ಕಲಬುರ್ಗಿ: ಜಿಲ್ಲೆಯಲ್ಲಿ ಕುಖ್ಯಾತ ದರೋಡೆಕೋರನ ಮೇಲೆ ಪೊಲೀಸರು ಫೈರಿಂಗ್ ಮಾಡಿ, ಆರೋಪಿಯನ್ನು ಬಂಧಿಸಿರುವಂತ ಘಟನೆ ಕಲಬುರ್ಗಿ ಉಪನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕಲಬುರ್ಗಿ ಉಪನಗರ ಠಾಣೆ ವ್ಯಾಪ್ತಿಯಲ್ಲಿ ಕುಖ್ಯಾತ ದರೋಡೆಕೋರ ಅವತಾರ್ ಸಿಂಗ್ ಎಂಬಾತನನ್ನು ಬಂದಿಸೋದಕ್ಕೆ ಕಲಬುರ್ಗಿ ಸಬ್ ಅರ್ಬನ್ ಠಾಣೆಯ ಇನ್ಸ್ ಪೆಕ್ಟರ್ ಹಾಗೂ ಸಿಬ್ಬಂದಿಗಳು ತೆರಳಿದ್ದಾರೆ. ಪೊಲೀಸರು ಬಂಧಿಸೋದಕ್ಕೆ ಬಂದಿರುವಂತ ವಿಷಯ ತಿಳಿದಂತ ದರೋಡೆಕೋರ ಅವತಾರ್ ಸಿಂಗ್ ತಪ್ಪಿಸಿಕೊಳ್ಳೋದಕ್ಕೆ ಪ್ರಯತ್ನಿಸಿದ್ದಾನೆ. ಅಲ್ಲದೇ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ.
ಪೊಲೀಸರ ಮೇಲೆ ಹಲ್ಲೆ ಮಾಡಿ, ಪರಾರಿಯಾಗಲು ಯತ್ನಿಸಿದಂತ ಕುಖ್ಯಾತ ದರೋಡೆಕೋರ ಅವತಾರ್ ಸಿಂಗ್ ಕಾಲಿಗೆ ಕಲಬುರ್ಗಿ ಅರ್ಬನ್ ಠಾಣೆಯ ಇನ್ಸ್ ಪೆಕ್ಟರ್ ಸಂತೋಷ್ ತಟ್ಟೆಪಲ್ಲಿ ಅವರು ಆತ್ಮರಕ್ಷಣೆಗಾಗಿ ಕಾಲಿಗೆ ಗುಂಡೇಟು ನೀಡಿ ಬಂಧಿಸಿದ್ದಾರೆ.
ಅಂದಹಾಗೇ ದರೋಡೆಕೋರ ಅವತಾರ್ ಸಿಂಗ್ ವಿರುದ್ಧ ಕಲಬುರ್ಗಿಯ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದಾವೆ. ಈ ಪ್ರಕರಣಗಳಲ್ಲಿ ಬೇಕಿದ್ದಂತ ಆರೋಪಿಯನ್ನು ಬಂಧಿಸೋದಕ್ಕೆ ತೆರಳಿದಂತ ವೇಳೆಯಲ್ಲಿ ಪೊಲೀಸರ ಮೇಲೆಗೆ ಹಲ್ಲೆಗೆ ಯತ್ನಿಸಿದ ಕಾರಣ, ಕಾಲಿಗೆ ಗುಂಟೇಡು ನೀಡಿ, ಬಂಧಿಸಲಾಗಿದೆ.
BREAKING: ಬೆಂಗಳೂರಲ್ಲಿ ಪೊಲೀಸರ ಗುಂಡಿನ ಸದ್ದು: ರೌಡಿ ಶೀಟರ್ ಕಾಲಿಗೆ ಗುಂಡೇಟು, ಅರೆಸ್ಟ್
BREAKING: ‘ಸಿಎಂ ಸಿದ್ಧರಾಮಯ್ಯ’ಗೆ ಬಿಜೆಪಿ ಸರ್ಕಾರದ ಅವಧಿಯ ‘ಕೋವಿಡ್ ಹಗರಣ’ಗಳ ವರದಿ ಸಲ್ಲಿಸಿದ ‘ತನಿಖಾ ಆಯೋಗ’
ದಾವಣಗೆರೆಯಲ್ಲಿ ಜೈಲು ಶಿಕ್ಷೆಯ ಭಯದಿಂದ ‘ಕೋರ್ಟ್’ನಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಆರೋಪಿ