Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘AC’ ಇಲ್ಲದೆಯೇ ನಿಮ್ಮ ಮನೆ ಮಲೆನಾಡಿನಂತೆ ತಂಪಾಗಿರಬೇಕೆ? ಈ 6 ಸೂತ್ರಗಳನ್ನು ಪಾಲಿಸಿ!

05/04/2026 9:44 PM

ಇನ್ಮುಂದೆ ರಾಜ್ಯದಲ್ಲಿ ‘ದ್ವಿತೀಯ PUC’ವರೆಗೆ ಗಂಡು ಮಕ್ಕಳಿಗೂ ‘ಉಚಿತ ಬಸ್ ಪ್ರಯಾಣ’ದ ವ್ಯವಸ್ಥೆ

05/04/2026 9:28 PM

ಹುಬ್ಬಳ್ಳಿಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ, ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಆರೋಪಿಗಳ ಬಂಧನ

05/04/2026 9:18 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕ್ರೀಡೆಗೆ ರಾಜಕಾರಣಿಗಳು ಅಪಾಯಕಾರಿ, ಕ್ರಿಕೆಟ್ ಆಟವನ್ನ ರಾಜಕಾರಣಿಗಳಿಂದ ದೂರವಿಡಿ: ಡಿಕೆಶಿ ಕಿವಿಮಾತು
KARNATAKA

ಕ್ರೀಡೆಗೆ ರಾಜಕಾರಣಿಗಳು ಅಪಾಯಕಾರಿ, ಕ್ರಿಕೆಟ್ ಆಟವನ್ನ ರಾಜಕಾರಣಿಗಳಿಂದ ದೂರವಿಡಿ: ಡಿಕೆಶಿ ಕಿವಿಮಾತು

By kannadanewsnow0929/12/2024 6:43 PM

ಬೆಂಗಳೂರು : “ಕ್ರಿಕೆಟ್ ಆಟವನ್ನು ರಾಜಕಾರಣಿಗಳಿಂದ ದೂರವಿಡಬೇಕು. ಈ ಕ್ರೀಡೆಯನ್ನು ಆಟಗಾರರೇ ಮುನ್ನಡೆಸಿಕೊಂಡು ಹೋಗಬೇಕು” ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಅಭಿಪ್ರಾಯಪಟ್ಟರು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ತಂಡದ ಮಾಜಿ ಆಟಗಾರ ಸಯ್ಯದ್ ಕಿರ್ಮಾನಿ ಅವರ 75ನೇ ಜನ್ಮದಿನದ ಹಿನ್ನೆಲೆಯಲ್ಲಿ ಅವರ ಆತ್ಮ ಚರಿತ್ರೆ “ಸ್ಟಂಪಡ್ – ಲೈಫ್ ಬಿಯಾಂಡ್ ಅಂಡ್ ಬಿಯಾಂಡ್ ದಿ ಟ್ವೆಂಟಿ ಟು ಯಾರ್ಡ್ಸ್” ಬಿಡುಗಡೆ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಭಾನುವಾರ ಮಾತನಾಡಿದ ಅವರು, ಕ್ರೀಡೆಗೆ ರಾಜಕಾರಣಿಗಳು ಅಪಾಯಕಾರಿ, ಹೀಗಾಗಿ ಕ್ರೀಡಾ ಚಟುವಟಿಕೆಗಳಿಂದ ಅವರನ್ನು ದೂರ ಇಡಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ನಾನೊಬ್ಬ ರಾಜಕಾರಣಿ, ಆದರೂ ಕಿರ್ಮಾನಿ ಅವರು ಈ ಕಾರ್ಯಕ್ರಮಕ್ಕೆ ನನಗೆ ಏಕೆ ಆಹ್ವಾನ ನೀಡಿದರೋ ಗೊತ್ತಿಲ್ಲ ಎಂದರು.

