ಶಿವಮೊಗ್ಗ: ಸಾಗರದ ನಗರದಲ್ಲಿ ಬಿಹೆಚ್ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದೆ. ಇದರಿಂದಾಗಿ ಕಳೆದ ಹಲವು ತಿಂಗಳಿನಿಂದ ಬಿಹೆಚ್ ರಸ್ತೆಯಲ್ಲಿ ಪವರ್ ಕಟ್ ಸಮಸ್ಯೆಯನ್ನು ಎದುರಿಸಲಾಗುತ್ತಿದೆ. ಇದೀಗ ನಾಳೆ ಕೂಡ ವಿದ್ಯುತ್ ಕಂಬಗಳ ಸ್ಥಳಾಂತರದ ಕಾರಣ ಸಾಗರದ ಕೆಲ ಪ್ರದೇಶಗಳಲ್ಲಿ ಪವರ್ ಕಟ್ ಆಗಲಿದೆ ಅಂತ ಮೆಸ್ಕಾಂ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಕುರಿತಂತೆ ಸಾಗರದ ಮೆಸ್ಕಾಂ ಕಚೇರಿಯು ಮಾಹಿತಿ ಹಂಚಿಕೊಂಡಿದ್ದು,ದಿನಾಂಕ: 17.01.2026 ಶನಿವಾರದಂದು ಸಾಗರದ ಬಿ.ಹೆಚ್ ರಸ್ತೆ ಅಗಲೀಕರಣ ಕಾಮಗಾರಿಯ ಸಲುವಾಗಿ ವಿದ್ಯುತ್ ಕಂಬಗಳ ಸ್ಥಳಾಂತರಿಸುವ ಹಮ್ಮಿಕೊಂಡಿರುವುದರಿಂದ ಸಾಗರ ಪಟ್ಟಣ ವ್ಯಾಪ್ತಿಯ ಈ ಕೆಳಕಂಡ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದಿದೆ.
ನೆಹರೂ ನಗರ, ಜೋಸೆಫ್ ನಗರ, ಅರಳೀಕೊಪ್ಪ, ಜನ್ನತ್‌ಗಲ್ಲಿ, ಸಿಗಂದೂರು ಮಾರ್ಕೆಟ್ ರಸ್ತೆ, ಬಿ.ಹೆಚ್ ರಸ್ತೆ, ಅಶೋಕ ರಸ್ತೆ, ಕೃಷ್ಣ ಗ್ಯಾರೇಜ್, ಎಲ್.ಐ.ಸಿ ಆಫೀಸ್ ಹತ್ತಿರ ವ್ಯಾಪ್ತಿಗೆ ಒಳಪಡುವ ಪ್ರದೇಶಗಳಲ್ಲಿ ಬೆಳಗ್ಗೆ: 10:00 ಘಂಟೆಯಿಂದ ಸಂಜೆ: 06:00 ಘಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ವಿದ್ಯುತ್ ಗ್ರಾಹಕರು ಸಹಕರಿಸುವಂತೆ ಕೋರಿದೆ.
ವರದಿ; ವಸಂತ ಬಿ ಈಶ್ವರಗೆರೆ… ಸಂಪಾದಕರು…
BREAKING: ವಿಜಯಪುರದಲ್ಲಿ ‘GPS ಟ್ರ‍್ಯಾಕರ್’ ಹಾಗೂ ಕ್ಯಾಮರಾ ಹೊಂದಿದ್ದ ರಣಹದ್ದು ಪತ್ತೆ
SHOCKING: ನಾಲ್ಕು ದಿನದಲ್ಲಿ ಹಸೆಮಣೆ ಏರಬೇಕಿದ್ದ ತಮ್ಮನನ್ನು 28 ಬಾರಿ ಇರಿದು ಕೊಂದ ಪಾಪಿ ಅಣ್ಣ.!








