ಚಿತ್ರದುರ್ಗ: ಜಿಲ್ಲೆಯ ಮುರುಘಾ ಮಠದ ಡಾ.ಶಿವಮೂರ್ತಿ ಶಿವಾಚಾರ್ಯರ ವಿರುದ್ಧದ ಪೋಕ್ಸೋ ಕೇಸ್ ಸಂಬಂಧ, ಸಂತ್ರಸ್ತೆಯಾಗಿದ್ದಂತ ಬಾಲಕಿ, ಇದೀಗ ಮನೆಯಿಂದ ನಾಪತ್ತೆಯಾಗಿರೋದಾಗಿ ತಿಳಿದು ಬಂದಿದೆ.
ಮುರುಘಾ ಶ್ರೀ ಪೋಕ್ಸೋ ಕೇಸ್ ಪ್ರಕರಣದ ಸಂತ್ರಸ್ತ ಬಾಲಕಿ ಚಿಕ್ಕಪ್ಪನ ಮನೆಯಿಂದ ನಾಪತ್ತೆಯಾಗಿದ್ದಾರೆ. ಈ ಹಿನ್ನಲೆಯಲ್ಲಿ ಮಹಿಳಾ ಠಾಣೆಗೆ ಸಂತ್ರಸ್ತೆ ಬಾಲಕಿಯ ಚಿಕ್ಕಪ್ಪ ದೂರು ನೀಡಿದ್ದಾರೆ. ಮೇ.24ರಂದು ಠಾಣೆಯಲ್ಲಿ ನಾಪತ್ತೆ ಕೇಸ್ ಅನ್ನು ಅವರ ಚಿಕ್ಕಪ್ಪ ದಾಖಲಿಸಿದ್ದಾರೆ.
ಮೈಸೂರಿನ ಒಡನಾಡಿ ಸಂಸ್ಥೆಯಿಂದ ಸಂತ್ರಸ್ತೆ ಚಿಕ್ಕಪ್ಪ ಮುರುಘಾ ಶ್ರೀಗಳ ಬೆಂಬಲಿಗರಿಂದ ಒತ್ತಡಕ್ಕೆ ಒಳಗಾಗಿದ್ದಾರೆ. ಸಂತ್ರಸ್ತ ಬಾಲಕಿಗೆ ಒತ್ತಡ ಹೇರಲಾಗಿದೆ. ಈ ಬಗ್ಗೆ ಪೋಲೀಸರು, ಸಿಡಬ್ಲ್ಯೂಸಿ ಎದುರು ಬಾಲಕಿ ಅಳಲು ತೋಡಿಕೊಂಡಿದ್ದಾರೆ. ಬಾಲಕಿ ಅಳಲು ತೋಡಿಕೊಂಡಿದ್ದಾರೆಂದು ಒಡನಾಡಿ ಸಂಸ್ಥೆಯವರು ಮಾಹಿತಿ ಇದೆ ಎಂದಿದ್ದಾರೆ ಎನ್ನಲಾಗಿದೆ.
BREAKING: BBMP ಶಾಲಾ, ಕಾಲೇಜು ಶಿಕ್ಷಕರ ನೇಮಕಾತಿ ಗುತ್ತಿಗೆ ರದ್ದು: ರಾಜ್ಯ ಸರ್ಕಾರ ಆದೇಶ
BREAKING: ದೆಹಲಿ ಗಲಭೆ ಪ್ರಕರಣ: ‘ಉಮರ್ ಖಾಲಿದ್’ಗೆ ಜಾಮೀನು ನಿರಾಕರಿಸಿದ ಕೋರ್ಟ್ | Delhi Riots conspiracy case