ಕಿರ್ಮಾನಿ ಅವರದ್ದು ಅತ್ಯುತ್ತಮ ವ್ಯಕ್ತಿತ್ವ

ಪ್ರತಿಭೆ ನಿಮ್ಮನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತದೆ. ಆ ಉನ್ನತ ಸ್ಥಾನವನ್ನು ಉಳಿಸಿಕೊಳ್ಳಲು ಒಳ್ಳೆಯ ಗುಣ ನಿಮಗೆ ಸಹಾಯ ಮಾಡುತ್ತದೆ. ಕಿರ್ಮಾನಿ ಅವರು ಈ ಎರಡೂ ಗುಣಗಳನ್ನು ಹೊಂದಿದ್ದಾರೆ ತಿಳಿಸಿದರು.

ಕಿರ್ಮಾನಿ ಅವರು ಕೇವಲ ಕ್ರಿಕೆಟ್ ಪ್ರತಿಭೆಯಷ್ಟೇ ಅಲ್ಲ, ಅತ್ಯುತ್ತಮ ವ್ಯಕ್ತಿತ್ವ ಇರುವವರು. ಕರ್ನಾಟಕ ಪ್ರತಿನಿಧಿಸುವ ಆಟಗಾರನಾಗಿ ಭಾರತೀಯ ಕ್ರಿಕೆಟ್ ಗೆ ದೊಡ್ಡ ಕೊಡುಗೆ ನೀಡಿದವರು ಕಿರ್ಮಾನಿ. ಶುದ್ಧ ಹೃದಯ ವಿಶ್ವದ ಶ್ರೇಷ್ಠ ದೇವಾಲಯ ಎಂದು ಹೇಳುತ್ತಾರೆ. ಕಿರ್ಮಾನಿ ಅವರು ಇಂತಹ ಶುದ್ಧ ಹೃದಯ ಹಾಗೂ ಮುಗುಳ್ನಗೆ ಹೊಂದಿರುವ ಹೃದಯವಂತ. ಇಂತವರು ಜಗತ್ತಿನಲ್ಲಿ ಬಹಳ ಅಪರೂಪ ಎಂದರು.

ನಾನು ಕಿರ್ಮಾನಿ ಅವರ ಅಭಿಮಾನಿ

ನಾನಿಲ್ಲಿ ಡಿಸಿಎಂ ಆಗಿ ಬಂದಿಲ್ಲ. ಕಿರ್ಮಾನಿ ಅವರ ಅಭಿಮಾನಿಯಾಗಿ ಬಂದಿದ್ದೇನೆ. ನಾನು ಶಾಲೆಯಲ್ಲಿದ್ದಾಗ, ಚಂದ್ರಶೇಖರ್, ಜಿ.ಆರ್. ವಿಶ್ವನಾಥ್ ಹಾಗೂ ಕಿರ್ಮಾನಿ ಅವರ ಅಭಿಮಾನಿಯಾಗಿದ್ದೆ. ನೀವೆಲ್ಲರೂ ಸೇರಿ ನಮ್ಮ ರಾಜ್ಯ ಹಾಗೂ ದೇಶ ಹೆಮ್ಮೆಪಡುವಂತೆ ಸಾಧನೆ ಮಾಡಿದ್ದೀರಿ. ಇವರ ಜತೆಗೆ ಚಂದ್ರಶೇಖರ್, ಬ್ರಿಜೇಶ್ ಪಟೇಲ್, ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ಸೇರಿದಂತೆ ಅನೇಕರು ಅತ್ಯುತ್ತಮ ಸಾಧನೆ ಮಾಡಿದ್ದಾರೆ ಎಂದರು.

