ಬೆಂಗಳೂರು: ರಾಜ್ಯದಲ್ಲಿ ಸೋಷಿಯಲ್ ಮೀಡಿಯಾ ಮೇಲೆ ಪೊಲೀಸರ ಹದ್ದಿನ ಕಣ್ಣು ನೆಟ್ಟಿದ್ದಾರೆ. ಈಗ ಪ್ರತಿ ಪೊಲೀಸ್ ಠಾಣೆಯಲ್ಲೂ ಮಾನಿಟರ್ ವಿಭಾಗ ಸ್ಥಾಪನೆ ಮಾಡುವುದಾಗಿ ಗೃಹ ಸಚಿವ ಡಾ.ಜಿ ಪರಮೇಶ್ವರ್ ತಿಳಿಸಿದ್ದಾರೆ.
ವಿಧಾನ ಪರಿಷತ್ತಿನಲ್ಲಿ ಪ್ರಶ್ನೋತ್ತರ ಕಲಾಪದ ವೇಳೆಯಲ್ಲಿ ಬಿಜೆಪಿ ಸದಸ್ಯ ನವೀನ್ ಪ್ರಶ್ನಿಸಿದಂತ ಅವರು, ರಾಜ್ಯದಲ್ಲಿ ಸಾಮಾಜಿಕ ಜಾಲತಾಣ ನಿಗಾವಹಿಸಲು ಪೊಲೀಸ್ ಇಲಾಖೆಯಿಂದ ಪ್ರತ್ಯೇಕ ವ್ಯವಸ್ಥೆ ಮಾಡಬೇಕಾಗುತ್ತದೆ. ಪೊಲೀಸ್ ಇಲಾಖೆಗೆ ಸರ್ಕಾರ ಮತ್ತಷ್ಟು ಶಕ್ತಿ ಕೊಡಬೇಕು. ಸಾಮಾಜಿಕ ಜಾಲತಾಣಗಳಲ್ಲಿನ ಸುಳ್ಳು ಸುದ್ದಿ ಹರಡಿ ಹೆಚ್ಚು ಗಲಭೆಗಳು ಆಗುತ್ತಿವೆ ಎಂದರು.
ಈ ಪ್ರಶ್ನೆಗೆ ಉತ್ತರಿಸಿದಂತ ಗೃಹ ಸಚಿವ ಡಾ.ಜಿ ಪರಮೇಶ್ವರ್, ಸೋಷಿಯಲ್ ಮೀಡಿಯಾ ಬಹಳ ಉಪಯೋಗ ಆಗುತ್ತಿದೆ. ಅದರ ಜೊತೆಗೆ ಅಷ್ಟೇ ದುರುಪಯೋಗ ಆಗುತ್ತಿದೆ. ನಾವು ಈಗ ಟೆನ್ನಾಲಜಿ ಇಲ್ಲದೇ ಬದುಕಲು ಸಾಧ್ಯವಿಲ್ಲ ಎನ್ನುವ ಸ್ಥಿತಿಗೆ ತಲುಪಿದ್ದೇವೆ. ಫೇಸ್ ಬುಕ್, ಎಕ್ಸ್, ಯೂಟ್ಯೂಬ್ ಗಳ ಮೂಲಕ ಸುಳ್ಳು ಸುದ್ದಿ ಹಬ್ಬಿಸೋ ಕೆಲಸ ಆಗುತ್ತಿದೆ ಎಂದರು.
ದೇಶದಲ್ಲಿ ಮೊದಲ ಬಾರಿಗೆ ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಗೆ ಒಂದು ವಿಭಾಗ ಪ್ರಾರಂಭ ಮಾಡಿದ್ದೇವೆ. ಎಡಿಜಿಪಿ ಸೈಬರ್ ಕ್ರೈಂ ವಿಭಾಗ ನೇಮಕ ಮಾಡಲಾಗಿದೆ. ಪ್ರತಿ ಠಾಣೆಯಲ್ಲಿ ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ ಸ್ಥಾಪನೆ ಮಾಡಿದ್ದೇವೆ. 247 ಪೊಲೀಸರು ಮಾನಿಟರ್ ಮಾಡುತ್ತಿದ್ದಾರೆ. ಸುಳ್ಳು ಸುದ್ದಿ ಹಬ್ಬಿಸೋದು ಕಂಡು ಬಂದರೇ ಕೂಡಲೇ ಸುಮೋಟೋ ಕೇಸ್ ಹಾಕಲಾಗುತ್ತದೆ ಎಂದರು.
ನಾವು ಫ್ಯಾಕ್ಟ್ ಚೆಕ್ ಮಾಡುವಂತ ಆಪ್ ಮಾಡಿದ್ದೇವೆ. ನಿತ್ಯ ಪೊಲೀಸರು ಮಾನಿಟರಿಂಗ್ ಮಾಡುವ ಕೆಲಸ ಮಾಡುತ್ತಿದ್ದಾರೆ. ಸುಳ್ಳು ಸುದ್ದಿ ಬಂದರೇ ಕ್ರಮ ಕೈಗೊಳ್ಳುತ್ತೇವೆ. ಪೊಲೀಸ್ ಠಾಣೆಯಲ್ಲಿ ಇದಕ್ಕಾಗಿ ಡೆಸ್ಕ್ ಕೂಡ ಮಾಡಲಾಗಿದೆ. ರಾಜ್ಯದ ಪ್ರತಿ ಠಾಣೆಯಲ್ಲಿ ಮೀಡಿಯಾಗಾಗಿ ಒಂದು ಡೆಸ್ಕ್, ಲಾ ಆ್ಯಂಡ್ ಆರ್ಡರ್‌ಗೆ ಒಂದು ಡೆಸ್ಕ್, ವೈಯಕ್ತಿಕ ಡೆಸ್ಕ್, ಸಂಘಟನೆ ಡೆಸ್ಕ್ ಮಾಡಿದ್ದೇವೆ ಎಂದರು.
GOOD NEWS: ರಾಜ್ಯ ಸರ್ಕಾರದಿಂದ ‘ಅನುದಾನಿತ ಶಾಲೆ’ಗಳ ‘ನಿವೃತ್ತ ಶಿಕ್ಷಕರು, ಸಿಬ್ಬಂದಿ’ಗಳಿಗೆ ಸಿಹಿಸುದ್ದಿ
ISRO ಸ್ಪೇಸ್ ಡಾಕಿಂಗ್ ಯಶಸ್ವಿ: ಅಭಿನಂದನೆ ಸಲ್ಲಿಸಿದ ಕೇಂದ್ರ ಸಚಿವ ಜಿತೇಂದ್ರ ಸಿಂಗ್ | Isro