ಬೆಂಗಳೂರು: ಮನೆಯಲ್ಲಿ ಕೆಲಸಕ್ಕಿದ್ದಂತ ಮಹಿಳೆ ಹಾಗೂ ಅವರ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಡಿ ಶಾಸಕ ಹೆಚ್.ಡಿ ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಈ ಪ್ರಕರಣದ ಬಗ್ಗೆ ನಟ ಚೇತನ್ ಏನು ಹೇಳಿದ್ರು ಅಂತ ಮುಂದೆ ಓದಿ.
ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಶಾಸಕ ಹೆಚ್.ಡಿ ರೇವಣ್ಣ ವಿರುದ್ಧ ದಾಖಲಾಗಿರುವಂತ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಎಸ್ಐಟಿಯಿಂದ ತನಿಖೆ ಚುರುಕುಗೊಳಿಸಲಾಗಿದೆ. ಮೂವರು ಸಂತ್ರಸ್ತೆಯರು ತನಿಖಾ ತಂಡದ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ.
ಈ ಪ್ರಕರಣ ಕುರಿತಂತೆ ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಪ್ರಜ್ವಲ್ ರೇವಣ್ಣ ವಿರುದ್ಧದ ಆರೋಪಗಳು ಗಂಭೀರವಾಗಿದ್ದು ಆಗಿದೆ. ತಪ್ಪು ಸಬೀತಾದ್ರೇ ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಅನ್ಯಾಯಕ್ಕೆ ಒಳಗಾದ ಮಹಿಳೆಯರು ತಮ್ಮ ಕಷ್ಟಗಳನ್ನು ವಿವರಿಸೋ ಧೈರ್ಯದಿಂದ ಮುಂದೆ ಬರುತ್ತಿರೋದು ನೋಡಿದ್ರೇ ಸಂತೋಷವಾಗುತ್ತಿದೆ ಎಂದಿದ್ದಾರೆ.
What boggles my mind about ongoing gargantuan sex scandal is sheer IMPUNITY of accused Prajwal Revanna to materialise 2,900 pics/videos
Wasn’t there any fear of dire consequences his party/family/he wud face if made public?
Repulsive hubris of Indian ruling elites is astounding
— Chetan Kumar Ahimsa / ಚೇತನ್ ಅಹಿಂಸಾ (@ChetanAhimsa) April 29, 2024
ಪೆನ್ ಡ್ರೈವ್ ಸಮಸ್ಯೆಯನ್ನು ಸಾವಿರಾರು ನಿರ್ಭಯಾ ಗಳಿಗೆ ಹೋಲಿಸಿ, ಅದಕ್ಕೆ ಪ್ರಧಾನಿ ಮೋದಿ, ಬಿಜೆಪಿ ಹೊಣೆ ಹೊರಬೇಕೆಂದು ಒತ್ತಾಯಿಸುತ್ತಿರುವ ಕಾಂಗ್ರೆಸ್ ಪಕ್ಷದ ಮಹಿಳೆಯರ ನಡೆ ಹಾಸ್ಯಾಸ್ಪದವಾಗಿದೆ ಎಂಬುದಾಗಿ ಹೇಳಿದ್ದಾರೆ.
ಇನ್ನೂ ಲೈಂಗಿಕ ಹಗರಣದಲ್ಲಿ 2,900 ಪೆನ್ ಡ್ರೈವ್ ಚಿತ್ರಗಳು, ವೀಡಿಯೋಗಳು ಕಾರ್ಯರೂಪಕ್ಕೆ ತರಲು ಆರೋಪಿ ಪ್ರಜ್ವಲ್ ರೇವಣ್ಣ ನಡೆಸಿದ ಸಂಪೂರ್ಣ ನಿರ್ಭಯತೆಯು ನನ್ನ ಮನಸ್ಸನ್ನು ದಿಗ್ಭ್ರಮೆಗೊಳಿಸಿದೆ. ಪೆನ್ ಡ್ರೈವ್ ಸಾರ್ವಜನಿಕಗೊಳಿಸಿದರೇ ಅವರ ಪಕ್ಷ, ಕುಟುಂಬದವರು ಎದುರಿಸಬೇಕಾದ ಭೀಕರ ಪರಿಣಾಮಗಳ ಬಗ್ಗೆ ಯಾವುದೇ ಭಯವಿರಲಿಲ್ಲವೇ ಎಂಬುದಾಗಿ ನಟ ಚೇತನ್ ಪ್ರಶ್ನಿಸಿದ್ದಾರೆ.
Accusations against Prajwal Revanna are grave & he must be soundly punished if wrongdoing is proved
Glad wronged women are courageously coming forward
Congress party women comparing pen drive issue to ‘1000s of Nirbhayas’ & demanding Modi/BJP take responsibility are far-fetched
— Chetan Kumar Ahimsa / ಚೇತನ್ ಅಹಿಂಸಾ (@ChetanAhimsa) April 28, 2024
BREAKING : ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ : ಅಸ್ಸಾಂ ಪೊಲೀಸರಿಂದ ಮೊದಲ ಆರೋಪಿ ಬಂಧನ