ಶಿವಮೊಗ್ಗ: ಬ್ರಾಹ್ಮಣರ ಸಮುದಾಯ ಕುರಿತಂತೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದಂತ ಸಿಗಂದೂರು ಧರ್ಮದರ್ಶಿ ರಾಮಪ್ಪ ಅವರ ವಿರುದ್ಧ ಸಾಗರದ ಸಹಾಯಕ ಉಪ ಪೊಲೀಸ್ ಅಧೀಕ್ಷಕರಿಗೆ ತ್ರಿಮತಸ್ಥ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತ ಪರಿಷತ್ ದೂರು ನೀಡಿದೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಸಹಾಯಕ ಉಪ ಪೊಲೀಸ್ ಅಧೀಕ್ಷಕರ ಕಚೇರಿಗೆ ತೆರಳಿದಂತ ಸಾಗರದ ತ್ರಿಮತಸ್ಥ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತ ಪರಿಷತ್ ನ ಅಧ್ಯಕ್ಷರಾದಂತ ರಾಜೇಂದ್ರ ಪ್ರಸಾದ್ ಹಾಗೂ ಸಮುದಾಯದ ಮುಖಂಡರು ತೆರಳಿ ಸಿಗಂದೂರು ಧರ್ಮದರ್ಶಿ ರಾಮಪ್ಪ ವಿರುದ್ಧ ದೂರು ನೀಡಿದ್ದಾರೆ.
ಸಾಗರದ ತ್ರಿಮತಸ್ಥ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತ ಪರಿಷತ್ ನೀಡಿರುವಂತ ದೂರಿನಲ್ಲಿ, ಹೊನ್ನಾವರ ತಾಲ್ಲೂಕು ಮೋಡದ ಶ್ರೀ ರಾಮ ಮಂದಿರ ಪ್ರತಿಷ್ಠಾಪನಾ ರಜತ ಮಹೋತ್ಸವದ ಕಾರ್ಯಕ್ರಮವನ್ನು ಶ್ರೀ ರಾಮ ಮಂದಿರ ಚಾರಿಟೇಬಲ್ ಟ್ರಸ್ಟ್, ಮೊಳ್ಕೊಡ ಇವರು ದಿನಾಂಕ 29-01-2026 ರಿಂದ 31-01-2026 ರವರೆಗೆ ಆಯೋಜಿಸಿದ್ದು, ಸದರಿ ಕಾರ್ಯಕ್ರಮದ ಭಾಗವಾದ ದಿನಾಂಕ 31-01-2026ರ ಶ್ರೀ ಸೀತಾರಾಮ ಕಲ್ಯಾಣೋತ್ಸವದ ಸಭಾ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆರೋಪಿಯು ಪಾಲ್ಗೊಂಡು, ಸಾವಿರಕ್ಕೂ ಹೆಚ್ಚು ಜನರು ಸೇರಿರುವ ಸಭೆಯಲ್ಲಿ ವಿವೇಚನಾ ಪೂರ್ವಕವಾಗಿ ನಾಡಿನ ಸಮಸ್ತ ಬ್ರಾಹ್ಮಣ ಸಮುದಾಯವನ್ನು ಅವಹೇಳನ ಮಾಡುವ ಕೆಟ್ಟ ಉದ್ದೇಶದಿಂದ ಹಲವು ಬಾರಿ “ಭಟ್ಟಾ” “ಮುಂಡೆ ಮಕ್ಕಳು” “ಬ್ರಾಹ್ಮಣ ಚಂಡೆ ಮಕ್ಕಳು ಎಲ್ಲವನ್ನು ಮಾಡ್ತವೆ”, “ಬ್ರಾಹ್ಮಣರು ಸಗಣಿ ಹುಳವಾಗಿ ಸಾಯ್ತಾರೆ” ಎಂಬಿತ್ಯಾದಿ ಅವಾಚ್ಯ ಶಬ್ದಗಳಿಂದ ಅವಹೇಳನವನ್ನು ಮಾಡಿದ್ದಾರೆ ಎಂಬುದಾಗಿ ಉಲ್ಲೇಖಿಸಿದ್ದಾರೆ.
ಸದರಿ ಶಬ್ದವನ್ನು ಹೇಳುವಾಗ ಆರೋಪಿ ಅವಡುಗಚ್ಚಿ ಕೋಪ ಹೊರಹಾಕಿರುತ್ತಾರೆ. ಅಲ್ಲದೇ ಸದರಿ ಸಭೆಯಲ್ಲಿ ಶೂದ್ರ-ಬ್ರಾಹ್ಮಣ ಎನ್ನುವ ಮಾತನ್ನು ಆಡಿ ಸಮಾಜವನ್ನು ಜಾತಿ ಹೆಸರಿನಲ್ಲಿ ತಾರತಮ್ಯದ ವಿಷ ಬೀಜ ಬಿತ್ತುವ ಪ್ರಚೋದನೆಯನ್ನು ಜನರಿಗೆ ನೀಡಿದ್ದು, ಆರೋಪಿಯ ಈ ಕೃತ್ಯ ಭಾರತೀಯ ನ್ಯಾಯ ಸಂಹಿತೆ(ಬಿ.ಎನ್.ಎಸ್.) ಕಲಂ. 356 ಮತ್ತು 196 ರ ಅಡಿಯಲ್ಲಿ ಅಪರಾದ ವಾಗಿರುತ್ತದೆ. ಆರೋಪಿಯ ಸಭೆಯಲ್ಲಿ ಹೇಳಿದ ಮಾತುಗಳ ತುಣುಕುಗಳು ರಾಜ್ಯಾದ್ಯಂತ ವಾಟ್ಸಾಪ್, ಫೇಸ್ ಬುಕ್ ಮುಂತಾದ ಪ್ರಚಾರ ಮಾಧ್ಯಮಗಳಲ್ಲಿ ಪ್ರಸರಣವಾಗಿ ಸಮಸ್ತ ಬ್ರಾಹ್ಮಣ ಸಮುದಾಯಕ್ಕೆ ಅವಮಾನವಾಗಿರುತ್ತದೆ. ಆದ್ದರಿಂದ ಅರೋಪಿತನ ವಿರುದ್ಧ ಬಿ.ಎನ್.ಎಸ್. ಕಲಂ 356 ಮತ್ತು 196 ರ ಅಡಿಯಲ್ಲಿ ಪ್ರಥಮ ವರ್ತಮಾನ ದಾಖಲಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಲಾಗಿದೆ.

ಬ್ರಾಹ್ಮಣ ಸಮುದಾಯದ ಬಗ್ಗೆ ಆಡಿದ ಮಾತಿನ ಬಗ್ಗೆ ವಿಷಾದ ವ್ಯಕ್ತ ಪಡಿಸಿದ ಸಿಗಂದೂರು ಧರ್ಮದರ್ಶಿ ರಾಮಪ್ಪ
ಇನ್ನೂ ಬ್ರಾಹ್ಮಣ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದಂತ ಮಾತುಗಳು ವೈರಲ್ ಆದ ಬೆನ್ನಲ್ಲೇ, ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಧರ್ಮದರ್ಶಿ ರಾಮಪ್ಪ ಅವರು ವಿಷಾದ ವ್ಯಕ್ತ ಪಡಿಸಿದ್ದಾರೆ.
ಇಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ದಿನಾಂಕ 31/1/26 ರಂದು ಹೊನ್ನಾವರ ತಾಲೂಕಿನಲ್ಲಿ ಸೀತಾರಾಮ ಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ನೆಡದ ನನ್ನ ಮಾತು ಯಾವುದೇ ಸಮುದಾಯವನ್ನು ಅವಹೇಳನ ಮಾಡಲು ಆಡಿದ ಮಾತು ಆಗಿರುವುದಿಲ್ಲ. ಒಂದು ದೇವಸ್ಥಾನದ ಸಭಾ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿದ ಸಂದರ್ಭದಲ್ಲಿ ನಾನು ಕಟ್ಟಿದ ದೇವಸ್ಥಾನದಲ್ಲಿ ಕೆಲವು ವ್ಯಕ್ತಿಗಳಿಂದ ಆದ ನೋವನ್ನು ನಮ್ಮ ಅಡು ಭಾಷೆಯಲ್ಲಿ ವ್ಯಕ್ತಪಡಿಸಿದೆ ಎಂಬುದಾಗಿ ಹೇಳಿದ್ದಾರೆ.
ನಾನು ಆಡಿದಂತ ಮಾತಿನಿಂದ ಯಾವುದೇ ಸಮುದಾಯಕ್ಕೆ ನೋವು ಆಗಿದ್ದರೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ. ವಿಶೇಷವಾಗಿ ಬ್ರಾಹ್ಮಣ ಸಮುದಾಯದ ಮೇಲೆ ನನಗೆ ಮೊದಲಿನಿಂದಲೂ ಅಪಾರವಾದ ಗೌರವ ಇದೆ. ಯಾರು ಸಹ ಅನ್ಯತಾ ಭಾವಿಸಬಾರದು ಎಂಬುದಾಗಿ ವಿನಂತಿಸಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
ಮಂಡ್ಯ ಒಮ್ಮತಕ್ಕೆ ಬಾರದ ಸಂಧಾನ ಸಭೆ: ಸಚಿವರು- ಪ್ರತಿಭಟನಾಕಾರರ ಸಭೆ ವಿಫಲ
ಇ-ಸ್ವತ್ತು ತಂತ್ರಾಂಶದ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಬಿಗ್ ಅಪ್ ಡೇಟ್








