Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಕಾಲಿವುಡ್ ಖ್ಯಾತ ನಟ `ವಿಶಾಲ್’ ಆರೋಗ್ಯದಲ್ಲಿ ಏರುಪೇರು : ಆಸ್ಪತ್ರೆಗೆ ದಾಖಲು | Actor Vishal Hospitalized

12/05/2025 9:07 AM

BIG NEWS : `RCB’ ಗೆ ಬಿಗ್ ಶಾಕ್ : ಸ್ಟಾರ್ ಆಟಗಾರ ಟೂರ್ನಿಯಿಂದ ಔಟ್ | IPL 2025

12/05/2025 9:02 AM

ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿಗೆ ಸಾಮಾಜಿಕ ಜಾಲತಾಣದಲ್ಲಿ ನಿಂದನೆ. ಬೆಂಬಲಕ್ಕೆ ನಿಂತ IAS, IPS ಸಂಘಟನೆಗಳು

12/05/2025 9:00 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಾಗರ ತಾಲ್ಲೂಕಲ್ಲಿ ‘ಗಣೇಶ, ಈದ್ ಮಿಲಾದ್’ಗೆ ಪೊಲೀಸರ ಹದ್ದಿನ ಕಣ್ಣು: ಡಿವೈಎಸ್ಪಿ ಗೋಪಾಲಕೃಷ್ಣ ನಾಯಕ್
KARNATAKA

ಸಾಗರ ತಾಲ್ಲೂಕಲ್ಲಿ ‘ಗಣೇಶ, ಈದ್ ಮಿಲಾದ್’ಗೆ ಪೊಲೀಸರ ಹದ್ದಿನ ಕಣ್ಣು: ಡಿವೈಎಸ್ಪಿ ಗೋಪಾಲಕೃಷ್ಣ ನಾಯಕ್

By kannadanewsnow0930/08/2024 4:39 PM

ಶಿವಮೊಗ್ಗ: ಸಾಗರ ತಾಲ್ಲೂಕಿನಲ್ಲಿ ಗಣೇಶೋತ್ಸವ ಹಾಗೂ ಈದ್ ಮಿಲಾದ್ ಆಚರಣೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಪುಲ್ ಅಲರ್ಟ್ ಆಗಿದೆ. ಶಾಂತಿಯುತವಾಗಿ ಹಬ್ಬಗಳನ್ನು ಆಚರಿಸುವುದಕ್ಕೆ ಅವಕಾಶವಿದೆ. ಏನಾದರೂ ಬಾಲ ಬಿಟ್ಟಿದ್ರೆ ಅಂತವರ ವಿರುದ್ಧ ಕಾನೂನು ಕ್ರಮ, ಎಫ್ಐಆರ್ ಹಾಕುವುದಾಗಿ ಡಿವೈಎಸ್ಪಿ ಗೋಪಾಲಕೃಷ್ಣ ಟಿ ನಾಯಕ್ ಖಡಕ್ ವಾರ್ನಿಂಗ್ ನೀಡಿದ್ದಾರೆ.

ಇಂದು ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಕಳೆದ ಬಾರಿ ಸಣ್ಣ-ಪುಟ್ಟ ಅಹಿತಕರ ಘಟನೆಗಳ ಹೊರತಾಗಿ ಶಾಂತಿಯುತವಾಗೇ ತಾಲ್ಲೂಕಿನಾಧ್ಯಂತ ಗಣೇಶ, ಈದ್ ಮಿಲಾದ್ ಹಬ್ಬ ನಡೆದಿದೆ. ಈ ಬಾರಿ ಅದಕ್ಕೂ ಅವಕಾಶ ನೀಡದಂತೆ ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದರು.

10 ಗಂಟೆಗೆ ಧ್ವನಿ ವರ್ಧಕ ಬಂದ್ ಮಾಡಬೇಕು

ಗಣೇಶ ಹಬ್ಬದ ಸಂದರ್ಭದಲ್ಲಿ ಆಯೋಜಕರು 10 ಗಂಟೆಗೆ ಧ್ವನಿ ವರ್ಧಕಗಳನ್ನು ಬಂದ್ ಮಾಡಬೇಕು. ನಂತ್ರ ಬಳಕೆ ಮಾಡುವಂತಿಲ್ಲ. ಮೈಕ್ ಗಳನ್ನು 10 ಗಂಟೆಯ ನಂತ್ರ ಹಾಕಿದ್ರೇ, ಅದರ ಬಗ್ಗೆ ದೂರುಗಳು ಬಂದ್ರೇ ಆಯೋಜಕರ ವಿರುದ್ಧ ಎಫ್ಐಆರ್ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂಬುದಾಗಿ ಎಚ್ಚರಿಕೆ ನೀಡಿದರು.

