ಮಂಡ್ಯ : ಸದಸ್ಯರಲ್ಲದವರಿಗೆ ಪ್ರವೇಶ ನೀಡಿ ಅಕ್ರಮವಾಗಿ ಜೂಜಾಟ ಆಡಿಸುತ್ತಿದ್ದ ಮದ್ದೂರು ಪೋಲೀಸ್ ಠಾಣಾ ವ್ಯಾಪ್ತಿಯ ಕ್ಲಬ್ ಮೇಲೆ ಮಳವಳ್ಳಿ ಗ್ರಾಮಾಂತರ ಪೊಲೀಸರು ದಾಳಿ ಮಾಡಿದ್ದು, 71 ಮಂದಿಯನ್ನು ವಶಕ್ಕೆ ಪಡೆದು 99.970 ರೂಪಾಯಿ ಹಣವನ್ನು ಜಪ್ತಿ ಮಾಡಿದ್ದಾರೆ.
ಮದ್ದೂರು ತಾಲೂಕಿನ ನಿಡಘಟ್ಟ ಗ್ರಾಮದ ಶ್ರೀ ವರದರಾಜ ರೀ ಕ್ರಿಯೇಷನ್ ಕ್ಲಬ್ ( ಕುಳ್ಳರಾಜ ಕ್ಲಬ್ ) ಮೇಲೆ ಭಾನುವಾರ ದಾಳಿ ಮಾಡಿರುವ ಮಳವಳ್ಳಿ ಗ್ರಾಮಾಂತರ ವೃತ್ತ ನಿರೀಕ್ಷಕ ಪಿ.ಜಿ.ಮಹೇಶ್ ಹಾಗೂ ಸಿಬ್ಬಂದಿಗಳು ರಾಮನಗರ, ತುಮಕೂರು ಹಾಗೂ ಮಂಡ್ಯ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿ ಕ್ಲಬ್ ಸದಸ್ಯರಲ್ಲದವರು ಜೂಜಾಟದಲ್ಲಿ ತೊಡಗಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಅವರಿಂದ 99 ಸಾವಿರದ 970 ರೂಪಾಯಿ ಹಣವನ್ನು ಜಪ್ತಿ ಮಾಡಲಾಗಿದೆ.
ಜೂಜಾಟದಲ್ಲಿ ತೊಡಗಿದ್ದ 71 ಮಂದಿಯನ್ನು ವಶಕ್ಕೆ ಪಡೆದು, ಅವರಿಂದ 99.970 ರೂಪಾಯಿ ಹಣವನ್ನು ಜಪ್ತಿ ಮಾಡಲಾಗಿದೆ. ಬಹುತೇಕರು, ಕ್ಲಬ್ ಸದಸ್ಯರಲ್ಲ. ಅಕ್ರಮವಾಗಿ ಕ್ಲಬ್‌ಗೆ ಬಂದು ಜೂಜಾಟದಲ್ಲಿ ತೊಡಗಿದ್ದರು. ಕ್ಲಬ್ ಆಡಳಿತ ಮಂಡಳಿ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಕರ್ನಾಟಕ ಪೋಲೀಸ್ ಕಾಯ್ದೆ 79, 80 ರ ಅನ್ವಯ ಪ್ರಕರಣ ದಾಖಲಿಸಿಕೊಂಡು 71 ಮಂದಿಗೆ ನೋಟೀಸ್ ಜಾರಿ ಮಾಡಲಾಗಿದೆ ಎಂದು ಮಳವಳ್ಳಿ ಡಿವೈಎಸ್ಪಿ ಕೃಷ್ಣಪ್ಪ ಹೇಳಿದರು.
ವರದಿ : ಗಿರೀಶ್ ರಾಜ್, ಮಂಡ್ಯ
GOOD NEWS: ಅನಧಿಕೃತ, ರೆವಿನ್ಯೂ ಬಡಾವಣೆಗಳಿಗೆ ‘ಬಿ-ಖಾತಾ’ ನೀಡಲು ಸಿಎಂ ಸಿದ್ದರಾಮಯ್ಯ ಸೂಚನೆ
BIG NEWS: ರಾಜ್ಯದಲ್ಲಿ ಇನ್ನೂ ಜೀವಂತ ‘ಸಾಮಾಜಿಕ ಬಹಿಷ್ಕಾರ’ ಪದ್ದತಿ: ನಿವಾರಣೆಗೆ ‘ಗ್ರಾಮ ಆಡಳಿತ’ ಮೀನಾಮೇಷ