ಬೆಂಗಳೂರು: ಪ್ರಧಾನಿ ಮಗ ಮುಖ್ಯಮಂತ್ರಿ ಆಗುವುದು ದೊಡ್ಡ ವಿಚಾರವಲ್ಲ. ಅದೇ ಒಬ್ಬ ರೈತನ ಮಗ ಉಪ ಮುಖ್ಯಮಂತ್ರಿ ಆಗುವುದು ದೊಡ್ಡವಿಚಾರ ಎಂಬುದಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಪರವಾಗಿ, ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಗೆ ಶಾಸಕ ಪ್ರದೀಪ್ ಈಶ್ವರ್ ಟಾಂಗ್ ನೀಡಿದ್ದಾರೆ.
ಈ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದಂತ ಅವರು, ಕುಮಾರಸ್ವಾಮಿ ಅವರೇ, ಪ್ರಧಾನಮಂತ್ರಿಯ ಮಗ ಮುಖ್ಯಮಂತ್ರಿ ಆಗುವುದು ದೊಡ್ಡ ವಿಚಾರವಲ್ಲ, ಕನಕಪುರದ ರೈತನ ಮಗ ಉಪ ಮುಖ್ಯಮಂತ್ರಿ ಆಗುವುದು ದೊಡ್ಡ ವಿಚಾರ ಅಂತ ಹೆಚ್.ಡಿಕೆಗೆ ತಿರುಗೇಟು ನೀಡಿದ್ದಾರೆ.
ಹಿಂದುಳಿದ ವರ್ಗದ ವ್ಯಕ್ತಿ ಮುಖ್ಯಮಂತ್ರಿ ಆಗಿರುವುದನ್ನು, ನಿಮ್ಮ ಸಮುದಾಯದ ವ್ಯಕ್ತಿ ಉಪ ಮುಖ್ಯಮಂತ್ರಿ ಆಗಿರುವುದನ್ನು ಸಹಿಸಿಕೊಳ್ಳಲು ನಿಮ್ಮಿಂದ ಆಗುತ್ತಿಲ್ಲ ಎಂಬುದಾಗಿ ವಾಗ್ಧಾಳಿ ನಡೆಸಿದ್ದಾರೆ.
ಭ್ರಷ್ಟರೆಲ್ಲರೂ ಸೇರಿ ಭ್ರಷ್ಟಾಚಾರದ ವಿರುದ್ಧ ಪಾದಯಾತ್ರೆ ಆರಂಭಿಸಿದ್ದಾರೆ ಎಂಬುದಾಗಿ ಶಾಸಕ ಪ್ರದೀಪ್ ಈಶ್ವರ್ ಕಿಡಿಕಾರಿದ್ದಾರೆ.
ಕುಮಾರಸ್ವಾಮಿ ಅವರೇ, ಪ್ರಧಾನಮಂತ್ರಿಯ ಮಗ ಮುಖ್ಯಮಂತ್ರಿ ಆಗುವುದು ದೊಡ್ಡ ವಿಚಾರವಲ್ಲ, ಕನಕಪುರದ ರೈತನ ಮಗ ಉಪ ಮುಖ್ಯಮಂತ್ರಿ ಆಗುವುದು ದೊಡ್ಡ ವಿಚಾರ.
ಹಿಂದುಳಿದ ವರ್ಗದ ವ್ಯಕ್ತಿ ಮುಖ್ಯಮಂತ್ರಿ ಆಗಿರುವುದನ್ನು, ನಿಮ್ಮ ಸಮುದಾಯದ ವ್ಯಕ್ತಿ ಉಪ ಮುಖ್ಯಮಂತ್ರಿ ಆಗಿರುವುದನ್ನು ಸಹಿಸಿಕೊಳ್ಳಲು ನಿಮ್ಮಿಂದ ಆಗುತ್ತಿಲ್ಲ.
ಭ್ರಷ್ಟರೆಲ್ಲರೂ ಸೇರಿ… pic.twitter.com/PDcjFoKoch
— Karnataka Congress (@INCKarnataka) August 3, 2024
ಮುಡಾ ಹಗರಣ: ಬಿಜೆಪಿ ಸರ್ಕಾರವೇ ನಿವೇಶನ ಹಂಚಿಕೆ ಮಾಡಿ ಈಗ ಅವರೇ ಆರೋಪ: ವಿ.ಎಸ್ ಉಗ್ರಪ್ಪ ಕಿಡಿ
BIG UPDATE: ಬೆಂಗಳೂರಲ್ಲಿ ಮೆಟ್ರೋ ರೈಲು ಹಳಿಗಳ ಮೇಲೆ ಹಾರಿ ಆತ್ಮಹತ್ಯೆಗೆ ಮಾಡಿಕೊಂಡ ವ್ಯಕ್ತಿ ಗುರುತು ಪತ್ತೆ