ಹಸಿರು ಪಟಾಕಿಯನ್ನೇ ಖರೀದಿಸಿ

ಸುಪ್ರೀಂ ಕೋರ್ಟ್ ಮಾಲಿನ್ಯ ಹೆಚ್ಚಿಸುವಂತ ರೆಡ್ ಪಟಾಕಿಗಳನ್ನು ನಿಷೇಧಿಸಿದೆ. ಕೇವಲ ಹಸಿರು ಪಟಾಕಿಯನ್ನು ಗಣೇಶ ಮೂರ್ತಿಯನ್ನು ನೀರಿಗೆ ಬಿಡುವಂತ ಸಂದರ್ಭದ ಮಾತ್ರ ಬಳಕೆ ಮಾಡಬೇಕು. ಹಸಿರು ಪಟಾಕಿಯ ಮೇಲೆ ಕ್ಯೂ ಆರ್ ಕೋಡ್ ಇರುತ್ತದೆ. ಅದನ್ನು ಸ್ಕ್ಯಾನ್ ಮಾಡಿದ್ರೆ ಅದು ಹಸಿರೋ ಅಥವಾ ಗ್ರೀನ್ ಪಟಾಕಿಯೋ ಅಂತ ತಿಳಿಯಲಿದೆ ಎಂದರು.

ಪಟಾಕಿ ಬಳಸಿ ಏನಾದರೂ ಅನಾಹತುವಾದ್ರೇ ಅಂತವರ ವಿರುದ್ಧ ಐಪಿಸಿ ಸೆಕ್ಷನ್ 284 ಅಡಿಯಲ್ಲಿ ದೂರು ದಾಖಲಿಸಲಾಗುತ್ತದೆ. ಪಟಾಕಿಯನ್ನು ಮಾರಾಟ ಮಾಡುವವರು ಕೇವಲ ಹಸಿರು ಪಟಾಕಿಯನ್ನು ಮಾತ್ರವೇ ಮಾರಾಟ ಮಾಡಬೇಕು. ರೆಡ್ ಕ್ರಾಕರ್ಸ್ ಮಾಡುವಂತಿಲ್ಲ ಎಂಬುದಾಗಿ ಸೂಚಿಸಿದರು.

ಡಿಜೆಗೆ ಅವಕಾಶವಿಲ್ಲ

ಗಣೇಶೋತ್ಸವ ಮೆರವಣಿಗೆ ವೇಳೆಯಲ್ಲಿ ಡಿಜೆ ಬಳಕೆಗೆ ಅವಕಾಶವಿಲ್ಲ. ಧ್ವನಿ ವರ್ಧಕ ಬಳಕೆ ಮಾಡಬೇಕು. ಅದಕ್ಕೂ ಮಾಲಿನ್ಯ ನಿಯಂತ್ರಣ ಮಂಡಳಿಯ ಮಿತಿಯನುಸಾರ ಬಳಕೆ ಮಾಡಬೇಕು. ಅದಕ್ಕಿಂತ ಹೆಚ್ಚು ಶಬ್ದ ಬರುವಂತ ಸ್ಪೀಕರ್ ಬಳಕೆ ಮಾಡಿದ್ರೇ ಸೌಂಡ್ ಸಿಸ್ಟಂ ಸೀಜ್ ಮಾಡಲಾಗುತ್ತದೆ. ಎಫ್ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾವುದು ಎಂದರು.

ಅಪರಾಧ ಹಿನ್ನಲೆಯುಳ್ಳವರ ಪರೇಡ್

ಗಣೇಶೋತ್ಸವ, ಈದ್ ಮಿಲಾದ್ ಹಬ್ಬಗಳ ಮುಂಜಾಗ್ರತಾ ಕ್ರಮವಾಗಿ ಅಪರಾಧ ಚಟುವಟಿಕೆಗಳ ಹಿನ್ನಲೆಯನ್ನು ಹೊಂದಿರುವವರನ್ನು ಪರೇಡ್ ನಡೆಸಿ, ಎಚ್ಚರಿಕೆ ನೀಡಲಾಗಿದೆ. ರೌಡಿ ಪರೇಡ್ ನಲ್ಲಿ ಯಾವುದೇ ಅಹಿತಕರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದೂ ಕಂಡು ಬಂದ್ರೇ ಕಾನೂನು ಕ್ರಮ ಕೈಗೊಳ್ಳುವುದಾಗಿ ಖಡಕ್ ವಾರ್ನಿಂಗ್ ಮಾಡಲಾಗಿದೆ ಎಂದು ಹೇಳಿದರು.

ಸಾಗರ ನಗರದಾಧ್ಯಂತ ಸಿಸಿಟಿವಿ ಕಣ್ಗಾವಲು

ಸಾಗರ ನಗರದಲ್ಲಿ ಮುಂಜಾಗ್ರತಾ ಕ್ರಮವಾಗಿ ಸಿಸಿಟಿವಿ ಕಣ್ಗಾವಲು ಇರಿಸಲಾಗಿದೆ. ಇಲಾಖೆಯ ವತಿಯಿಂದ ಹಲವೆಡೆ ಸಿಸಿಟಿವಿ ಹಾಕಲಾಗಿದೆ. ಇದಲ್ಲದೇ ಸಾರ್ವಜನಿಕ ವಲಯದ ಸಿಸಿಟಿವಿಗಳನ್ನು ಸುವ್ಯವಸ್ಥಿತ ರೀತಿಯಲ್ಲಿ ಇಡುವಂತೆ ಸೂಚಿಸಲಾಗಿದೆ. ನಾವು ಕುಳಿತಲ್ಲೇ ಎಲ್ಲಾ ಸಿಸಿ ಟಿವಿ ದೃಶ್ಯಾವಳಿಯನ್ನು ವೀಕ್ಷಿಸಬಹುದು. ಅದಕ್ಕಾಗಿ ನಮ್ಮಲ್ಲಿ ಮೊಬೈಲ್ ಆಪ್ ಕೂಡ ಇದೆ ಎಂದರು.

ನಗರದಲ್ಲಿ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಸಿಸಿಟಿವಿ ಕಣ್ಗಾವಲು ಇರಿಸಲಾಗಿದೆ. ಎಲ್ಲೆಡೆ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳು ಕಂಡು ಬಂದರೂ ತಕ್ಷಣವೇ ಪೊಲೀಸರು ಸ್ಥಳಕ್ಕೆ ತೆರಳಲಿದ್ದಾರೆ ಎಂದು ತಿಳಿಸಿದರು.

ಗಾಂಜಾ ಕೇಸ್ ನಿಯಂತ್ರಣ

ತಾಲ್ಲೂಕಿನಲ್ಲಿ ಗಾಂಜಾ ಪ್ರಕರಣಗಳಿಗೆ ಬ್ರೇಕ್ ಹಾಕುವ ಕೆಲಸ ಮಾಡಲಾಗುತ್ತಿದೆ. ಗಾಂಜಾ ಸೇವನೆಯ ನಂತ್ರ ಮೂರು ದಿನಗಳ ಕಾಲ ಅವರ ದೇಹದಲ್ಲಿ ಗಾಂಜಾ ಅಂಶ ಇರುತ್ತದೆ. ಪರೀಕ್ಷೆಯಲ್ಲಿ ದೃಢಪಟ್ಟರೇ, ಅಂತವರ ವಿರುದ್ಧ ಕೋಕಾ ಕಾಯ್ದೆಯಡಿ ದೂರು ದಾಖಲಿಸಿಕೊಂಡು, ಜೈಲಿಗೆ ಕಳಿಸೋ ಕೆಲಸ ಮಾಡಲಿದ್ದೇವೆ ಎಂಬುದಾಗಿ ಎಚ್ಚರಿಕೆ ನೀಡಿದರು.

