ಮಂಡ್ಯ : ಮದ್ದೂರು ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಪೇದೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ.
ರಮೇಶ್ (35) ಎಂಬುವರೇ ಆತ್ಮಹತ್ಯೆ ಮಾಡಿಕೊಂಡಿರುವ ಪೇದೆಯಾಗಿದ್ದು, ನಗರದ ಪೊಲೀಸ್ ಠಾಣೆಯ ಹಿಂದೆ ಇರುವ ವಿಶ್ರಾಂತಿ ಗೃಹದಲ್ಲಿರುವ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಮಂಗಳವಾರ ರಾತ್ರಿ 10 ಘಂಟೆಗೆ ಪೊಲೀಸ್ ಪೇದೆಯೊಬ್ಬರು ವಿಶ್ರಾಂತಿ ಗೃಹಕ್ಕೆ ಹೋದಾಗ ಘಟನೆ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಈ ಬಗ್ಗೆ ಮೃತರ ಪತ್ನಿ ಪುಷ್ಪಲತಾ ಎಂಬುವರು ನಗರದ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪತಿ ರಮೇಶ್ ಅವರಿಗೆ ಪೇದೆಯಾದ ಮಹೇಶ್ ಎಂಬುವರು ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿದ್ದರು ಹಾಗೂ ಎಷ್ಟೋ ಬಾರಿ ಗಲಾಟೆ ಕೂಡಾ ಮಾಡಿದ್ದು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ.
ಮೃತ ಪೇದೆ ರಮೇಶ್ ಹಾಗೂ ದೂರು ದಾಖಲಾಗಿರುವ ಮಹೇಶ್ ಇಬ್ಬರೂ ನಗರದ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ಹಾಗೂ ಇಬ್ಬರೂ ಪೊಲೀಸ್ ಠಾಣೆಯ ಪೊಲೀಸ್ ವಸತಿಗೃಹದ ನಿವಾಸಿಗಳಾಗಿದ್ದರು ಎನ್ನಲಾಗಿದೆ.
ಇನ್ನು ಸುದ್ದಿ ತಿಳಿದು ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭಾರಾಣಿ, ಡಿವೈಎಸ್ಪಿ ಯಶವಂತ್ ಕುಮಾರ್, ಇನ್ಸ್ಪೆಕ್ಟರ್ ನವೀನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲೆ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಶವವನ್ನು ಚಿಕ್ಕಬಳ್ಳಾಪುರಕ್ಕೆ ಕೊಂಡೊಯ್ಯಲಾಯಿತು.
BREAKING: ಏ.1ರಿಂದ ಜನಗಣತಿಯ ಭಾಗವಾಗಿ ‘ಮನೆ ಪಟ್ಟಿ’ ಆರಂಭ: ಕೇಂದ್ರದಿಂದ ಅಧಿಸೂಚನೆ | Census 2027








