲ್ಲಿ ಅವರ ಹೇಳಿಕೆ ಜೊತೆಗೆ ರಾಜೀನಾಮೆಯ ಪತ್ರ ವೈರಲ್ ಆಗಿದೆ. ಮಾಜಿ ಸಂಸದ ಪ್ರತಾಪ್ ಸಿಂಹ ಕೂಡ ಅವರು ರಾಜೀನಾಮೆ ಬಗ್ಗೆ ಮಾತನಾಡಿರುವಂತ ವೀಡಿಯೋ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಆದ್ರೇ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವಂತ ರಾಜೀನಾಮೆ ಪತ್ರದ ಬಗ್ಗೆ ಶಾಸಕ ಪ್ರದೀಪ್ ಈಶ್ವರ್ ಮಾತನಾಡಿ, ಅದು ನಕಲಿಯಾಗಿದೆ. ಯಾರೋ ನಕಲಿ ರಾಜೀನಾಮೆ ಪತ್ರವನ್ನು ಸೃಷ್ಠಿ ಮಾಡಿ ಹಂಚಿದ್ದಾರೆ. ನನ್ನ ಸವಾಲನ್ನು ಸುಧಾಕರ್ ಸ್ವೀಕರಿಸಿಲ್ಲ. ನಾನ್ಯಾಕೆ ರಾಜೀನಾಮೆ ನೀಡಲಿ? ಅಂತ ಯು ಟರ್ನ್ ಹೊಡೆದಿದ್ದಾರೆ.
ಇಂದೇ ಸರ್ಕಾರ ರಚನೆಗೆ ಹಕ್ಕು ಮಂಡಿಸಲು NDA ರಾಷ್ಟ್ರಪತಿ ಮುರ್ಮು ಭೇಟಿ ಸಾಧ್ಯತೆ- ವರದಿ
BREAKING: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಸ್ಥಾನಕ್ಕೆ ‘ದೇವೇಂದ್ರ ಫಡ್ನವೀಸ್’ ರಾಜೀನಾಮೆ