ಸೋಷಿಯಲ್ ಮೀಡಿಯಾಗಳ ಮೇಲೆ ಹದ್ದಿನ ಕಣ್ಣು

ಸಾಮಾಜಿಕ ಮಾಧ್ಯಮಗಳನ್ನು ಬಳಕೆ ಮಾಡುವುದು ಹೆಚ್ಚಿದಂತೆ ಅದರ ಮೂಲಕ ಕೋಮು ಸೌಹಾರ್ಧ ಸೇರಿದಂತೆ ವಿವಿಧ ಅಪರಾಧ ಚಟುವಟಿಕೆಗಳಿಗೆ ಕಾರಣವಾಗುವಂತ ಕೆಲಸ ಮಾಡಲಾಗುತ್ತಿದೆ. ವಾಟ್ಸ್ ಆಪ್, ಫೇಸ್ ಬುಕ್, ಇನ್ ಸ್ಟಾಗ್ರಾಂ ಸೇರಿದಂತೆ ಸೋಷಿಯಲ್ ಮೀಡಿಯಾಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಎಲ್ಲವನ್ನು ಮಾನಿಟರ್ ಮಾಡಲಾಗುತ್ತಿರುತ್ತದೆ ಎಂದರು.

ಸಾಗರ ತಾಲ್ಲೂಕಿನಲ್ಲಿ ಸೋಷಿಯಲ್ ಮೀಡಿಯಾ ಮಾನಿಟರಿಂಗ್ ಟೀಂ ಇದೆ. ಅವರು ಪ್ರತಿಯೊಂದು ಸಾಮಾಜಿಕ ಮಾಧ್ಯಮಗಳ ಪೋಸ್ಟ್ ಗಳನ್ನು ಗಮನಿಸುತ್ತಾ ಇರುತ್ತಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಕಾನೂನು ಬಾಹಿರ ಪೋಸ್ಟ್ ಹಾಕಿದ್ರೇ ಅಂತವರ ವಿರುದ್ಧ ಕ್ರಮವಹಿಸೋ ಕೆಲಸ ಆಗಲಿದೆ ಎಂದು ಹೇಳಿದರು.

ಭಯ ಹುಟ್ಟಿಸುವಂತ ಪೋಸ್ಟ್ ಆಗಲಿ, ಮಾರಕಾಸ್ತ್ರಗಳನ್ನು ಹಿಡಿದುಕೊಂಡಿರುವಂತ ಪೋಟೋಗಳನ್ನು ಆಗಲೀ ಸಾಮಾಜಿಕ ಮಾಧ್ಯಮಗಳಲ್ಲಿ ಹಾಕುವಂತಿಲ್ಲ. ಹೀಗೆ ಮಾರಕಾಸ್ತ್ರವನ್ನು ಹಿಡಿದು, ಅದಕ್ಕೊಂದು ಟ್ಯಾಗ್ ಲೈನ್ ಕೊಟ್ಟು ಭಯ ಹುಟ್ಟಿಸುವಂತ ಪೋಸ್ಟ್ ಮಾಡಿದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಆತನಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನವನ್ನು ವಿಧಿಸಲಾಗಿದೆ ಎಂದರು.

ಸಾರ್ವಜನಿಕರು ಸೋಷಿಯಲ್ ಮೀಡಿಯಾಗಳಲ್ಲಿ ಮಾರಕಾಸ್ತ್ರಗಳ ಪ್ರದರ್ಶನ, ಕೋಮು ಸೌಹಾರ್ಧ ಕದಡುವಂತ ಪೋಸ್ಟ್ ಸೇರಿದಂತೆ ಸಮಾಜ ಘಾತುಕ ಚಟುವಟಿಕೆಗಳಿಗೆ ಸಂಬಂಧಿಸಿದಂತ ಪೋಟೋ, ಪೋಸ್ಟ್ ಹಾಕಿದ್ದು ಗಮನಿಸಿದ್ರೇ, ಪೊಲೀಸ್ ಇಲಾಖೆ ಗಮನಕ್ಕೆ ತರುವಂತೆ ಸಾಗರ ತಾಲ್ಲೂಕು ಡಿವೈಎಸ್ಪಿ ಗೋಪಾಲಕೃಷ್ಣ ನಾಯಕ್ ಮನವಿ ಮಾಡಿದರು.