ಕೆಎಸ್ ಸಿಎ ಕಾರ್ಯದರ್ಶಿಯಾಗಿದ್ದ ನಾಗರಾಜ್ ಅವರ ಪುತ್ರ ಹಾಗೂ ನಾನು ಒಂದೇ ಶಾಲೆಯಲ್ಲಿ ಓದುತ್ತಿದ್ದೆ. ಭಾರತ ಪಾಕಿಸ್ತಾನ ಪಂದ್ಯಗಳ ಟಿಕೆಟ್ ಪಡೆಯುತ್ತಿದ್ದೆ. ನಾನು ವಿದ್ಯಾರ್ಥಿ ನಾಯಕನಾಗಿದ್ದಾಗ ಕೆಎಸ್ ಸಿಎಗೆ ಪತ್ರ ಬರೆದು ನೂರಾರು ಟಿಕೆಟ್ ಪಡೆದು ನಮ್ಮ ಹುಡುಗರಿಗೆ ಹಂಚಿ ವಿದ್ಯಾರ್ಥಿ ನಾಯಕನಾಗಿದ್ದೆ. ಅಲ್ಲಿಂದ ನಾನು ಸುಮಾರು 10 ವಿಧಾನಸಭಾ ಚುನಾವಣೆಗಳನ್ನು ಎದುರಿಸಿದ್ದೇನೆ ಎಂದರು.

ನೀವೆಲ್ಲರೂ ದೇಶಕ್ಕೆ ಕೊಡುಗೆ ನೀಡಿದ್ದೀರಿ. ಎಸ್.ಎಂ ಕೃಷ್ಣ ಅವರ ಸರ್ಕಾರದಲ್ಲಿ ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗ, ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಧ್ಯಕ್ಷರಾಗುವಂತೆ ನಾರಾಯಣಸ್ವಾಮಿ ಅವರಿಗೆ ಹೇಳಿದ್ದೆವು. ಅವರು ನಮ್ಮ ಮನವಿ ಒಪ್ಪಿ ಆ ಜವಾಬ್ದಾರಿ ವಹಿಸಿಕೊಂಡರು. ಆಗ ರತನ್ ಟಾಟಾ ಅವರನ್ನು ಭೇಟಿ ಮಾಡಬೇಕಾಯಿತು. ಆಗ ಅವರು ಒಂದು ಮಾತು ಹೇಳಿದರು. ನೀವು ವೇಗವಾಗಿ ಸಾಗಬೇಕಾದರೆ ಒಬ್ಬರೇ ಸಾಗಿ, ನೀವು ದೂರ ಸಾಗಬೇಕಾದರೆ ಎಲ್ಲರೊಟ್ಟಿಗೆ ಸೇರಿ ಸಾಗಿ ಎಂದು ಹೇಳಿದರು. ಇದು ಕ್ರಿಕೆಟ್ ಗೂ ಅನ್ವಯವಾಗುತ್ತದೆ. ಎಲ್ಲಾ ಆಟಗಾರರು ಒಗ್ಗಟ್ಟಾಗಿ ಸಾಗಿದರೆ ಮಾತ್ರ ತಂಡ ತನ್ನ ಗುರಿ ಮುಟ್ಟುತ್ತದೆ ಎಂದು ತಿಳಿಸಿದರು.

ಆಗಿನ ಕಾಲದ ಆಟಗಾರರು ಈಗಿನ ಕಾಲದಂತೆ ಅತ್ಯುತ್ತಮ ತರಬೇತಿ ಕೇಂದ್ರಗಳನ್ನು ಹೊಂದಿರಲಿಲ್ಲ. ಆದರೂ ದೊಡ್ಡ ಮಟ್ಟಕ್ಕೆ ಬೆಳೆದು ದೇಶಕ್ಕೆ ಕೊಡುಗೆ ನೀಡಿದ್ದಾರೆ. ಪ್ರತಿಭೆ ಇದ್ದರೆ ಉನ್ನತ ಸ್ಥಾನಕ್ಕೆ ಏರುತ್ತೇವೆ, ಆದರೆ ಆ ಸ್ಥಾನವನ್ನು ಕಾಯ್ದುಕೊಳ್ಳಬೇಕಾದರೆ ವ್ಯಕ್ತಿತ್ವ ಬಹಳ ಮುಖ್ಯ. ಇದಕ್ಕೆ ಕಿರ್ಮಾನಿ ಉತ್ತಮ ಉದಾಹರಣೆ. ಇಲ್ಲಿರುವ ಆಟಗಾರರೆಲ್ಲರೂ ಉತ್ತಮ ಬಾಂಧವ್ಯ ಹೊಂದಿದ್ದೀರಿ ಎಂದರು.

