ಹೆರಿಗೆಯ ಆದ ನಂತರ ಕೂಡ ಯಾವುದೇ ಸಮಯದಲ್ಲಿ ತಲೆನೋವು ಬರಬಹುದು. ಅಮೇರಿಕನ್ ಮೈಗ್ರೇನ್ ಫೌಂಡೇಶನ್ ಪ್ರಕಾರ, ಪ್ರತಿ ನಾಲ್ಕು ಮಹಿಳೆಯರಲ್ಲಿ ಒಬ್ಬರು ಹೆರಿಗೆಯಾದ ಎರಡು ವಾರಗಳಲ್ಲಿ ತಲೆನೋವಿನ ಬಗ್ಗೆ ಹೇಳುತ್ತಾರೆ.ಆದರೆ ಕೆಲವು ಮಹಿಳೆಯರು ಒಂದು ತಿಂಗಳೊಳಗೆ ಮೈಗ್ರೇನ್ ಸಮಸ್ಯೆಯನ್ನು ಹೊಂದುತ್ತಾರೆ.
ಹೆರಿಗೆಯ ನಂತರದ ತಲೆನೋವು ಇದು ದೇಹದಲ್ಲಿ ರಾಸಾಯನಿಕ ಮತ್ತು ಭೌತಿಕ ಬದಲಾವಣೆಗಳಿಂದ ಸಂಭವಿಸುತ್ತದೆ. ಹಾರ್ಮೋನ್ ಮಟ್ಟವು ಕುಸಿದಾಗ ತಲೆನೋವು ದೂರವಾಗಬಹುದು. ಆದಾಗ್ಯೂ, ತಲೆನೋವು ದೀರ್ಘಕಾಲದವರೆಗೆ ಮುಂದುವರಿದರೆ, ವೈದ್ಯರೊಂದಿಗೆ ಸಲಹೆ ಪಡೆಯಬೇಕು. ಡೆಲಿವರಿ ಡೇಟ್ ಹತ್ತಿರದಲ್ಲಿದೆ ಎಂದಾದರೆ ತಲೆನೋವನ್ನು ಹೇಗೆ ತಪ್ಪಿಸಬಹುದು ಎಂದು ಗೊತ್ತಿರಬೇಕು.
ಹೆರಿಗೆಯ ನಂತರ ತಲೆನೋವಿನ ಕಾರಣಗಳು
ಗರ್ಭಾವಸ್ಥೆಯಲ್ಲಿ, ಈಸ್ಟ್ರೋಜೆನ್ ಮತ್ತು ಎಂಡಾರ್ಫಿನ್ ಹಾರ್ಮೋನುಗಳ ಮಟ್ಟವು ತುಂಬಾ ಹೆಚ್ಚಾಗುತ್ತದೆ. ಈಗಾಗಲೇ ಮೈಗ್ರೇನ್ ಸಮಸ್ಯೆ ಹೊಂದಿದ್ದರೆ ಈ ಸಮಯದಲ್ಲಿ ರೋಗಲಕ್ಷಣಗಳು ಕಡಿಮೆಯಾಗಬಹುದು. ಆದಾಗ್ಯೂ, ಹೆರಿಗೆಯ ನಂತರ, ಈ ಹಾರ್ಮೋನುಗಳು ಸಾಮಾನ್ಯವಾದಾಗ, ತಲೆನೋವು ಸಹ ಹಿಂತಿರುಗುತ್ತದೆ.
ಹೆರಿಗೆಯ ನಂತರ, ಮಹಿಳೆಯರು ಹೆಚ್ಚಾಗಿ ಮಗುವಿನ ಆರೈಕೆಗೆ ತಮ್ಮ ಸಮಯವನ್ನು ನೀಡುತ್ತಾರೆ. ಗರ್ಭಾವಸ್ಥೆಯಲ್ಲಿ ಮತ್ತು ನಂತರ, ಒತ್ತಡ ಆಯಾಸ ಮತ್ತು ದೈಹಿಕ ಬದಲಾವಣೆಗಳು ಆಯಾಸದ ಭಾವನೆಯನ್ನು ಉಂಟುಮಾಡುತ್ತವೆ,ಇಂತಹ ಸಮಯದಲ್ಲಿ ಹೆಚ್ಚಾಗಿ ತಲೆ ನೋವು ಬರುತ್ತದೆ.