ಅಪಘಾತಗಳ ತಡೆಗೆ ಹೆಚ್ಚು ಹೆಚ್ಚು ವಾಹನ ತಪಾಸಣೆ

ಭಾರತದಲ್ಲಿ ಶೇ.1ರಷ್ಟು ವಾಹನಗಳಿದ್ದರೇ, ಆಗುತ್ತಿರುವಂತ ಅಪಘಾತಗಳ ಸಂಖ್ಯೆ ಶೇ.10ರಷ್ಟು ಆಗಿದೆ. ಓರ್ವ ಬೈಕ್ ಸವಾರ ಅಪಘಾತದಲ್ಲಿ ಸಾವನ್ನಪ್ಪಿದರೇ ಆ ಪ್ರದೇಶಗಳಲ್ಲಿ ಮತ್ತೊಂದು ಅಪಘಾತ ಆಗದಂತೆ ತಡೆಗಟ್ಟುವ ನಿಟ್ಟಿನಲ್ಲಿ 100 ಬೈಕ್ ತಪಾಸಣೆ ನಡೆಸುವಂತ ಕೆಲಸವನ್ನು ಪೊಲೀಸ್ ಇಲಾಖೆ ಮಾಡುತ್ತದೆ. ಹೀಗಾಗಿ ಅಪಘಾತಗಳನ್ನು ತಡೆಯುವ ಹಿನ್ನಲೆಯಲ್ಲಿ ವಾಹನಗಳ ತಪಾಸಣೆಯನ್ನು ಸಾಗರ ತಾಲ್ಲೂಕಿನಾಧ್ಯಂತ ಹೆಚ್ಚುಗೊಳಿಸಲಾಗಿದೆ ಎಂಬುದಾಗಿ ತಿಳಿಸಿದರು.

2023ರಲ್ಲಿ ಸಾಗರ ತಾಲ್ಲೂಕಿನಲ್ಲಿ 44 ಮಂದಿ ಅಪಘಾತದಲ್ಲಿ ಸಾವನ್ನಪ್ಪಿದ್ದರೇ, 2024ರ ಇಲ್ಲಿಯವರೆಗೆ 33 ಮಂದಿ ಸಾವನ್ನಪ್ಪಿದ್ದಾರೆ. 2023ರಲ್ಲಿ 143 ಅಪಘಾತಗಳ ಕೇಸ್ ದಾಖಲಾಗಿದ್ದರೇ, 2024ರಲ್ಲಿ 107 ದಾಖಲಾಗಿದ್ದಾವೆ. ಶೇ.90ರಷ್ಟು ಸಾವುಗಳು ಬೈಕ್ ಅಪಘಾತದಿಂದಲೇ ಸಂಭವಿಸಿದ್ದವು ಆಗಿದ್ದಾವೆ. ಬಹು ಮುಖ್ಯವಾಗಿ ಅನೇಕ ಬೈಕ್ ಸವಾರರು ಹೆಲ್ಮೆಟ್ ಧರಿಸದ ಕಾರಣ ಅಪಘಾತದ ವೇಳೆಯಲ್ಲಿ ಸಾವನ್ನಪ್ಪಿದ್ದಾರೆ ಎಂಬುದಾಗಿ ಮಾಹಿತಿ ನೀಡಿದರು.

ಕುಡಿದು ಚಾಲನೆ ಮಾಡಿದ್ರೇ ಕೇಸ್, ಫೈನ್ ಫಿಕ್ಸ್

ಸಾಗರ ತಾಲ್ಲೂಕಿನ ಡ್ರಂಗ್ ಅಂಡ್ ಡ್ರೈವ್ ತಪಾಸಣೆ ಹೆಚ್ಚು ಮಾಡಲಾಗುತ್ತಿದೆ. ಕುಡಿದು ವಾಹನ ಚಾಲನೆ ವೇಳೆ ಸಿಕ್ಕಿಬಿದ್ದರೇ ದುಬಾರಿ ದಂಡವನ್ನು ತೆರಬೇಕಾಗುತ್ತದೆ. ಎರಡನೇ ಬಾರಿಗೆ ಪುನರಾವರ್ತನೆಯಾದ್ರೇ ಡಿಎಲ್ ರದ್ದು ಸೇರಿದಂತೆ ಮತ್ತಷ್ಟು ಕಾನೂನಿನ ಕುಣಿಕೆಗೆ ಸಿಲುಕಬೇಕಾಗುತ್ತದೆ. ಯಾವುದೇ ವಾಹನ ಸವಾರರು ಕುಡಿದು ವಾಹನ ಚಾಲನೆ ಮಾಡದಂತೆ ಮನವಿ ಮಾಡಿದರು.