ಕಪಿಲ್ ದೇವ್ ಅವರು ಹೇಳಿದಂತೆ, ಅನುಭವದ ಮುಂದೆ ಬೇರೇನೂ ಇಲ್ಲ. ಅನುಭವ ವ್ಯಕ್ತಿಯನ್ನು ಪಕ್ವವಾಗಿಸುತ್ತದೆ. ನಿಮ್ಮ ನಡುವಣ ಬಾಂಧವ್ಯ ನೀರಿನಂತೆ. ಅದಕ್ಕೆ ಬಣ್ಣ, ರುಚಿ ಇಲ್ಲ. ಆದರೂ ಅದು ಬಹಳ ಮುಖ್ಯ. ನೀವು ಯಾವುದೇ ತಲೆಮಾರಿನವರಾಗಿರಿ, ಯಾವುದೇ ವಯೋಮಾನದವರಾಗಿರಿ, ಈ ಕ್ಷೇತ್ರದಲ್ಲಿ ನಿಮ್ಮ ಕೊಡುಗೆ ಹಾಗೂ ನೆನಪು ನಮಗೆ ಮಾದರಿಯಾಗಿದೆ ಎಂದರು.

ಅನೇಕ ಬಾರಿ ನಾನು ಒಂದು ಮಾತು ಹೇಳುತ್ತಿರುತ್ತೇನೆ. ನೀವು ನಿಮ್ಮ ಮೂಲ ಮರೆತರೆ ಜೀವನದಲ್ಲಿ ಫಲ ಪಡೆಯುವುದಿಲ್ಲ. ಕಪಿಲ್ ದೇವ್ ಅವರು ಹೇಳಿದಂತೆ ಅವರು ರೈತಾಪಿ ಕುಟುಂಬದಿಂದ ಬಂದವರು. ಈ ದೇಶದಲ್ಲಿ 67% ಜನ ರೈತಾಪಿ ವರ್ಗದವರು. ಅವರಿಲ್ಲದೆ ನಾವಿಲ್ಲ. ನೀವೆಲ್ಲರೂ ನಿಮ್ಮ ಮೂಲವನ್ನು ಮರೆಯದೆ ಬೆಳೆದಿದ್ದೀರಿ ಎಂದು ತಿಳಿಸಿದರು.

ಕಿರ್ಮಾನಿ ಅವರು ನನಗೆ ಅತ್ಯುತ್ತಮ ಸ್ನೇಹಿತರು. ಇತ್ತೀಚೆಗೆ ನಾನು, ಕಿರ್ಮಾನಿ ಹಾಗೂ ಫಾರೂಕ್ ಅಬ್ದುಲ್ಲಾ ಅವರು ಒಟ್ಟಿಗೆ ಸೇರಿದ್ದೆವು. ಅವರು ಹೃದಯ ಬಹಳ ಶುದ್ಧವಾಗಿದ್ದು, ಸದಾ ಹಸನ್ಮುಖಿ. ಅವರು ಹೀಗೆ ಸದಾ ನಗುತ್ತಿರಲಿ. ಅವರು ತಮ್ಮ ನೂರನೇ ವರ್ಷದ ಜನ್ಮದಿನ ಆಚರಿಸುವಂತಾಗಲಿ. ಕಿರ್ಮಾನಿ ಅವರೇ ನಿಮ್ಮ ಜತೆ ಹುಟ್ಟಿದವರು, ಬಂಧುಗಳು ಮಾತ್ರ ನಿಮ್ಮ ಕುಟುಂಬವಲ್ಲ. ಇಲ್ಲಿರುವ ನಾವೆಲ್ಲರೂ ನಿಮ್ಮ ಕುಟುಂಬದವರು. ನೀವು 88 ಟೆಸ್ಟ್ ಪಂದ್ಯಗಳನ್ನಾಡಿದ್ದೀರಿ. 100 ಪಂದ್ಯಗಳನ್ನು ಆಡಬೇಕಿತ್ತು ಎಂದರು.

