ಗುಜರಾತ್‌: ಇಂದು ಬೆಳಗ್ಗೆ 10 ಗಂಟೆಗೆ ಗುಜರಾತ್‌ನ ಏಕತಾ ನಗರದಲ್ಲಿ ʻಪರಿಸರ ಸಚಿವರ ರಾಷ್ಟ್ರೀಯ ಸಮ್ಮೇಳ(National Conference of Environment Ministers)ʼನವನ್ನು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಪ್ರಧಾನ ಮಂತ್ರಿಗಳ ಕಚೇರಿ (PMO) ಪ್ರಕಾರ, ರಾಜ್ಯ ಕ್ರಿಯಾ ಯೋಜನೆಗಳ ಮೂಲಕ ಪ್ಲಾಸ್ಟಿಕ್ ಮಾಲಿನ್ಯದ ನಿರ್ಮೂಲನೆ ಮುಂತಾದ ವಿಷಯಗಳ ಕುರಿತು ಕೆಲವು ಉತ್ತಮ ನೀತಿಗಳನ್ನು ರೂಪಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಹೆಚ್ಚಿನ ಹೊಂದಾಣಿಕೆ ಬೆಳೆಸಲು ಈ ಸಮ್ಮೇಳನವನ್ನು ಆಯೋಜಿಸಲಾಗಿದೆ.

ನಾಶವಾಗುತ್ತಿರುವ ಭೂಮಿ ಮತ್ತು ವನ್ಯಜೀವಿ ಸಂರಕ್ಷಣೆಗೆ ವಿಶೇಷ ಒತ್ತು ನೀಡುವ ಮೂಲಕ ಅರಣ್ಯ ಪ್ರದೇಶವನ್ನು ಹೆಚ್ಚಿಸಲು ಇದು ಗಮನಹರಿಸುತ್ತದೆ. ಎರಡು ದಿನಗಳ ಸಮ್ಮೇಳನವು ಸೆಪ್ಟೆಂಬರ್ 23-24 ರಂದು ನಡೆಯಲಿದೆ.

ಈ ವರ್ಷ ಜುಲೈನಿಂದ ಆಯ್ದ ಏಕ-ಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು ನಿಷೇಧಿಸಲಾಗಿದ್ದು, ಪ್ಲಾಸ್ಟಿಕ್ ಮಾಲಿನ್ಯದ ವಿರುದ್ಧದ ಹೋರಾಟದಲ್ಲಿ ಭಾರತವು ಜಾಗತಿಕವಾಗಿ ಮುಂದುವರೆದಿದೆ. ಏಕ-ಬಳಕೆಯ ಪ್ಲಾಸ್ಟಿಕ್‌ಗಳು ಸಾಮಾನ್ಯವಾಗಿ ಒಂದೇ ಬಾರಿ ಬಳಸಿದ ನಂತರ ಎಸೆಯಲ್ಪಡುತ್ತವೆ. ಇವುಗಳನ್ನು ಮರುಬಳಕೆ ಮಾಡಲು ಸಾಧ್ಯವಿಲ್ಲ. ಪ್ರಪಂಚದಾದ್ಯಂತ ಪ್ಲಾಸ್ಟಿಕ್‌ನ ಭಾರೀ ಬಳಕೆಯು ಸಾಕಷ್ಟು ಅಪಾಯಗಳನ್ನು ಉಂಟುಮಾಡಿದೆ. ಸರ್ಕಾರಗಳು ಮತ್ತು ವಿವಿಧ ಜಾಗತಿಕ ನಿಯಂತ್ರಣ ಸಂಸ್ಥೆಗಳು ಪ್ಲಾಸ್ಟಿಕ್‌ನ ಬಳಕೆಯನ್ನು ತಡೆಯಲು ಶ್ರಮಿಸುತ್ತಿವೆ.

BIGG NEWS : ಸಿಲಿಕಾನ್‌ ಸಿಟಿ ಜನರೇ ಎಚ್ಚರ..! BMTC ಬಸ್ಸಿನಲ್ಲಿ ಲೇಡಿಸ್ ಸೀಟ್‍ನಲ್ಲಿ ಕೂತು ಪ್ರಯಾಣಿಸಿದ್ರೆ ಬೀಳುತ್ತೆ ದುಬಾರಿ ದಂಡ | Ladies Seat

BREAKING NEWS: PFIಬ್ಯಾನ್‌ ಮಾಡುವ ನಿಟ್ಟಿನಲ್ಲಿ ಕೆಲಸ ನಡಯುತ್ತಿದೆ; ಶಂಕಿತ ಉಗ್ರರನ್ನು ಬಂಧಿಸಿದ ಪೊಲೀಸರಿಗೆ ಅಭಿನಂದನೆ- ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟನೆ

BIG NEWS: ಕಬಡ್ಡಿ ಆಟಗಾರರಿಗೆ ಶೌಚಾಲಯದಲ್ಲಿ ಊಟದ ವ್ಯವಸ್ಥೆ: ಸೂಕ್ತ ಕ್ರಮ ಕೈಗೊಳ್ಳುವಂತೆ ಕ್ರಿಕೆಟಿಗ ʻಶಿಖರ್ ಧವನ್ʼ ಒತ್ತಾಯ

Share.
Exit mobile version