ಮಗುವಿಗೆ ಸ್ತನ್ಯಪಾನ ಮಾಡಿಸುವಾಗ ಕೂಡ ಹೆಚ್ಚು ತಲೆ ನೋವು ಉಂಟಾಗುತ್ತದೆ. ಸ್ತನ್ಯಪಾನದ ಸಮಯದಲ್ಲಿ, ದೇಹದಲ್ಲಿನ ಹಾರ್ಮೋನುಗಳ ಒಳಗೆ ಅನೇಕ ಬದಲಾವಣೆಯಾಗುತ್ತದೆ.ಇದು ತಲೆನೋವಿಗೆ ಕಾರಣವಾಗಬಹುದು.
ಇದಲ್ಲದೆ, ಹೆರಿಗೆಗೆ ಮೊದಲು ತಲೆನೋವು ಇದ್ದರೆ ಅಥವಾ ಮೈಗ್ರೇನ್ ನ ಇದ್ದರೆ ಅದು ಹೆರಿಗೆ ನಂತರದ ತಲೆ ನೋವಿನ ಅಪಾಯವನ್ನು ಸಹ ಹೆಚ್ಚಿಸುತ್ತದೆ.
ಹೆರಿಗೆ ನಂತರದ ತಲೆನೋವನ್ನು ತಪ್ಪಿಸಲು ವೈದ್ಯರ ಹತ್ತಿರವೇ ಹೋಗಬೇಕೆಂದಿಲ್ಲ ಇದಲ್ಲದೆ ತಲೆನೋವನ್ನು ದೂರ ಮಾಡಬಹುದು. ಅದಕ್ಕಾಗಿ ಯಾವುದೇ ಔಷಧಿ ಸೇವಿಸುವ ಅಗತ್ಯವಿಲ್ಲ, ಬದಲಾಗಿ ನೀವು ಕೆಲವೊಂದು ಮುಂಜಾಗ್ರತಾ ಕ್ರಮಗಳನ್ನು ಅಳವಡಿಸಿಕೊಂಡರೆ ಸಾಕು ಇದರಿಂದ ತಲೆನೋವು ಸಂಪೂರ್ಣವಾಗಿ ದೂರವಾಗುತ್ತದೆ.
ಸಾಕಷ್ಟು ನಿದ್ದೆಯನ್ನು ಮಾಡಬೇಕು.
ದೇಹವನ್ನು ಹೈಡ್ರೇಟ್ ಆಗಿರಿಸಿಕೊಳ್ಳುವುದು ಉತ್ತಮ.
ಒಳ್ಳೆಯ ವಿಶ್ರಾಂತಿ ಪಡೆಯಿರಿ ಮತ್ತು ಒತ್ತಡವನ್ನು ತೆಗೆದುಕೊಳ್ಳಬಾರದು.
ತಲೆನೋವನ್ನು ಪ್ರಚೋದಿಸುವ ವಿಷಯಗಳಿಂದ ದೂರವಿರಿ
ಆಹಾರದಲ್ಲಿ ಹೆಚ್ಚು ಪ್ರೋಟೀನ್ ಕಾರ್ಬೋಹೈಡ್ರೇಟ್ ಗಳು ಮತ್ತು ಖನಿಜಗಳನ್ನು ತೆಗೆದುಕೊಳ್ಳಬೇಕು.
ಪ್ರತಿದಿನ ದೈಹಿಕ ಚಟುವಟಿಕೆಯನ್ನು ಮಾಡಬೇಕು.
ಕಣ್ಣುಗಳ ಮೇಲೆ ಹೆಚ್ಚು ಒತ್ತಡ ಕೊಡಬಾರದು.