ನವದೆಹಲಿ : ದೇಶಾದ್ಯಂತ ಅಂಚೆ ಕಚೇರಿಗಳಲ್ಲಿ ಖಾಲಿ ಇರುವ 48,000 ಗ್ರಾಮೀಣ ಶಾಖೆಯ ಪೋಸ್ಟ್ ಮಾಸ್ಟರ್ ಮತ್ತು ಸಹಾಯಕ ಶಾಖಾ ಪೋಸ್ಟ್ ಮಾಸ್ಟರ್ ಹುದ್ದೆಗಳಿಗೆ ಅಧಿಸೂಚನೆಯನ್ನು ಜನವರಿ 29 ರಂದು ಬಿಡುಗಡೆ ಮಾಡಲಾಗುವುದು.
ಹೌದು, ಅಂಚೆ ಇಲಾಖೆಯಲ್ಲಿ ಕೆಲಸ ಪಡೆಯುವುದು ನಿಮ್ಮ ಗುರಿಯಾಗಿದ್ದರೆ, ನೀವು ಜನವರಿ 29 ರಂದು ಅಂಚೆ ಇಲಾಖೆಯಲ್ಲಿ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಅಂಚೆ ಇಲಾಖೆ ಪ್ರತಿ ವರ್ಷ ಎರಡು ಬಾರಿ ಖಾಲಿ ಹುದ್ದೆಗಳನ್ನ ಭರ್ತಿ ಮಾಡುತ್ತದೆ. ಕಳೆದ ವರ್ಷ ಜುಲೈನಲ್ಲಿ ಹೊರಡಿಸಿದ ಅಧಿಸೂಚನೆಯ ಮೂಲಕ ಭರ್ತಿಯಾಗದ ಉಳಿದ ಹುದ್ದೆಗಳ ಜೊತೆಗೆ ಖಾಲಿ ಹುದ್ದೆಗಳನ್ನ ಭರ್ತಿ ಮಾಡಲಾಗುವುದು.
10ನೇ ತರಗತಿ ಉತ್ತೀರ್ಣರಾದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 18 ರಿಂದ 40 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. ಸರ್ಕಾರದ ನಿಯಮಗಳ ಪ್ರಕಾರ, ಎಸ್ಸಿ, ಎಸ್ಟಿ, ಒಬಿಸಿ ಮತ್ತು ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ವಯಸ್ಸಿನ ಮಿತಿಯಲ್ಲಿ ಸಡಿಲಿಕೆ ಇರುತ್ತದೆ. 10ನೇ ತರಗತಿಯಲ್ಲಿ ಪಡೆದ ಅಂಕಗಳು (ಗ್ರೇಡ್) ಮತ್ತು ಮೀಸಲಾತಿ ನಿಯಮದ ಆಧಾರದ ಮೇಲೆ ಅಭ್ಯರ್ಥಿಗಳನ್ನ ಆಯ್ಕೆ ಮಾಡಲಾಗುತ್ತದೆ. ಎಸ್ಸಿ, ಎಸ್ಟಿ, ವಿಕಲಚೇತನರು ಮತ್ತು ಮಹಿಳೆಯರಿಗೆ ಯಾವುದೇ ಪರೀಕ್ಷಾ ಶುಲ್ಕವಿಲ್ಲ. ಉಳಿದ ಅಭ್ಯರ್ಥಿಗಳು 100 ರೂಪಾಯಿ ಪಾವತಿಸಬೇಕು. ಅಂಚೆ ಇಲಾಖೆ ರಾಜ್ಯವಾರು ಖಾಲಿ ಹುದ್ದೆಗಳ ವಿವರಗಳನ್ನ ಪ್ರಕಟಿಸಲಿದೆ.
‘ರೇಷನ್ ಅಕ್ಕಿ’ ತೊಳೆಯುವಾಗ ಇದನ್ನು ಹಾಕಿ ನೋಡಿ, ನೀವು ಮತ್ತೆ ಬೇರೆ ಅಕ್ಕಿ ಖರೀದಿಸೋದಿಲ್ಲ
ಕೆಲಸದ ಸ್ಥಳದಲ್ಲಿ ಅಹಿತಕರ ವರ್ತನೆಯು ಲೈಂಗಿಕ ಕಿರುಕುಳವಾಗಿದೆ : ಹೈಕೋರ್ಟ್ ಮಹತ್ವದ ತೀರ್ಪು
‘ರೇಷನ್ ಅಕ್ಕಿ’ ತೊಳೆಯುವಾಗ ಇದನ್ನು ಹಾಕಿ ನೋಡಿ, ನೀವು ಮತ್ತೆ ಬೇರೆ ಅಕ್ಕಿ ಖರೀದಿಸೋದಿಲ್ಲ