ಕ್ರೀಡೆಯಲ್ಲಿ ನೀವು ಬೇರೆ ಬೇರೆ ರೀತಿಯಲ್ಲಿ ಇನ್ನಷ್ಟು ಸೇವೆ ಸಲ್ಲಿಸಿ. ನಿಮ್ಮ ಮುಂದಿನ ಬದುಕು ಮತ್ತಷ್ಟು ಯಶಸ್ವಿಯಾಗಲಿ. ನಾನು ಕಿರ್ಮಾನಿ ಅಭಿಮಾನಿ ಹಾಗೂ ಕೆಎಸ್ ಸಿಎ ಸದಸ್ಯನಾಗಿ ಇಲ್ಲಿಗೆ ಬಂದಿದ್ದೇನೆ. ನಾನು ₹2 ಸಾವಿರ ನೀಡಿ ಕೆಎಸ್ ಸಿಎ ಸದಸ್ಯತ್ವ ಪಡೆದಿದ್ದೆ. ಆದರೂ ಆಡಳಿತ ಮಂಡಳಿಯಲ್ಲಿ ರಾಜಕಾರಣಿಗಳು ಇಲ್ಲದಿರುವುದು ನನಗೆ ಸಂತೋಷವಿದೆ ಎಂದು ಹೇಳಿದರು.

75 ವಸಂತಗಳನ್ನು ಪೂರೈಸಿರುವ ನಿಮಗೆ ದೇವರು ಹೆಚ್ಚಿನ ಆಯಸ್ಸು ನೀಡುತ್ತಾನೋ ಇಲ್ಲವೋ ಗೊತ್ತಿಲ್ಲ. ಕಿರ್ಮಾನಿ ಅವರ ನೆಪದಲ್ಲಿ ಕ್ರಿಕೆಟ್ ಲೋಕದ ದಿಗ್ಗಜರು ಒಂದೇ ಕಡೆ ಸೇರಿರುವುದನ್ನು ನೋಡುವುದಕ್ಕೆ ಸಂತಸವಾಗುತ್ತಿದೆ ಎಂದರು.

BREAKING: ರಾಜ್ಯದಲ್ಲಿ ಮುಂದುವರೆದ ಬಾಣಂತಿಯರ ಸಾವಿನ ಸರಣಿ: ತಿಪಟೂರಲ್ಲಿ ಸಿಸೇರಿಯನ್ ಆದ ಕೆಲವೇ ಗಂಟೆಯಲ್ಲಿ ಕೊನೆಯುಸಿರು

ಡಿ.31ರಂದು ಅಲ್ಲಿ ಇಲ್ಲಿ ಯಾಕೆ? ‘ಫ್ಯಾಮಿಲಿ ಸಹಿತ’ ಇಲ್ಲಿಗೆ ಹೋಗಿ, ಹೊಸ ವರ್ಷಾಚರಣೆ ಮಾಡಿ

BREAKING: KPSC ಕೆಎಎಸ್ ಪರೀಕ್ಷೆಯಲ್ಲಿ ಮಹಾ ಎಡವಟ್ಟು: OMR ಶೀಟ್ ನೋಂದಣಿ ಸಂಖ್ಯೆಯೇ ಬದಲಾವಣೆ

Share. Facebook Twitter LinkedIn WhatsApp Email

Related Posts

ಇನ್ಮುಂದೆ ರಾಜ್ಯದಲ್ಲಿ ‘ದ್ವಿತೀಯ PUC’ವರೆಗೆ ಗಂಡು ಮಕ್ಕಳಿಗೂ ‘ಉಚಿತ ಬಸ್ ಪ್ರಯಾಣ’ದ ವ್ಯವಸ್ಥೆ

05/04/2026 9:28 PM1 Min Read

ಹುಬ್ಬಳ್ಳಿಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ, ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಆರೋಪಿಗಳ ಬಂಧನ

