ಚಿತ್ರದುರ್ಗ: ಆನ್ ಲೈನ್ ವಂಚನೆಯನ್ನು ತಡೆಯುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಹಗಲಿರುಳು ಶ್ರಮಿಸುತ್ತಿದೆ. ಹೀಗಿದ್ದರೂ ವಂಚಕರು ಮಾತ್ರ ದಿನಕ್ಕೊಂದು ದಾರಿ ಹಿಡಿದು, ಸೈಬರ್ ವಂಚನೆ ಎಸಗುತ್ತಿದ್ದಾರೆ. ಇದನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯಿಂದ ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಎಚ್ಚರಿಕೆ ನೀಡಿದೆ. ಒಂದು ವೇಳೆ ಆ ನಿಯಮವನ್ನು ಮೀರಿದ್ರೆ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.
ಈ ಕುರಿತು ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಅವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಸೈಬರ್ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ ಬ್ಯಾಂಕ್ ಖಾತೆಗಳನ್ನು “ಡ್ಯೂಲ್” ಅಕೌಂಟ್‌ಗಳೆಂದು ಪರಿಗಣಿಸಿ ಖಾತೆದಾರರು ನೇರವಾಗಿ ಕೃತ್ಯದಲ್ಲಿ ಭಾಗಿಯಾಗಿರುವುದಾಗಿ ಭಾವಿಸಿ ಕಠಿಣ ಕ್ರಮ ಜರುಗಿಸಲು ಕೇಂದ್ರ ಸರ್ಕಾರದ “ಪೈನಾನ್ಸಿಯಲ್ ಇಂಟೆಲಿಜೆನ್ಸ್ ಯುನಿಟ್” ರವರು ಆದೇಶಿಸಿರುತ್ತಾರೆ ಎಂದಿದ್ದಾರೆ.
ಕೆಲವರು ಅಲ್ಪ ಹಣದ ಆಸೆಯಿಂದ ಅಥವಾ ಅತಿಯಾದ ನಂಬಿಕೆಯಿಂದ ಅಥವಾ ತಿಳುವಳಿಕೆ ಕೊರತೆಯಿಂದ ತಮ್ಮ ಹೆಸರಿನಲ್ಲಿ ಬ್ಯಾಂಕ್ ಖಾತೆಯನ್ನು ತೆರೆದು ತಮ್ಮದಲ್ಲದ ಮೊಬೈಲ್ ನಂಬರ್‌ಗಳನ್ನು ಲಿಂಕ್ ಮಾಡಿಸಿ, ಅಪರಿಚಿತ ವ್ಯಕ್ತಿಗಳಿಗೆ ಬಳಸಿಕೊಳ್ಳಲು ಅನುಮತಿ ನೀಡುತ್ತಿದ್ದಾರೆ. ಇಂತಹ ಖಾತೆಗಳನ್ನು ವಂಚಕರು ಸೈಬರ್ ಅಪರಾಧಗಳನ್ನು ಎಸಗಲು ಬಳಸಿಕೊಳ್ಳುತ್ತಿದ್ದು, ಇದರಿಂದ ಯಾರ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆಯಲಾಗಿದೆಯೋ ಅಂತಹ ವ್ಯಕ್ತಿಗಳು ಸಹ ಸಮಸ್ಯೆಗೆ ಸಿಲುಕಿ ಕಠಿಣ ಕಾನೂನು ಕ್ರಮ ಎದುರಿಸಬೇಕಾದ ಸಾಧ್ಯತೆ ಇರುತ್ತದೆ ಎಂದು ಎಚ್ಚರಿಸಿದ್ದಾರೆ.
ಆದ್ದರಿಂದ ಸಾರ್ವಜನಿಕರು ತಮ್ಮ ಬ್ಯಾಂಕ್ ಖಾತೆಗಳನ್ನು ಅಪರಿಚಿತ ವ್ಯಕ್ತಿಗಳಿಗೆ ಬಳಸಿಕೊಳ್ಳಲು ನೀಡುವುದಾಗಲಿ, ಅನ್ಯ ವ್ಯಕ್ತಿಗಳ ಮೊಬೈಲ್ ನಂಬರ್‌ಗಳನ್ನು ಲಿಂಕ್ ಮಾಡಿಸುವುದಾಗಲೀ, ಬ್ಯಾಂಕ್ ವಿವರಗಳನ್ನು ನೀಡಿ ಅಪರಿಚಿತರಿಂದ ಹಣವನ್ನು ಹಾಕಿಸಿಕೊಂಡು ನಗದಾಗಿ ಪರಿವರ್ತಿಸಿ ನೀಡುವುದಾಗಲೀ, ಓ.ಟಿ.ಪಿ ಹಾಗೂ ಇನ್ನಿತರೆ ಬ್ಯಾಂಕ್ ಮಾಹಿತಿಯನ್ನು ನೀಡಿ ಖಾತೆ ಬಳಕೆಗೆ ಅನುಮತಿ ನೀಡುವುದಾಗಲೀ ಮಾಡದೇ ಜಾಗೃತಿ ವಹಿಸಿ ಎಂದು ಹೇಳಿದ್ದಾರೆ.
ಈ ರೀತಿಯ ಖಾತೆ ಮಾಡಿಸುವ ಏಜೆಂಟ್‌ರು ಕಂಡುಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡಿ, ಸೈಬರ್ ಅಪರಾಧಗಳನ್ನು ತಡೆಗಟ್ಟಲು ಪೊಲೀಸರೊಂದಿಗೆ ಸಹಕರಿಸಲು ಸಾರ್ವಜನಿಕರಲ್ಲಿ ಕೋರಿದ್ದಾರೆ.
Shocking News: ‘ಜಾರ್ಖಂಡ್’ನಲ್ಲಿ ಸರ್ಕಾರಿ ನೇಮಕಾತಿಯ ‘ದೈಹಿಕ ಪರೀಕ್ಷೆ’ ವೇಳೆ ಹಲವು ಅಭ್ಯರ್ಥಿಗಳು ಸಾವು
ಮಹಿಳೆಯರಿಗೆ ‘ಉಚಿತ LPG ಸಿಲಿಂಡರ್’: ಅರ್ಜಿ ಸಲ್ಲಿಕೆ, ಅರ್ಹತಾ ಮಾನದಂಡ, ದಾಖಲೆಗಳೇನು? ಇಲ್ಲಿದೆ ಮಾಹಿತಿ