ಸಾಗರ ತಾಲ್ಲೂಕಿನಲ್ಲಿ 2023ರಲ್ಲಿ ಸಂಚಾರ ನಿಯಮ ಉಲ್ಲಂಘನೆ ಸೇರಿದಂತೆ ವಿವಿಧ ಕಾರಣಗಳಿಂದ ವಾಹನ ಸವಾರರ ವಿರುದ್ಧ 6990 ಕೇಸ್ ದಾಖಲು ಮಾಡಲಾಗಿದೆ. 2024ರಲ್ಲಿ 2500 ಕೇಸ್ ಬುಕ್ ಮಾಡಲಾಗಿದೆ. ಇವುಗಳಲ್ಲಿ 2023ರಲ್ಲಿ ಕುಡಿದು ವಾಹನ ಚಾಲನೆ ಮಾಡಿದ್ದಕ್ಕೆ 38, 2024ರಲ್ಲಿ 19 ಕೇಸ್ ದಾಖಲಿಸಲಾಗಿದೆ ಎಂದರು.

ನಾವು ಅನಗತ್ಯವಾಗಿ ವಾಹನ ಸವಾರರ ವಿರುದ್ಧ ಕೇಸ್ ಹಾಕುತ್ತಿಲ್ಲ. ಹೆಲ್ಮೆಟ್ ಹಾಕಿ, ಲೈಸೆನ್ಸ್ ಇದ್ದೂ, ಇನ್ಸೂರೆನ್ಸ್ ಇದ್ದರೇ ಯಾವುದೇ ಕ್ರಮವಿಲ್ಲ. ಆದರೇ ನಿಯಮ ಮೀರಿ ವಾಹನ ಚಲಾಯಿಸುವವರ ವಿರುದ್ಧ ದೂರು ದಾಖಲಿಸಿ, ದಂಡ ವಿಧಿಸಲಾಗುತ್ತಿದೆ ಎಂದು ಹೇಳಿದರು.

ಗಾಂಜಾ ಕೇಸ್ ನಿಯಂತ್ರಣ

ಸಾಗರ ತಾಲ್ಲೂಕಿನಲ್ಲಿ ಗಾಂಜಾ ಪ್ರಕರಣಗಳಿಗೆ ಕಡಿವಾಣ ಹಾಕಲಾಗುತ್ತಿದೆ. 2023ರಲ್ಲಿ 14 ಕೇಸ್ ದಾಖಲಾಗಿದ್ದರೇ, 2024ರಲ್ಲಿ 11 ಪ್ರಕರಣ ದಾಖಲಾಗಿದ್ದಾವೆ. ಸಾಗರ ಹೊರ ವಲಯಗಳಲ್ಲಿ ಅಪರಾಧ ಚಟುವಟಿಕೆಗಳ ನಿಯಂತ್ರಣಕ್ಕೆ ಕ್ರಮವಹಿಸಲಾಗುತ್ತಿದೆ ಎಂದರು.

ಹೋಟೆಲ್ ಗಳಲ್ಲಿ 10 ನಿಮಿಷ ಮಾತ್ರವೇ ವಿದ್ಯಾರ್ಥಿಗಳು ಇರೋದಕ್ಕೆ ಅವಕಾಶ ನೀಡಿ

ಹೋಟೆಲ್ ಗಳಲ್ಲಿ ವಿದ್ಯಾರ್ಥಿಗಳು ಹೆಚ್ಚು ಹೊತ್ತು ಇರುವಂತಿಲ್ಲ. ನಗರದ ಹೋಟೆಲ್ ಒಂದರಲ್ಲಿ ಕುಳಿತು ಆನ್ ಲೈನ್ ಗೇಮ್ ಆಡುತ್ತಿರುವುದು ಗಮನಕ್ಕೆ ಬಂದಿದೆ. ಇದು ಮರುಕಳಿಸಿದ್ರೇ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ವಿದ್ಯಾರ್ಥಿಗಳಿಗೆ ಹೋಟೆಲ್ ನವರು 10 ನಿಮಿಷ ಮಾತ್ರವೇ ಇರುವುದಕ್ಕೆ ಅವಕಾಶ ನೀಡಬೇಕು. ಊಟ, ತಿಂಡಿ ಸೇವಿಸಲು ಮಾತ್ರವೇ ಅವಕಾಶ. ಅದರ ಹೊರತಾಗಿ ಹೋಟೆಲ್ ನಲ್ಲಿ ಹೆಚ್ಚುಹೊತ್ತು ಇರೋದು ಕಂಡು ಬಂದ್ರೇ, ಅಂತಹ ಹೋಟೆಲ್ ಮಾಲೀಕರ ವಿರುದ್ಧ ಎಫ್ಐಆರ್ ದಾಖಲಿಸುವುದಾಗಿ ತಿಳಿಸಿದರು.

