ಬೆಂಗಳೂರು: ನಗರದಲ್ಲಿ ಹೊಸ ವರ್ಷ ಸಂಭ್ರಮಾಚರಣೆಯ ವೇಳೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಹದ್ದಿನ ಕಣ್ಣನ್ನು ಇರಿಸಿದೆ.
ಈ ಬಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮಾತನಾಡಿ, ಎಲ್ಲರೂ ಜವಾಬ್ದಾರಿಯಿಂದ ಆಚರಿಸೋಣ ಎಂಬ ಅಭಿಯಾನ ಮಾಡಲಾಗುತ್ತಿದೆ. ಪೊಲೀಸ್ ಅಧಿಕಾರಿಗಳು ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ಎಲ್ಲರೂ ಜವಾಬ್ದಾರಿಯಿಂದ ಹೊಸ ವರ್ಷ ಆಚರಣೆ ಮಾಡಬೇಕು ಎಂದರು.
ಬೆಂಗಳೂರಲ್ಲಿ ಅಗ್ನಿಶಾಮಕ ದಳ, ಬಿಎಂಟಿಸಿ, ಮೆಟ್ರೋ ಹೊಸ ವರ್ಷ ಆಚರಣೆಯ ಸೇವೆಗೆ ಸಿದ್ಧವಾಗಿದೆ. ಡ್ರಗ್ಸ್, ರೇವ್ ಪಾರ್ಟಿ ನಡೆಸಲು ಬಿಡೋದಿಲ್ಲ. ಹೊಸ ವರ್ಷಾಚರಣೆ ವೇಳೆಯಲ್ಲಿ ಡ್ರಿಂಕ್ ಅಂಡ್ ಡ್ರೈವ್ ಮಾಡಬಾರದು ಎಂದರು.
ವಿಶೇಷವಾಗಿ ಹೆಣ್ಣುಮಕ್ಕಳ ಸೇಫ್ಟಿ ಬಗ್ಗೆ ಸಾಕಷ್ಟು ತಯಾರಿ ಮಾಡಿದ್ದೇವೆ. ಸಿಸಿಟಿಪಿ, ಟೆಕ್ನಾಲಜಿ ಬಳಸಿಕೊಂಡು ಸೇಫ್ಟಿ ಕುರಿತು ಕ್ರಮ ವಹಿಸಿದ್ದೇವೆ. ಕ್ಯೂ ಆರ್ ಕೋಟ್ ಸ್ಕ್ಯಾನ್ ಮಾಡಿದ್ರ ಎಲ್ಲಾ ಮಾಹಿತಿಯೂ ಸಿಗಲಿದೆ. ಅದೇ ಕ್ಯೂ ಆರ್ ಕೋಡ್ ಬಳಸಿ ದೂರು ಕೂಡ ನೀಡಬಹುದು ಎಂದರು.








