ಮೈಸೂರು: ನಾಳೆ ಅಯೋಧ್ಯೆಯ ರಾಮಮಂದಿರಲ್ಲಿ ರಾಮನ ಮೂರ್ತಿಯನ್ನು ಪ್ರತಿಷ್ಠಾಪನೆ, ಅದಕ್ಕೆ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ. ಈ ವೇಳೆಯಲ್ಲೇ ಮೈಸೂರಿನಲ್ಲಿ ಲಕ್ಷ ದೀಪೋತ್ಸವ, ಶೋಭಾಯಾತ್ರೆ ನಡೆಸೋದಕ್ಕೆ ಸಿದ್ಧತೆ ನಡೆಯಲಾಗುತ್ತಿತ್ತು. ಆದ್ರೇ ಇದಕ್ಕೆ ಅನುಮತಿ ನೀಡೋದಕ್ಕೆ ಪೊಲೀಸರು ನಿರಾಕರಿಸಿದ್ದಾರೆ.
ಮೈಸೂರಿನ ಅಶೋಕ ರಸ್ತೆಯಲ್ಲಿ ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಸಂದರ್ಭದಲ್ಲೇ ಶೋಭಾಯಾತ್ರೆ, ಲಕ್ಷ ದೀಪೋತ್ಸವ ಕಾರ್ಯಕ್ರಮ ನಡೆಸೋದಕ್ಕೆ ನಿರ್ಧರಿಸಲಾಗಿತ್ತು. ಇದಕ್ಕಾಗಿ ಅಂತಿಮ ಹಂತದ ಸಿದ್ಧತೆ ಕೂಡ ಮಾಡಿಕೊಳ್ಳಲಾಗಿತ್ತು. ಆದ್ರೇ ಪೊಲೀಸರು ಈ ಕಾರ್ಯಕ್ರಮಕ್ಕೆ ಕೊನೆಯ ಕ್ಷಣದಲ್ಲಿ ಅನುಮತಿ ನಿರಾಕರಿಸಿದ್ದಾರೆ.
ಕೊನೇಯ ಕ್ಷಣದಲ್ಲಿ ಪೊಲೀಸರು ಲಕ್ಷ ದೀಪೋತ್ಸವಕ್ಕೆ ಅನುಮತಿ ನಿರಾಕರಿಸಿರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಆದ್ರೇ ಪೊಲೀಸರು ಮಾತ್ರ ಸಂಚಾರ ದಟ್ಟಣೆ ಸೇರಿದಂತೆ ವಿವಿಧ ಸಮಸ್ಯೆ ಕಾರ್ಯಕ್ರಮಕ್ಕೆ ಅನುಮತಿ ನೋಡದರಿಂದ ಆಗಲಿದೆ ಎಂಬ ಕಾರಣಕ್ಕೆ ನಿರಾಕರಿಸಿದ್ದಾರೆ ಎನ್ನಲಾಗುತ್ತಿದೆ.
ರಾಮಮಂದಿರದ ಜಾಗದಲ್ಲಿ ಮುಸ್ಲಿಮರು 500 ವರ್ಷ ನಮಾಜ್ ಮಾಡಿದ್ರು: ವಿವಾದದ ಕಿಡಿ ಹೊತ್ತಿಸಿದ ಓವೈಸಿ ಹೇಳಿಕೆ