05/04/2026 9:18 PM1 Min Read

Rain In Karnataka: ನಾಳೆಯಿಂದ 4 ದಿನ ರಾಜ್ಯದಲ್ಲಿ ಮಳೆ ಅಬ್ಬರ: ಬೆಂಗಳೂರು ಸೇರಿ 16 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ

05/04/2026 7:59 PM2 Mins Read
Recent News

‘AC’ ಇಲ್ಲದೆಯೇ ನಿಮ್ಮ ಮನೆ ಮಲೆನಾಡಿನಂತೆ ತಂಪಾಗಿರಬೇಕೆ? ಈ 6 ಸೂತ್ರಗಳನ್ನು ಪಾಲಿಸಿ!

05/04/2026 9:44 PM

ಇನ್ಮುಂದೆ ರಾಜ್ಯದಲ್ಲಿ ‘ದ್ವಿತೀಯ PUC’ವರೆಗೆ ಗಂಡು ಮಕ್ಕಳಿಗೂ ‘ಉಚಿತ ಬಸ್ ಪ್ರಯಾಣ’ದ ವ್ಯವಸ್ಥೆ

05/04/2026 9:28 PM

ಹುಬ್ಬಳ್ಳಿಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ, ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಆರೋಪಿಗಳ ಬಂಧನ

05/04/2026 9:18 PM

ಸಿಎಸ್‌ಕೆ ವಿರುದ್ಧ ವಿರಾಟ್ ಕೊಹ್ಲಿ ಅಬ್ಬರ: ರೋಹಿತ್ ಶರ್ಮಾ ದಾಖಲೆ ಪುಡಿಪುಡಿ ಮಾಡಿದ ‘ಕಿಂಗ್ ಕೊಹ್ಲಿ’!

05/04/2026 9:15 PM
State News
KARNATAKA

ಇನ್ಮುಂದೆ ರಾಜ್ಯದಲ್ಲಿ ‘ದ್ವಿತೀಯ PUC’ವರೆಗೆ ಗಂಡು ಮಕ್ಕಳಿಗೂ ‘ಉಚಿತ ಬಸ್ ಪ್ರಯಾಣ’ದ ವ್ಯವಸ್ಥೆ

By kannadanewsnow0905/04/2026 9:28 PM KARNATAKA 1 Min Read

ಬೆಂಗಳೂರು: ರಾಜ್ಯದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಕರ್ನಾಟಕ ಸರ್ಕಾರವು ಸಿಹಿ ಸುದ್ದಿಯೊಂದನ್ನು ನೀಡಲು ಸಜ್ಜಾಗಿದೆ. ರಾಜ್ಯದಲ್ಲಿ ‘ಮಕ್ಕಳ ಸ್ನೇಹಿ ಸಾರಿಗೆ ವ್ಯವಸ್ಥೆ’ಯನ್ನು…

ಹುಬ್ಬಳ್ಳಿಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ, ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಆರೋಪಿಗಳ ಬಂಧನ

05/04/2026 9:18 PM

Rain In Karnataka: ನಾಳೆಯಿಂದ 4 ದಿನ ರಾಜ್ಯದಲ್ಲಿ ಮಳೆ ಅಬ್ಬರ: ಬೆಂಗಳೂರು ಸೇರಿ 16 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ

05/04/2026 7:59 PM

ಮನೆಯ ‘ಗೃಹಮಂತ್ರಿ’ಯಾದತಂಹ ಗೃಹಿಣಿಗಾಗಿ ಉಪಯುಕ್ತ ‘ಟಿಪ್ಸ್’ಗಳು.!

05/04/2026 7:04 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.