ಬೆಂಗಳೂರು: ಶಿವಮೊಗ್ಗದ ಲಕ್ಕಿಕೊಪ್ಪ ಅರಣ್ಯ ಪ್ರದೇಶದಲ್ಲಿ ಕಳ್ಳಬೇಟೆ, ಮರಗಳವು ಪ್ರಕರಣವನ್ನು ಅರಣ್ಯ ಸಚಿವ ಈಶ್ವರ್ ಖಂಡ್ರೆ ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಕುರಿತಂತೆ ಮೂರು ದಿನಗಳಲ್ಲಿ ತನಿಖೆ ನಡೆಸಿ ವರದಿ ನೀಡುವಂತೆ ಆದೇಶಿಸಿದ್ದಾರೆ.
ಇಂದು ಈ ಕುರಿತಂತೆ ಆದೇಶ ಹೊರಡಿಸಿರುವಂತ ಅವರು, ಶಿವಮೊಗ್ಗ ಜಿಲ್ಲೆ, ಶಿವಮೊಗ್ಗ ತಾಲೂಕು ಲಕ್ಕಿನಕೊಪ್ಪ ಅರಣ್ಯ ಪ್ರದೇಶದಲ್ಲಿ ನಿರಂತರವಾಗಿ ಕಳ್ಳ ಬೇಟೆ ನಡೆಯುತ್ತಿದೆ, ಮರಗಳವು ಆಗುತ್ತಿದೆ ಎಂದು ಮಾಧ್ಯಮದಲ್ಲಿ ವರದಿ ಆಗಿದ್ದು, ಈ ಬಗ್ಗೆ ಸಿಸಿಎಫ್ ದರ್ಜೆಯ ಅಧಿಕಾರಿಯಿಂದ ಖುದ್ದು ಪರಿಶೀಲನೆ ನಡೆಸಿ, ಮೂರು ದಿನಗಳ ಒಳಗಾಗಿ ವರದಿ ಸಲ್ಲಿಸುವಂತೆ ದಿ.28.09.2025ರ ಟಿಪ್ಪಣಿ ಸಂಖ್ಯೆ ಅಜೀಪ/1725/2025-26ರಲ್ಲಿ ಸೂಚಿಸಿದ್ದಾರೆ.
ಈ ಮಧ್ಯೆ ಲಕ್ಕಿನಕೊಪ್ಪ ಪ್ರದೇಶದಲ್ಲಿ ಕೆಲವು ಪ್ರಭಾವಿಗಳು ಅರಣ್ಯ ಭೂಮಿ ಒತ್ತುವರಿ ಮಾಡಿರುವುದಾಗಿ ಈ ಕಚೇರಿಗೆ ಸ್ಪಷ್ಟ ಮಾಹಿತಿ ಬಂದಿದ್ದು, ಕಳ್ಳಬೇಟೆ ತನಿಖೆಯ ಜೊತೆಗೆ ಒತ್ತುವರಿ ಕುರಿತಂತೆಯೂ ಸಮಗ್ರ ತನಿಖೆ ನಡೆಸಿ ಒತ್ತುವರಿ ಆಗಿದ್ದಲ್ಲಿ ಅಥವಾ ಅರಣ್ಯ ಭೂಮಿಯನ್ನು ಅಕ್ರಮವಾಗಿ ಮಂಜೂರು ಮಾಡಿದ್ದಲ್ಲಿ ಸೂಕ್ತ ಕ್ರಮ ಜರುಗಿಸಲು ಮತ್ತು ಒತ್ತುವರಿಯ ಸಂಪೂರ್ಣ ವರದಿಯನ್ನು ಸಲ್ಲಿಸಲು ಸೂಚಿಸಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ…, ಸಂಪಾದಕರು
ಮೈಸೂರು ದಸರಾದ ರೀತಿಯಲ್ಲಿ ಮಂಡ್ಯದ ಕಾವೇರಿ ಆರತಿ ವಿಶ್ವವಿಖ್ಯಾತ ಹೊಂದಬೇಕು: ಸಚಿವ ಎನ್.ಚಲುವರಾಯಸ್ವಾಮಿ
GST ಕಡಿತದ ನಂತರ ಬೆಲೆಗಳನ್ನು ಕಡಿಮೆ ಮಾಡದ ‘ಇ-ಕಾಮರ್ಸ್ ಕಂಪನಿ’ಗಳನ್ನು ಕೇಂದ್ರ ಸರ್ಕಾರ ತರಾಟೆ