ಬಾರ್, ರೆಸ್ಟೋರೆಂಟ್ ಮಾಲೀಕರು ಅಷ್ಟೇ ಅಪ್ರಾಪ್ತರಿಗೆ ಮದ್ಯ ಸರಬರಾಜು ಮಾಡಬಾರದು. ನೀಡಿದ್ದು ತಿಳಿದು ಬಂದ್ರೇ ಅವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಗಣೇಶೋತ್ಸವಕ್ಕೆ ಅನುಮತಿಗಾಗಿ ಏಕಗವಾಕ್ಷಿ ಕೌಂಟರ್ ಆರಂಭ

ನಗರದ ವಿವಿಧ ಭಾಗಗಳಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವ ಸಂಬಂಧ ಆಯೋಜಕರು ಅರ್ಜಿಯನ್ನು ಸಲ್ಲಿಸುತ್ತಿದ್ದಾರೆ. ತಹಶೀಲ್ದಾರ್ ಕಚೇರಿ, ನಗರ ಸಭೆಯಲ್ಲಿ ಗಣೇಶೋತ್ಸವಕ್ಕೆ ಅನುಮತಿಗಾಗಿ ಏಕಗವಾಕ್ಷಿ ಕೌಂಟರ್ ತೆರೆಯಲಾಗುತ್ತಿದೆ. ಈಗಾಗಲೇ 12 ಅರ್ಜಿಗಳು ಸಲ್ಲಿಕೆಯಾಗಿದ್ದು, ಇವುಗಳಲ್ಲಿ ವಿವಿಧ ಕಾರಣಗಳಿಂದ 5 ಅರ್ಜಿಗಳನ್ನು ರಿಜೆಕ್ಟ್ ಮಾಡಲಾಗಿದೆ ಎಂದರು.

ಬೆಂಕಿ, ವಿದ್ಯುತ್ ಅವಘಡವಾದ್ರೇ ಆಯೋಜಕರನ್ನೇ ಹೊಣೆ

ಗಣೇಶ ಮೂರ್ತಿಯನ್ನು ಕೂರಿಸುವ ವೇಳೆಯಲ್ಲಿ ಪೆಂಡಾಲ್ ಹಾಕಲಾಗುತ್ತದೆ. ಸಪ್ಲೇಯರ್ಸ್ ಗಳು ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗದಂತೆ ವ್ಯವಸ್ಥೆ ಮಾಡಬೇಕು. ಪೆಂಡಾಲ್ ಗೆ ಬಳಕೆ ಮಾಡುವಂತ ಕಬ್ಬಿಣದ ಕಂಬಳಿಗೆ ವಿದ್ಯುತ್ ಪ್ರವಹಿಸದಂತೆ ಎಚ್ಚರಿಕೆ ವಹಿಸಬೇಕು. ಒಂದು ವೇಳೆ ವಿದ್ಯುತ್, ಬೆಂಕಿ ಅವಘಡಗಳು ಸಂಭವಿಸಿದ್ರೇ ಆಯೋಜಕರು, ಪೆಂಡಾಲ್ ಹಾಕಿದವರಿಬ್ಬರ ವಿರುದ್ಧವೂ ಎಫ್ಐಆರ್ ದಾಖಲಿಸುವುದಾಗಿ ಎಚ್ಚರಿಸಿದರು.

ವರದಿ: ಉಮೇಶ್ ಮೊಗವೀರ, ಸಾಗರ

ಸರ್ಕಾರಿ ಶಾಲಾ ಮಕ್ಕಳೊಂದಿಗೆ ಮಧ್ಯಾಹ್ನದ ಬಿಸಿಯೂಟ ಸವಿದ ‘ಶಿಕ್ಷಣ ಸಚಿವ ಮಧು ಬಂಗಾರಪ್ಪ’

BREAKING: ಬೆಂಗಳೂರಲ್ಲಿ ‘ಗೌರಿ-ಗಣೇಶ ಹಬ್ಬ’ಕ್ಕೆ ‘ಪೊಲೀಸ್ ಇಲಾಖೆ’ಯಿಂದ ಮಾರ್ಗಸೂಚಿ ಪ್ರಕಟ: ಇವುಗಳ ಪಾಲನೆ ಕಡ್ಡಾಯ

