ಬೆಂಗಳೂರು: ನಾಗಮಂಗಲ ಗಲಭೆ ಪೂರ್ವ ನಿಯೋಜಿತ ಕೃತ್ಯ ಎನ್ನುವುದಕ್ಕೆ ಪೊಲೀಸರು ವರ್ತನೆಯೇ ಸಾಕ್ಷಿ ಎಂಬುದಾಗಿ ಜೆಡಿಎಸ್ ಎಕ್ಸ್ ನಲ್ಲಿ ವೀಡಿಯೋ ಸಹಿತ ಖಾಸದಿ ಸುದ್ದಿವಾಹಿನಿಯ ಸುದ್ದಿಯನ್ನು ಶೇರ್ ಮಾಡಿ ಹೇಳಿದೆ.
ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಜಾತ್ಯಾತೀತ ಜನತಾ ದಳವು, ಪೊಲೀಸರ ಮುಂದೆಯೇ ಗಲಭೆಕೋರರು ಟೆಕ್ಸ್ ಟೈಲ್ ಮಳಿಗೆ, ಅಂಗಡಿಗಳಿಗೆ ರಾಜಾರೋಷವಾಗಿ ಬೆಂಕಿ ಹಚ್ಚುತ್ತಿದ್ದರೂ ಅಸಹಾಯಕರಾಗಿ ಖಾಕಿ ಪಡೆ ಕೈಕಟ್ಟಿ ನಿಂತಿದ್ಯಾಕೆ ..? ಬೆಂಕಿ ಹಚ್ಚುತ್ತಿದ್ದಾರೆ ರಕ್ಷಣೆ ಕೊಡಿ ಬನ್ನಿ ಸಾರ್ ಎಂದು ಮಾಲೀಕರು ಸಾರ್ವಜನಿಕರು ಅಂಗಲಾಚಿದರೂ, ನಮಗೆ ಆರ್ಡರ್ ಬಂದಿಲ್ಲ ಎಂದು ಕೈಲಾಗದವರಂತೆ ಸುಮ್ಮನಿದ್ದದ್ದು ಯಾಕೆ..? ಎಂದು ಪ್ರಶ್ನಿಸಿದೆ.
ಚಲುವರಾಯಸ್ವಾಮಿ ಅವರೇ ರಕ್ಷಣೆ ನೀಡಬೇಕಾದ ಪೊಲೀಸರಿಗೆ ಆರ್ಡರ್ ನೀಡದೆ ತಡೆದ ಕೈ ಯಾವುದು..? ಸ್ಥಳದಲ್ಲಿದ್ದ ಆರಕ್ಷಕರಿಗೆ ಆದೇಶ ನೀಡಲು ನಿಮಗೆ ತಡೆದವರು ಯಾರು..? ಗಲಭೆ ವೇಳೆ ಯಾರ ಒತ್ತಡ ಪೊಲೀಸರ ಕೈ ಕಟ್ಟಿ ಹಾಕಿದ್ದು..? ಇದಕ್ಕೆ ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ಹೊಣೆ ಎಂದಿದೆ.
ಸಿಎಂ ಸಿದ್ಧರಾಮಯ್ಯ, ಗೃಹ ಸಚಿವ ಡಾ.ಜಿ ಪರಮೇಶ್ವರ್ ಹಾಗೂ ಚಲುವರಾಯಸ್ವಾಮಿ ಅವರೇ ನಾಡಿನ ಜನತೆಗೆ ಉತ್ತರಿಸಿ ಎಂದು ಆಗ್ರಹಿಸಿದೆ.
ನಾಗಮಂಗಲ ಗಲಭೆ ಪೂರ್ವ ನಿಯೋಜಿತ ಕೃತ್ಯ ಎನ್ನುವುದಕ್ಕೆ ಪೊಲೀಸರು ವರ್ತನೆಯೇ ಸಾಕ್ಷಿ.
ಪೊಲೀಸರ ಮುಂದೆಯೇ ಗಲಭೆಕೋರರು ಟೆಕ್ಸ್ ಟೈಲ್ ಮಳಿಗೆ, ಅಂಗಡಿಗಳಿಗೆ ರಾಜಾರೋಷವಾಗಿ ಬೆಂಕಿ ಹಚ್ಚುತ್ತಿದ್ದರೂ ಅಸಹಾಯಕರಾಗಿ ಖಾಕಿ ಪಡೆ ಕೈಕಟ್ಟಿ ನಿಂತಿದ್ಯಾಕೆ ..? ಬೆಂಕಿ ಹಚ್ಚುತ್ತಿದ್ದಾರೆ ರಕ್ಷಣೆ ಕೊಡಿ ಬನ್ನಿ ಸಾರ್ ಎಂದು ಮಾಲೀಕರು ಸಾರ್ವಜನಿಕರು… pic.twitter.com/kF0hbdfUkJ
— Janata Dal Secular (@JanataDal_S) September 16, 2024
ಮಹಿಳೆಯರು ಪುರುಷರಿಗಿಂತ ಹೆಚ್ಚು ಕಾಲ ಏಕೆ ಬದುಕುತ್ತಾರೆ ಗೊತ್ತೇ.? ಇಲ್ಲಿದೆ ಮಾಹಿತಿ
‘SSLC’ ಪಾಸಾದವರಿಗೆ ಗುಡ್ ನ್ಯೂಸ್: ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