ಚಿತ್ರದುರ್ಗ: ರಾಜ್ಯದಲ್ಲಿ ಕ್ರೈಂ ತಡೆಗೆ ಪೊಲೀಸರು ಎಷ್ಟೇ ಕ್ರಮವಹಿಸಿದ್ರೂ, ಮರುಕಳಿಸುತ್ತಲೇ ಇದ್ದಾವೆ. ಹೀಗಿರುವಾಗ, ಸಾರ್ವಜನಿಕರನ್ನು ಜಾಗೃತಿಗೊಳಿಸುವಂತ ಕೆಲಸವನ್ನು ಹಿರಿಯೂರು ತಾಲ್ಲೂಕಿನ ಅಬ್ಬಿನಹೊಳೆ ಠಾಣೆಯ ಪೊಲೀಸರು ಕೈಗೊಂಡಿದ್ದಾರೆ. ಆ ಬಗ್ಗೆ ಮುಂದೆ ಓದಿ.
ಈ ಕುರಿತಂತೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಧರ್ಮಪುರ ಹೋಬಳಿಯ ಅಬ್ಬಿನಹೊಳೆ ಠಾಣೆಯ ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅದರಲ್ಲಿ ಅಬ್ಬಿನಹೊಳೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಗ್ರಾಮಗಳಲ್ಲಿ ಮನೆ ಕಳ್ಳತನ, ದೇವಸ್ಥಾನ ಕಳ್ಳತನ ಹಾಗೂ ಸರ ಕಳ್ಳತನ ಮತ್ತು ಕುರಿ-ದನಕರುಗಳ ಕಳ್ಳಕಾಕರ ಬಗ್ಗೆ, ಕಡ್ಡಾಯವಾಗಿ ಈ ಕೆಳಕಂಡ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವಂತೆ ಮನವಿ ಮಾಡಿದ್ದಾರೆ.
ಅಬ್ಬಿನಹೊಳೆ ಪೊಲೀಸ್ ಠಾಣಾ ಭಾಗಗಳಲ್ಲಿ ಬೀಗ ಹಾಕಿರುವ ಮನೆಗಳು, ದೇವಸ್ಥಾನಗಳ ಕಳ್ಳತನ ಹೆಚ್ಚಾಗಿದ್ದು ನೀವು ಬೇರೆ ಊರಿಗೆ ಹೋಗುವ ಸಂದರ್ಭದಲ್ಲಿ ಅಕ್ಕ-ಪಕ್ಕದ ಮನೆಯವರಿಗೆ ತಿಳಿಸಿ, ರಾತ್ರಿ ವೇಳೆಯಲ್ಲಿ ಹೊರಗಡೆ ಲೈಟ್ ಗಳನ್ನು ಹಾಕಬೇಕು ಮತ್ತು ಇಂಟರ್ ಲಾಕ್ ಹಾಗೂ ಬಗರ್ ಅಲರಾಂ ಮತ್ತು ಸಿ.ಸಿ ಕ್ಯಾಮರ ಅಳವಡಿಸಿಕೊಳ್ಳಿ. ದೇವಸ್ಥಾನಗಳಲ್ಲಿ ದೇವಸ್ಥಾನದ ಕಮಿಟಿಯವರು ಹಾಗೂ ಪೂಜಾರಿಗಳು ಸರದಿಯಂತೆ ಪ್ರತಿ ದಿನ 4 ಜನರು ಕಾವಲು ಇರತಕ್ಕದ್ದು ಅಂತ ತಿಳಿಸಿದ್ದಾರೆ.
ಹಳ್ಳಿಗಳಲ್ಲಿ ಧನಕರು-ಕುರಿಗಳ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದು ಧನಕರುಗಳು-ಕುರಿಗಳು ಕಳ್ಳತನವಾಗದಂತೆ ನೋಡಿಕೊಳ್ಳುವುದು. ನಿಮ್ಮ ವಾಹನಗಳು ಬೈಕ್ ಗಳ ಬಗ್ಗೆ ಎಚ್ಚರಿಕೆ ವಹಿಸಿ, ಬೈಕ್ ನ ಯಾಂಡ್ ಕೀ ಹಾಕುವಂತೆ ಸೂಚಿಸಿದ್ದಾರೆ.
ಅಬ್ಬಿನಹೊಳೆ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮೀಣ ಭಾಗದ ದೂರದ ಹೊರಗಡೆ ಇರುವ ಮನೆಗಳ ಕಡೆ ಹೆಚ್ಚು ನಿಗಾವಹಿಸತಕ್ಕದ್ದು, ವಯಸ್ಸಾದ ವೃದ್ಧರನ್ನು ಮನೆಯಲ್ಲಿ ಬಿಟ್ಟು 2-3 ದಿನಗಳ ವರೆಗೆ ದೂರದ ಊರುಗಳಿಗೆ ಹೋಗಬೇಕಾದರೆ ಅಕ್ಕ-ಪಕ್ಕದ ಮನೆಗಳಿಗೆ ತಿಳಿಸಿ ಹೋಗಬೇಕು ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ನಿಮ್ಮ ಗ್ರಾಮಗಳಲ್ಲಿ ರಾತ್ರಿ ವೇಳೆಯಲ್ಲಿ ಅನುಮಾನಾಸ್ಪದವಾಗಿ ಓಡಾಡುವ ವ್ಯಕ್ತಿಗಳ ಕಡೆ ವಾಹನಗಳ ಕಡೆ ಗಮನಹರಿಸಿ ಕೂಡಲೇ ತುರ್ತು ಕರೆ-112 ಗೆ ಕರೆಮಾಡಿ ಅಥವಾ ನಿಮ್ಮ ಬೀಟ್ ಪೊಲೀಸರಿಗೆ ಕೂಡಲೇ ಕರೆಮಾಡಿ ಎಂಬುದಾಗಿ ಮನವಿ ಮಾಡಿದ್ದಾರೆ.
ಈ ಮೇಲ್ಕಂಡ ಮಾಹಿತಿ ಕೇವಲ ಅಬ್ಬಿನಹೊಳೆ ಪೊಲೀಸ್ ಠಾಣೆಯ ವ್ಯಾಪ್ತಿಗಷ್ಟೇ ಮುನ್ನೆಚ್ಚರಿಕೆ ಕ್ರಮಗಳಲ್ಲ. ರಾಜ್ಯಾಧ್ಯಂತ ಎಲ್ಲಾ ಜನರು ಈ ಮುಂಜಾಗ್ರತಾ ಕ್ರಮಗಳನ್ನು ನಿರ್ಲಕ್ಷಿಸದೇ ಅಳವಡಿಸಿಕೊಂಡ್ರೆ ಮುಂದಾಗಲಿರುವಂತ ಕ್ರೈಂ ತಡೆಯಬಹುದಾಗಿದೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು, ಕನ್ನಡ ನ್ಯೂಸ್ ನೌ
BIG NEWS: ಚನ್ನಪಟ್ಟಣಕ್ಕೆ ನಾನೇ ಅಭ್ಯರ್ಥಿ: ಡಿಸಿಎಂ ಡಿ.ಕೆ ಶಿವಕುಮಾರ್ | DCM DK Shivakumar
ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ; ED ದಾಳಿ ಮಾಡುವ ಅವಶ್ಯಕತೆ ಇರಲಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್