ಬ್ಯಾಂಕ್ ಗ್ರಾಹಕರೇ ಗಮನಿಸಿ : `ಸೆಪ್ಟೆಂಬರ್’ ತಿಂಗಳಲ್ಲಿ ಬ್ಯಾಂಕುಗಳಿಗೆ 15 ದಿನ ರಜೆ!Bank Holidays

Share. Facebook Twitter LinkedIn WhatsApp Email

Related Posts

ALERT : ಪಾಕಿಸ್ತಾನದಿಂದ ಸೈಬರ್ ದಾಳಿ ಸಾಧ್ಯತೆ : ಸಾರ್ವಜನಿಕರಿಗೆ ಪೊಲೀಸ್ ಆಯುಕ್ತರಿಂದ ಎಚ್ಚರಿಕೆ ಸಂದೇಶ| WATCH VIDEO

12/05/2025 8:50 AM1 Min Read

ALERT : ಪಾಕಿಸ್ತಾನದಿಂದ ಸೈಬರ್ ದಾಳಿ ಸಾಧ್ಯತೆ : ಸಾರ್ವಜನಿಕರಿಗೆ ಪೊಲೀಸ್ ಆಯುಕ್ತರಿಂದ ಮಹತ್ವದ ಪ್ರಕಟಣೆ.!

12/05/2025 7:16 AM1 Min Read

BREAKING : ರಾಜ್ಯದಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ : ಲಾರಿ ಡಿಕ್ಕಿಯಾಗಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವು.!

12/05/2025 7:09 AM1 Min Read
Recent News

BREAKING : ಕಾಲಿವುಡ್ ಖ್ಯಾತ ನಟ `ವಿಶಾಲ್’ ಆರೋಗ್ಯದಲ್ಲಿ ಏರುಪೇರು : ಆಸ್ಪತ್ರೆಗೆ ದಾಖಲು | Actor Vishal Hospitalized

12/05/2025 9:07 AM

BIG NEWS : `RCB’ ಗೆ ಬಿಗ್ ಶಾಕ್ : ಸ್ಟಾರ್ ಆಟಗಾರ ಟೂರ್ನಿಯಿಂದ ಔಟ್ | IPL 2025

12/05/2025 9:02 AM

ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿಗೆ ಸಾಮಾಜಿಕ ಜಾಲತಾಣದಲ್ಲಿ ನಿಂದನೆ. ಬೆಂಬಲಕ್ಕೆ ನಿಂತ IAS, IPS ಸಂಘಟನೆಗಳು

12/05/2025 9:00 AM

ALERT : ಪಾಕಿಸ್ತಾನದಿಂದ ಸೈಬರ್ ದಾಳಿ ಸಾಧ್ಯತೆ : ಸಾರ್ವಜನಿಕರಿಗೆ ಪೊಲೀಸ್ ಆಯುಕ್ತರಿಂದ ಎಚ್ಚರಿಕೆ ಸಂದೇಶ| WATCH VIDEO

12/05/2025 8:50 AM
State News
KARNATAKA

ALERT : ಪಾಕಿಸ್ತಾನದಿಂದ ಸೈಬರ್ ದಾಳಿ ಸಾಧ್ಯತೆ : ಸಾರ್ವಜನಿಕರಿಗೆ ಪೊಲೀಸ್ ಆಯುಕ್ತರಿಂದ ಎಚ್ಚರಿಕೆ ಸಂದೇಶ| WATCH VIDEO

By kannadanewsnow5712/05/2025 8:50 AM KARNATAKA 1 Min Read

ಬೆಂಗಳೂರು : ಭಾರತ-ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆ ಪಾಕ್ ಸೈಬರ್ ದಾಳಿ ನಡೆಸುವ ಸಾಧ್ಯತೆ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸ್…

ALERT : ಪಾಕಿಸ್ತಾನದಿಂದ ಸೈಬರ್ ದಾಳಿ ಸಾಧ್ಯತೆ : ಸಾರ್ವಜನಿಕರಿಗೆ ಪೊಲೀಸ್ ಆಯುಕ್ತರಿಂದ ಮಹತ್ವದ ಪ್ರಕಟಣೆ.!

12/05/2025 7:16 AM

BREAKING : ರಾಜ್ಯದಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ : ಲಾರಿ ಡಿಕ್ಕಿಯಾಗಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವು.!

12/05/2025 7:09 AM

BREAKING : ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ `ರಾಕೇಶ್ ಪೂಜಾರಿ’ ನಿಧನ | Rakesh Poojary passes away

12/05/2025 6:59 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.