ಬೆಂಗಳೂರು: ರಾಜ್ಯದ ಸರ್ಕಾರಿ ನೌಕರರು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಪಾಸ್ ಆದ್ರೇ ಮಾತ್ರ ಬಡ್ತಿಗೆ ಅವಕಾಶ. ಅಲ್ಲದೇ ಪರೀಕ್ಷೆ ಪಾಸ್ ಆದವರಿಗೆ ಪ್ರೋತ್ಸಾಹ ಧನ ನೀಡೋದಾಗಿ ತಿಳಿಸಿತ್ತು. ಆದ್ರೇ ಈ ನಿಯಮ ಕರ್ನಾಟಕ ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ ಅನ್ವಯಿಸೋದಿಲ್ಲ. ಹೀಗಾಗಿ ಪ್ರೋತ್ಸಾಹಧನವೂ ಇಲ್ಲ, ಮುಂಬಡ್ತಿಗೂ ಅದು ಅನ್ವಯಿಸಲ್ಲ ಅಂತ ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ.
ಈ ಕುರಿತಂತೆ ಎಐಜಿಪಿ ಆಡಳಿತ ವಿಭಾಗದ ಡಾ.ಸುಮನ್ ಡಿ ಪೆನ್ನೇಕರ್ ಅವರು ಹಿಂಬರದಲ್ಲಿ ಸ್ಪಷ್ಟೀಕರಣ ನೀಡಿದ್ದು, ಪೊಲೀಸ್ ಕಾನ್ಸ್ಟೇಬಲ್ ರವರುಗಳು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಪಾಸು ಮಾಡುವ, ಪ್ರೋತ್ಸಾಹ ಧನ ಮಂಜೂರು ಮಾಡುವ ಹಾಗೂ ಮುಂಬಡ್ತಿ ನೀಡುವ ಕುರಿತು ಹಲವು ಘಟಕಾಧಿಕಾರಿಗಳು ಸ್ಪಷ್ಟಿಕರಣ ಕೋರುತ್ತಿರುವ ಬಗ್ಗೆ ಪರಿಶೀಲಿಸಿ ಈ ಕೆಳಕಂಡಂತೆ ಸ್ಪಷ್ಟಿಕರಣ ನೀಡಲಾಗಿದೆ ಎಂದಿದ್ದಾರೆ.
ಸರ್ಕಾರದ ಅಧಿಸೂಚನೆ ಸಂಖ್ಯೆ: ಸಿಆಸುಇ 43 ಸೇವನೆ 2008, ದಿನಾಂಕ: 07.03.2012 ರಲ್ಲಿನ ನಿಯಮ 1 (3) ರಲ್ಲಿ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗೆ ಕಂಪ್ಯೂಟರ್ ಸಾಕ್ಷರತಾ ನಿಯಮವು ಅನ್ವಯವಾಗತಕ್ಕದ್ದಲ್ಲ ಎಂದು ತಿಳಿಸಿರುವುದರಿಂದ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯು ಸಿಪಿಸಿ) ಎಪಿಸಿ ರವರುಗಳ ಮುಂಬಡ್ತಿಗೆ ಕಡ್ಡಾಯವಾಗಿರುವುದಿಲ್ಲ ಹಾಗೂ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯು ಕಡ್ಡಾಯವಲ್ಲವಾದ್ದರಿಂದ ಸದರಿಯವರು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರೂ ಸಹ ಅವರಿಗೆ ಪ್ರೋತ್ಸಾಹ ಧನ ಮಂಜೂರು ಮಾಡಲು ನಿಯಮಗಳಲ್ಲಿ ಅವಕಾಶವಿರುವುದಿಲ್ಲ ಎಂದು ತಿಳಿಸಿದ್ದಾರೆ.
ಮುಂದುವರಿದಂತೆ, ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಪಾಸು ಮಾಡದೆ ಇರುವ ಸಿಬ್ಬಂದಿಗಳನ್ನು ಮುಂಬಡ್ತಿ ಪರಿಗಣಿಸುವ ಕುರಿತು ಸರ್ಕಾರದಿಂದ ಸ್ಪಷ್ಟಿಕರಣ ಕೋರಲಾಗಿದ್ದು, ಸರ್ಕಾರದ ಪತ್ರ ಸಂಖ್ಯೆ: ಒಇ 79 ಪಿಹೆಚ್‌ಎಸ್ 2023, ದಿನಾಂಕ: 16.12.2023 ರಲ್ಲಿ ಸ್ಪಷ್ಟಿಕರಣ ನೀಡಲಾಗಿದೆ ಅಂತ ಹೇಳಿದ್ದಾರೆ.
‘ಭಾರತ’ ವಿರುದ್ಧದ ಟಿ20 ಸರಣಿಗೆ ‘ಅಫ್ಘಾನಿಸ್ತಾನ ತಂಡ’ ಪ್ರಕಟ: ‘ಇಬ್ರಾಹಿಂ ಝದ್ರನ್’ ನಾಯಕ
BREAKING: ಇಸ್ರೋದ ಮೊದಲ ಸೂರ್ಯ ಮಿಷನ್ ಯಶಸ್ವಿ: ಅಂತಿಮ ಕಕ್ಷೆಗೆ ಆದಿತ್ಯ ಎಲ್1 ಸೇರ್ಪಡೆ | Aditya L-1