ಶಿವಮೊಗ್ಗ: ಮೆಸ್ಕಾಂ ಇಲಾಖೆಯಿಂದ ತುರ್ತು ವಿದ್ಯುತ್ ನಿರ್ವಹಣಾ ಕಾಮಗಾರಿಯನ್ನು ಕೈಗೊಳ್ಳುತ್ತಿರುವ ಕಾರಣ, ಡಿಸೆಂಬರ್.19ರಿಂದ 22ರವರೆಗೆ ಸೊರಬ ತಾಲ್ಲೂಕಿನ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ( Power Cut ) ಉಂಟಾಗಲಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮೆಸ್ಕಾಂನ ( MESCOM ) ಸೊರಬಾ ತಾಲ್ಲೂಕು ಎಇಇ ಮಾಹಿತಿ ನೀಡಿದ್ದು, ದಿನಾಂಕ 19-12-2024ರಂದು ಬೆಳಿಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ಉಳವಿ ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯ ಕಾನಹಳ್ಳಿ, ಉಳವಿ, ಹೊಸಬಾಳೆ ಹಾಗೂ ದೂಗೂರು ಪ್ರದೇಶಗಳಲ್ಲಿ ಪವರ್ ಕಟ್ ಆಗಲಿದೆ ಎಂದಿದೆ.
ದಿನಾಂಕ 20-12-2024ರಂದು ಮಾವಲಿ ವಿದ್ಯುತ್ ಕೇಂದ್ರದಿಂದ ವಿದ್ಯುತ್ ಪೂರೈಕೆಯಾಗುವಂತ ಹರೂರು, ಕೋಲ್ಗುಣಸಿ, ಮನೆಮನೆ, ಗೇರುಕೊಪ್ಪ ಹಾಗೂ ಮಾವಲಿಯಲ್ಲಿ ಪವರ್ ಕಟ್ ಆಗಲಿದೆ. ಅಲ್ಲದೇ ಸಂಡಾ ವಿದ್ಯುತ್ ಕೇಂದ್ರದಲ್ಲಿ ತುರ್ತು ವಿದ್ಯುತ್ ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವ ಕಾರಣ, ಮಳಲಿಕೊಪ್ಪ, ಚಿಟ್ಟೂರು ಗ್ರಾಮ ವ್ಯಾಪ್ತಿಯ ಸುತ್ತಮುತ್ತಲ ಪ್ರದೇಶಗಳಲ್ಲಿ ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ.
ದಿನಾಂಕ 21-12-2024ರಂದು ಶಿರಾಳಕೊಪ್ಪ ವಿದ್ಯುತ್ ಕೇಂದ್ರದಲ್ಲೂ ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವುದರಿಂದ ಕವಡಿ, ಬಿಳವಾಣಿ ಮತ್ತು ಜಿರಲೇಕೊಪ್ಪದಲ್ಲಿ ಪವರ್ ಕಟ್ ಆಗಲಿದೆ.
ದಿನಾಂಕ 22-12-2024ರಂದು ಸೊರಬ ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯ ಸೊರಬ ಪಟ್ಟಣ, ಸಾರೇಕೊಪ್ಪ, ಬಳ್ಳಿಬೈಲು, ಓಟೂರು, ಚಿಕ್ಕಾವಲಿ, ಕಲ್ಲಂಬಿ, ಕಡಸೂರು, ಯಲವಳ್ಳಿ, ಹಾಲಗಳಲೆ, ತಳೇಬೈಲು, ಕುಪ್ಪೆ, ಬಿಳಾಗಿ, ಪುರ, ಮಂಚಿ, ಉರಗನಹಳ್ಳಿ, ಅಂಡಿಗೆ, ಕೊಡಕಣಿ, ಹೆಗ್ಗೋಡು, ತಾವರೆಹಳ್ಳಿ, ಕಕ್ಕರಸಿ ಮತ್ತು ನಡಹಳ್ಳಿ ವ್ಯಾಪ್ತಿಯಲ್ಲಿ ಬೆಳಿಗ್ಗೆ 10ರಿಂದ ಸಂಜೆ 6ರವಗೆ ವಿದ್ಯುತ್ ವ್ಯತ್ಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಎಇಇ ಮನವಿ ಮಾಡಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
ರಾಜ್ಯದ ಸ್ವ ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: ವಿವಿಧ ಯೋಜನೆಯಡಿ ಸಾಲಸೌಲಭ್ಯಕ್ಕೆ ಅರ್ಜಿ ಆಹ್ವಾನ
ಇನ್ಮುಂದೆ ಆನ್‌ಲೈನ್ ಮೂಲಕ NEET ಪರೀಕ್ಷೆ.?: ಶೀಘ್ರ ನಿರ್ಧಾರವೆಂದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ | NEET exam